ಅಟೋ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:07/06/2013 ರಂದು ಕೆಎ-32 ಎ-6272 ನೇದ್ದು ಅಟೋ ಗುಲಬರ್ಗಾ ಬಸ್ ನಿಲ್ದಾಣದ ಮುಂದುಗಡೆ ಇರುವ ಆಟೋ ಸ್ಟ್ಯಾಂಡದಲ್ಲಿ ಪಾಳಿ ಪ್ರಕಾರ ಆಟೋವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದ ಒಳಗಡೆ ಇರುವ ಶೌಚಾಲಯಕ್ಕೆ ಹೋಗಿದ್ದು, ಮರಳಿ ಬಂದು ನೋಡುವಷ್ಟರಲ್ಲಿ ಅಂದರೆ 5-10 ನಿಮಿಷದಲ್ಲಿ ಆಟೋ ಕಾಣಿಸಲಿಲ್ಲ, ಬಸ್ ಸ್ಟ್ಯಾಂಡ ಹತ್ತಿರ ಹುಡಕಾಡಿ ಸ್ಟ್ಯಾಂಡದಲ್ಲಿರುವ ಆಟೋ ಚಾಲಕರಿಗೆ ವಿಚಾರಿಸಿದ್ದರು ಆಟೋ ಸಿಗಲಿಲ್ಲ. 7:30 ಪಿಎಮ್ ಸುಮಾರಿಗೆ ಆಟೋ ಕಳೆದ ಬಗ್ಗೆ ಆಟೋದ ಮಾಲಿಕರಾದ ವಸಂತಕುಮಾರ ಇವರಿಗೆ ಪೋನ ಮಾಡಿ ಮಾಹಿತಿ ತಿಳಿಸಿ ಅಂದಿನಿಂದ ಇಲ್ಲಿಯವರೆಗೆ ನಾನು ಮತ್ತು ಆಟೋದ ಮಾಲಿಕ ವಸಂತಕುಮಾರ ಇಬ್ಬರು ಕೂಡಿಕೊಂಡು ನಮ್ಮ ಪರಿಚಯಸ್ಥರಲ್ಲಿ, ಬಸ್ ನಿಲ್ದಾಣದ ಆಟೋ ಚಾಲಕರಲ್ಲಿ ಎಲ್ಲಾಕಡೆ ಹೂಡಕಾಡಿದರು ಆಟೋ ಸಿಕ್ಕಿರುವದಿಲ್ಲ . ಆಟೋರಿಕ್ಷಾ ನಂ; ಕೆಎ-32 ಎ-6272 ಇಂಜಿನ ನಂ: AEMBNL50313 ಚೆಸ್ಸಿ ನಂ: MD2AA24ZZNWL31818 ಒಟ್ಟು ಅ.ಕಿ 42,000/- ಬೆಲೆಬಾಳುವ ಆಟೋ ರಿಕ್ಷಾವನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ಆಟೋರಿಕ್ಷಾವನ್ನು ಪತ್ತೆ ಮಾಡಿ ಕೋಡಬೇಕು ಅಂತಾ ಸುನೀಲಕುಮಾರ ತಂದೆ ಭಗವಾನ ಸಾಳೊಂಕಿ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment