ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ, ಸಿದ್ದು ತಂದೆ ತಮ್ಮಣ್ಣಾ ಕುಂಬಾರ ಸಾಃ ಬೆಣ್ಣೂರ (ಬಿ) ತಾಃ ಚಿತ್ತಾಪೂರ ರವರು ನಾನು ದಿನಾಂಕ:24-06-2013 ರಂದು ಮಧ್ಯಾಹ್ನ 2-00 ಗಂಟೆಗೆ ಸಿ.ಟಿ. ಬಸ್ ಸ್ಟಾಂಡ ಕಡೆಯಿಂದ ಹೆಡ್ ಪೊಸ್ಟ ಆಫೀಸ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ19 ಎಮ್.ಬಿ-7134 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2013 ಕಲಂ, 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಶಾಂತಾಬಾಯಿ ಗಂಡ ರಾಜಶೇಖರ ಸಿಗರಕಂಠೀ ಸಾ: ನಿಂಬಾಳ ತಾ:ಆಳಂದ ಹಾ:ವಾ:ಸೋಲಾಪೂರ ರವರು ನಾನು ನನ್ನ ಗಂಡ ರಾಜಶೇಖರ ಹಾಗೂ ಮಕ್ಕಳು ಎಲ್ಲರೂ ನಿಂಬಾಳ ಬಿಟ್ಟು ಸೋಲಾಪೂರದಲ್ಲಿ ವಾಸವಾಗಿದ್ದು, ನಿಂಬಾಳದಲ್ಲಿರುವ ಹೊಲ ನೋಡಿಕೊಳ್ಳಲು ಆಗ್ಗಾಗ್ಗೆ ನಿಂಬಾಳಕ್ಕೆ ಹೋಗಿ ಬಂದು ಮಾಡುತ್ತೆವೆ ಸದರ ಹೊಲದ ಸಂಬಂಧವಾಗಿ ನಮ್ಮ ಮೈದುನನಾದ ಲಕ್ಷ್ಮೀಪುತ್ರ ಜಗಳ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:24/06/2013 ರಂದು 11:45 ಗಂಟೆಗೆ ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದಾಗ ನನ್ನ ಮೈದುನ ಲಕ್ಷ್ಮೀಪುತ್ರ ತಂದೆ ಬಸವಣಪ್ಪ ಸಿಗರಕಂಠಿ ಇತನು ಹೊಲದಲ್ಲಿ ಬಂದು ಬಿತ್ತನೆ ಮಾಡುತ್ತಿದ್ದನ್ನು ನಿಲ್ಲಿಸಿ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಈ ಹೊಲದಲ್ಲಿ ಬಂದರೆ ಸುಡುತ್ತೆನೆ ಅಂತಾ ಬೇದರಿಕೆ ಹಾಕಿರುತ್ತಾನೆ. ಮತ್ತು ಅವಮಾನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ: 53/2013 ಕಲಂ 323,324,341,354,447,504,506 ಐಪಿಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment