ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:ದಿನಾಂಕ:20-06-2013 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನನ್ನ ಮಗ ಬಾಬುಮಿಯಾ ತನ್ನ ಹೀರೊ ಹೊಂಡಾ ಪ್ಯಾಸನ್ ಮೋಟರ್ ಸೈಕಲ್ ನಂ ಕೆಎ-39 ಎಚ್-9334 ನೇದ್ದರ ಮೇಲೆ ಹಲಕಟ್ಟಾಗೆ ಬರುತ್ತಿರುವಾಗ ಚೌವಾಣ ದಾಬಾ ಹತ್ತಿರ ರಸ್ತೆಯ ಮೇಲೆ ಲಾರಿ ನಂ ಕೆಎ-32 ಬಿ-2343 ನೇದ್ದರ ಚಾಲಕ ನಿರ್ಲಕ್ಷತನದಿಂದ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಯಾವುದೇ ಮುನ್ಸೂಚನೆ ಲೈಟ ಹಾಕದೇ ನಿಲ್ಲಿಸಿದ್ದರಿಂದ ನನ್ನ ಮಗ ತನ್ನ ಮೋಟಾರು ಸೈಕಲದೊಂದಿಗೆ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ತಲೆಗೆ, ಮುಖಕ್ಕೆ ಎದೆಗೆ ಬಾರಿ ರಕ್ತಗಾಯವಾಗಿತ್ತು, ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ರಾತ್ರಿ 11.00 ಗಂಟೆಗೆ ತೆಗೆದುಕೊಂಡು ಬಂದಾಗ ವೈದ್ಯರು ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದರು. ನನ್ನ ಮಗ ಸಾವಿಗೆ ಲಾರಿಯ ಚಾಲಕನೇ ಕಾರಣನನಾಗಿರುತ್ತಾನೆ. ಅಂತಾ ಶ್ರೀ,ಮತಿ ಸಾಹೇಬಿ ಗಂಡ ಬಾಸುಮಿಯಾ ಮಲ್ಲೆವಾಲೆ ಸಾ|| ಹಲಕಟ್ಟಾ ದರ್ಗಾದ ಹತ್ತಿರ ಹಲಕಟ್ಟ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2013 ಕಲಂ 279,283,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment