ಅಪಹರಣ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ 24/06/2013 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ 2೦ ವರ್ಷದ ಮಗಳಿಗೆ ಇವಳಿಗೆ ದಿನಾಂಕ:14/06/2013 ರಂದು ಬೆಳಿಗ್ಗೆ 5:00 ಗಂಟೆಗೆ ತನ್ನ ತಾಯಿಯೊಂದಿಗೆ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಸೋಮಶೇಖರ, ಶಿವಾನಂದ, ಪದ್ಮಣ್ಣ, ಯಲ್ಲಾಲಿಂಗ, ಬೀರಪ್ಪ ಇವರೆಲ್ಲರು ಕೂಡಿಕೊಂಡು ಬಂದು ಅವರಲ್ಲಿ ಸೋಮಶೇಖರ ಮತ್ತು ಶಿವಾನಂದ ಇವರು ನನ್ನ ಮಗಳ ಬಾಯಿಯನ್ನು ಒತ್ತಿ ಹಿಡಿದು ಮೋಟಾರು ಸೈಕಲ್ ಮೇಲೆ ಕೂಡಿಸಿಕೊಳ್ಳುತ್ತಿರುವದನ್ನು ಕಂಡು ಅವಳಿಗೆ ಬೀಡಿ ಅಂತಾ ನನ್ನ ಹೆಂಡತಿ ಚೀರಾಡುತ್ತಿರುವಾಗ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಯುವತಿಯ ತಂದೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:63/2013 ಕಲಂ 147. 366. 504. ಸಂಗಡ 149 ಐಪಿಸಿ ಮತ್ತು 3 (1) (X)ಎಸ್.ಸಿ ಎಸ್.ಟಿ ಪಿ.ಎ ಆಕ್ಟ್-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment