ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ, ಮಹ್ಮದ ರಫೀಕ ತಂದೆ ಮಹಿಬೂಬ ಅಲಿ, ಸಾಃ ಮೋಮಿನಪೂರ ಗುಲಬರ್ಗಾ ರವರು ನನ್ನ ಮಗ ಮಹ್ಮದ ನಬಿ ವಯಾ|| 5 ವರ್ಷ ಈತನು ತನ್ನ ತಾಯಿಯೊಂದಿಗೆ ದಿನಾಂಕ:17-06-2013 ರಂದು ರಾತ್ರಿ 8-30 ಗಂಟೆಗೆ ಮೋಮಿನಪೂರ ದಿವಾನ್ ಕಟ್ ಪೀಸ್ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಒಂದು ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಮೋಮಿನಪೂರ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2013 ಕಲಂ 279, 338 ಐಪಿಸಿ ಸಂ. 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment