ಅಪಹರಣ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ನನ್ನ 19 ವರ್ಷದ ಮಗಳಿಗೆ ಶೈಲೇಶ ತಂದೆ ಶ್ರಾವಣ ಗಾಜರೆ ಸಾ:ಕಮಲಾಪೂರ ಈತನು ಪರಿಚಯ ಮಾಡಿಕೊಂಡಿದ್ದು, ಆತನು ನಮ್ಮ ಪಕ್ಕದ ಮನೆಯವರಾದ ಮಾರುತಿ ತಂದೆ ಕೃಷ್ಣಾಜಿ ಡೋರ ಇವರ ಅಕ್ಕನ ಮಗನಾಗಿರುತ್ತಾನೆ. ನನ್ನ ಮಗಳ ಪರಿಚಯ ಮಾಡಿಕೊಂಡ ನಂತರ ಶೈಲೇಷ ಇತನು ನಮ್ಮ ಮನೆಯ ಪಕ್ಕದಲ್ಲಿಯೇ ಬಂದು ವಾಸಿಸುತ್ತಿದ್ದು, ಶೈಲೇಷ ಈತನು ನನ್ನ ಮಗಳನ್ನು ಮದುವೆಯಾಗುವುದಾಗಿ ತಿಳಿಸಿದಾಗ ನಾವು ಕುಟುಂಬದವರೆಲ್ಲರೂ ಚರ್ಚಿಸಿ ಮದುವೆಗೆ ಜಾತಿ ಅಡ್ಡ ಬರುತ್ತದೆ ಮದುವೆ ಬೇಡ ಅಂತಾ ಹೇಳಿರುತ್ತೆವೆ. ದಿನಾಂಕ:09/06/2013 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಶೈಲೇಷ ಇತನು ಒಂದು ಕಾರನ್ನು ತೆಗೆದುಕೊಂಡು ಬಂದು ನನ್ನ ಮಗಳಿಗೆ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮುಂಬೈಯ ಕುರ್ಲಾದಲ್ಲಿರುವ ತನ್ನ ಮನೆಯಲ್ಲಿಟ್ಟಿರುತ್ತಾನೆ. ನನ್ನ ಮೊಬೈಲಗೆ ಕರೆ ಮಾಡಿ ಈ ವಿಷಯದ ಕುರಿತು ನೀವು ದೂರು ನೀಡಿದರೆ ನಿಮ್ಮನ್ನು ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಇದರಿಂದ ನನ್ನ ಮಗಳ ಜೀವಕ್ಕೆ ಅಪಾಯವಾದರೆ ಶೈಲೇಷನೆ ಕಾರಣನಾಗುತ್ತಾನೆ. ಕಾರಣ ನನ್ನ ಮಗಳನ್ನು ಅಪಹರಿಸಿಕೊಂಡು ಹೋದ ಶೈಲೇಷನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ಹುಡಗಿಯ ತಂದೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2013 ಕಲಂ 366 , 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:16-06-2013 ರಂದು ಸಾಯಂಕಾಲ 4-40 ಗಂಟೆ ಸುಮಾರಿಗೆ ನನಗೆ ಪರಿಚಯವಿರುವ ಸತೀಶರೆಡ್ಡಿ ತಂದೆ ವೆಂಕಟರೆಡ್ಡಿ ಮಾದವಾರ ಇವರು ಫೋನ ಮಾಡಿ ತಿಳಿಸಿದ್ದೆನೆಂದರೆ,ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಮತ್ತು ಮೋಹನರೆಡ್ಡಿ ಹೂವಿನಬಾವಿ ಸಾ:ಬಟಗೆರಾ(ಕೆ) ಇಬ್ಬರೂ ಕೂಡಿ ಸೇಡಂ ಪಟ್ಣದ ಸೇಡಂ-ಗುಲಬರ್ಗಾ ರೋಡಿನ ಜಿ.ಕೆ ಕ್ರಾಸದಿಂದ ಚಿಂಚೋಳಿ ಕ್ರಾಸ್ ಕಡೆಗೆ ಹೋಗುತ್ತಿರುವಾಗ ನಮ್ಮ ಮುಂದುಗಡೆ ಟ್ರಾಕ್ಟರ್ ನಂ- ಕೆಎ-32 ಟಿಎ-1368/1369 ನೇದ್ದರ ಚಾಲಕ ತನ್ನ ಟ್ರಾಕ್ಟರ್ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಚಿಂಚೋಳಿ ಕ್ರಾಸ್ ಕಡೆಯಿಂದ ಸೇಡಂಕ್ಕೆ ರಸ್ತೆ ಎಡಬದಿಯಿಂದ ನಿಧಾನವಾಗಿ ಬರುತ್ತಿದ್ದ ನಿಮ್ಮ ಅಳಿಯನಾದ ಸಂಜೀವರೆಡ್ಡಿ ಹೈಯಾಳ ಎನಿಫಿಲ್ಡ ವಾಹನ ನಂ-ಕೆಎ-32 ಇಸಿ-2669 ನೇದ್ದಕ್ಕೆ ಟ್ರಾಕ್ಟರ್ ಚಾಲಕ, ರಸ್ತೆಯ ತಿರುವಿನಲ್ಲಿ ಸಂಜೀವರೆಡ್ಡಿ ಇವರ ಎನಿಫಿಲ್ಡ ವಾಹನಕ್ಕೆ ಡಿಕ್ಕಿ ಪಡೆಯಿಸಿ ಅಪಘಾತಪಡಿಸಿದ್ದರಿಂದ ಸಂಜೀವರೆಡ್ಡಿ ಇವರಿಗೆ ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ ಮತ್ತು ಎಡಗಾಲಿನ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು, ಗುಪ್ತಾಂಗಗಳಿಗೆ ಒಳಪೆಟ್ಟು ಆಗಿರುತ್ತದೆ. ಅಪಘಾತ ಪಡಿಸಿದ ಚಾಲಕ ಟ್ರಾಕ್ಟರ್ ಅಲ್ಲೇ ಬಿಟ್ಟು ಓಡಿ ಹೋದನು. ನಾನು ಮತ್ತು ಮೋಹನರೆಡ್ಡಿ ಹೂವಿನಬಾವಿ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಸೇಡಂ ಸರಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಮಾರ್ಗ ಮದ್ಯದಲ್ಲಿ 4-45 ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ತಂಗಿ ಪ್ರಮಿಳಾ ಇಬ್ಬರೂ ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಅಳಿಯ ಸಂಜೀವರೆಡ್ಡಿ ಹೈಯಾಳ ವಯ:38 ವರ್ಷ, ಈತನು ರಸ್ತೆ ಅಪಘಾತದಲ್ಲಿ ಭಾರಿಗಾಯಹೊಂದಿ ಮೃತಪಟ್ಟಿದ್ದು ಖಚಿತವಿದ್ದು ಕಾರಣ ಟ್ರಾಕ್ಟರ್ ದ್ದರ ಚಾಲಕನ ಮೇಲೆ ಕ್ರಮ ಜರುಗಿಸಬೇಕು ಅಂತ ಶ್ರೀ. ಸಿದ್ರಾಮರೆಡ್ಡಿ ತಂದೆ ಹಣಮರೆಡ್ಡಿ ಮಮ್ಮಾಜಿ ಸಾ:ಹಂದರಕಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-142/2013 ಕಲಂ-279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಶರಣಪ್ಪ ತಂದೆ ಬಸವಣಪ್ಪ ಸಿಗರಕಂಟಿ ವಯ:48 ವರ್ಷ ಉ: ಒಕ್ಕಲುತನ ಜಾತಿ:ಲಿಂಗಾಯತ ಸಾ: ನಿಂಬಾಳ ತಾ: ಆಳಂದ ರವರು ಸುಮಾರು 8 ದಿವಸಗಳ ಹಿಂದೆ ನಮ್ಮಣ್ಣ ರಾಜಶೇಖರನ ಹೊಲದಲ್ಲಿ ನನ್ನ ತಮ್ಮನಾದ ಲಕ್ಷ್ಮಿಪುತ್ರ ಇನು ಹತ್ತು ದಿಂಡು (ಸಾಲು) ಬಿತ್ತನೆ ಮಾಡಿದ್ದರಿಂದ ದಿನಾಂಕ:12-06-2013 ರಂದು ರಾಜಶೇಖರ ಹೊಲಕ್ಕೆ ಬಂದು ಲಕ್ಷ್ಮೀಪುತ್ರನಿಗೆ ಏಕೆ ನನ್ನ ಹೊಲದಲ್ಲಿ ಬಿತ್ತನೆ ಮಾಡಿದ್ದಿ ಅಂತಾ ಕೇಳಿ ಬಿತ್ತನೆ ಮಾಡಿದ ತನ್ನ ಹೊಲದಲ್ಲಿ ರಾಜಶೇಖರನು ಗಳ್ಯಾ ಹೊಡೆಸಿದನು. ಈ ವಿಷಯದಲ್ಲಿ ನಮ್ಮ ತಮ್ಮಂದಿರು ಇತನದೆ ಕೈವಾಡವಿದೆ ಅಂತಾ ನನ್ನ ವಿರುದ್ದ ಮೈಮನಸ್ಸು ಮಾಡಿಕೊಂಡು ದಿನಾಂಕ:15/06/2013 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಅಶೋಕ ಈತನು ನನಗೆ ಹೊರಗೆ ಕರೆದಾಗ ನಾನು ಹೊರಗೆ ಬಂದು ನೋಡಲಾಗಿ ನನ್ನ ಇಬ್ಬರೂ ತಮ್ಮಂದಿರಾದ ಅಶೋಕ ತಂದೆ ಬಸವಣಪ್ಪ ಸಿಗರಕಂಟಿ, ಲಕ್ಷ್ಮೀಪುತ್ರ ತಂದೆ ಬಸವಣಪ್ಪ ಸಿಗರಕಂಟಿ ಹಾಗೂ ಇವರ ಹೆಂಡತಿಯರಾದ ಶ್ರೀದೇವಿ ಗಂಡ ಅಶೋಕ ಸಿಗರಕಂಟಿ,ಜಗದೇವಿ ಗಂಡ ಲಕ್ಷ್ಮೀಪುತ್ರ ಸಿಗರಕಂಟಿ ಸಾ:ಎಲ್ಲರೂ ನಿಂಬಾಳ ಮತ್ತು ನನ್ನ ತಂಗಿಯ ಮಗನಾದ ರಾಕೇಶ ತಂದೆ ವರದಾಶಂಕರ ದಿಂಡೂರೆ ಇವರೆಲ್ಲರೂ ಕೂಡಿ ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ,ಕಟ್ಟಿಗೆಯಿಂದ ಮತ್ತು ಕಬ್ಬಿಣದ ರಾಡಿನಿಂದ ಹೊಡೆ-ಬಡೆ ಮಾಡಿ ಗುಪ್ತಗಾಯ ಹಾಗೂ ರಕ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:51/2013 ಕಲಂ: 143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment