Police Bhavan Kalaburagi

Police Bhavan Kalaburagi

Monday, June 17, 2013

GULBARGA DISTRICT REPORTED CRIME

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:ಶ್ರೀಮತಿ ವಿಜಯಲಕ್ಷ್ಮೀ ಗಂಡ ದೇವಿಂದ್ರ ಕಟ್ಟಿಮನಿ ಉ;ಸಹ ಶಿಕ್ಷಕಿ ಸಾ: ಬಸವೇಶ್ವರ ಕಾಲನಿ ಗುಲಬರ್ಗಾರವರು ನನ್ನ ಮದುವೆಯು ದಿನಾಂಕ:26-05-2011 ರಂದು ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಗ್ರಾಮದ ದೇವಿಂದ್ರ ಇತನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 50.000/- ರೂಪಾಯಿ 5 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡ ರಾಯಚೂರ ಜಿಲ್ಲೆಯ ಇಡಪ್ಪನೂರ ಪೌಡ್ರಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಗಂಡ ತನ್ನ ಅಣ್ಣನಾದ ತಿಪ್ಪಣ್ಣಾ ಇತನ ಮಾತು ಕೇಳಿ ನನಗೆ ವರದಕ್ಷಿಣೆ ಕಿರುಕುಳ ಕೊಟ್ಟು ನನಗೆ ಮನೆಯಿಂದ ಹೊರಗೆ ಹಾಕಿರುತ್ತಾನೆ. ದಿನಾಂಕ:10-06-2013 ರಂದು ನನ್ನ ಗಂಡ ಪೋನ ಮಾಡಿ ನಾನು ರಾಯಚೂರನಿಂದ ಗುಲಬರ್ಗಾಕ್ಕೆ ವರ್ಗಾವಣೆಯಾಗಿ ಬರುವದಕ್ಕಾಗಿ ಸೇವಾ ಪ್ರಮಾಣ ಪತ್ರ ಅವಶ್ಯಕತೆ ಇರುತ್ತದೆ ಅಂತಾ ಹೇಳಿ  ಜಗತ ಸರ್ಕಲ್ ದ ಗುಡ್ಡಾಂಬೆ ಶೋರುಮ್ ಹತ್ತಿರ ಬರುವಂತೆ ಹೇಳಿದ್ದರಿಂದ ದಿನಾಂಕ:11.06.2013 ರಂದು ಸಾಯಂಕಾಲ್ 6.30 ಗಂಟೆಗೆ ಜಗತ ಸರ್ಕಲ್ ದ ಗುಡ್ಡಾಂಬೆ ಶೋರುಮ್ ಹತ್ತಿರ ಹೋದಾಗ ನಮ್ಮ ತಂಗಿಯ ಮದುವೆಗಾಗಿ 5 ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ನನ್ನ ಅಣ್ಣ ತಿಪ್ಪಣ್ಣಾ ನೀನು ಹಣ ಕೊಡುವುದಿದ್ದರೆ ನಿನಗೆ ಖಲಾಸ ಮಾಡು ಅಂತಾ ಹೇಳಿದ್ದಾರೆ ನಾನು ಹಣವಿಲ್ಲಾ ಅಂತಾ ಹೇಳದಕ್ಕೆ ನನ್ನ ಗಂಡ ಕಪಾಳಕ್ಕೆ ತಲೆ, ಕಿವಿ ಮೇಲೆ  ಹೊಡೆದಿದ್ದಾನೆ, ಕೆಳಗೆ ಹಾಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ನನಗೆ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡ ಮತ್ತು ಭಾವ ತಿಪ್ಪಣ್ಣಾ ರವರ ಮೇಲೆ ಕಾನೂನು ಕ್ರಮ್ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:36/2013 ಕಲಂ 498(ಎ).323.506 109 ಸಂಗಡ 34 ಐ.ಪಿ.ಸಿ 3&4 ಡಿ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ. 

No comments: