ಹಲ್ಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:02-06-2013 ರಂದು ಬೆಳಗ್ಗೆ 7-30 ಗಂಟೆ ಸುಮಾರಿಗೆ ಮನೆಯಿಂದ ನಮ್ಮೂರ ಬಸಣ್ಣ ದೇವರ ಗುಡಿಗೆ ಹೊರಟಿದ್ದಾಗ ಗುಡಿಯ ಹತ್ತಿರ ಕುಳಿತ್ತಿರುವ ಜಗಪ್ಪ ತಂದೆ ಸಂಗಣ್ಣಾ ಬುಸನೂರ ಇವರು ಕರೆದು ಮಾತನಾಡಿಸುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಭೀಮರಾಯ ಪಾಂಪೊರ ಇತನು ನನಗೆ ವಾರೆ ಗಣ್ಣಿನಿಂದ ನೋಡುತ್ತಿದ್ದನು. ಆಗ ನಾನು ಹೀಗೇಕೆ ನೋಡುತ್ತಿದ್ದಿ ಅಂತ ಕೇಳಿದಕ್ಕೆ ಅವನು ಅವಾಚ್ಯವಾಗಿ ಬೈದು ನೀನು ಕಾಂಗ್ರೇಸ್ ದವನು ನಾನು ಬಿ.ಜೆ.ಪಿ. ದವವನು ನಮಗೆ ಯ್ಯಾಕೆ ಮಾತಾಡುತ್ತಿ ಅಂತ ಬೈದು ಕೈಯಿಂದ ಹೊಡೆದು ಜಗಳ ಮಾಡುತ್ತಿದ್ದನು. ಅಷ್ಟರಲ್ಲಿ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಆತನ ಮಕ್ಕಳಾದ ಹಣಮಂತ ತಂದೆ ಭೀಮರಾಯ ಪಾಂಪೊರ ಮತ್ತು ನರಸಪ್ಪ ತಂದೆ ಭೀಮರಾಯ ಪಾಂಪೊರ ರವರು ಬಂದು ಹೊಡೆದು ರಕ್ತ ಹಾಗೂ ಗುಪ್ತಗಾಯ ಮಾಡಿರುತ್ತಾರೆ ಅಂತ ಶ್ರೀ.ಜೀಕಪ್ಪ ತಂದೆ ಬಸಣ್ಣಾ ಗುಳ್ಳೇರ, ಸಾ:ನಾಚವಾರ ಗ್ರಾಮ ಇವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:138/2013 ಕಲಂ, 341, 323, 324, 504 ಸಂಗಡ 34 ಐಪಿಸಿ ಪ್ರಕಾರಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment