ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಸುಶಿಲಾಬಾಯಿ ಗಂಡ ಚಂದ್ರಕಾಂತ ಕಲಾಲ ಅವರಾದ (ಬಿ) ತಾ: ಜಿ: ಗುಲಬರ್ಗಾ ರವರು ನಾನು ಮತ್ತು ರವಿಕುಮಾರ ತಂದೆ ಸೋಮಶೇಖರ ವ: 13 ಜಾ: ಲಿಂಗಾಯತ ಸಾ: ಮಹಾಗಾಂವ ರವರು ದಿನಾಂಕ:25/06/2013 ರಂದು ಮಧ್ಯಾಹ್ನ ಆಟೋ ಟಂ ಟಂ ನಂಬರ ಕೆಎ-32 ಬಿ-8613 ನೇದ್ದರಲ್ಲಿ ಅವರಾದ (ಬಿ) ಗ್ರಾಮದಿಂದ ಕುಳಿತುಕೊಂಡು ಆಲಗೂಡ ಕ್ರಾಸ ಹತ್ತಿರ ಹೋಗುತ್ತಿರುವಾಗ ಟಂಟಂ ಚಾಲಕ ತನ್ನ ಟಂಟಂ ಅತೀವೇಗ ಅಲಕ್ಷತನದಿಂದ ನಡೆಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಟಂಟಂ ವೇಗದ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ನನಗೆ ಮತ್ತು ಅಟೋದಲ್ಲಿರುವ ಹುಡಗನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 319/2013 ಕಲಂ. 279 337 338 ಐಪಿಸಿ ಸಂ/ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ನನ್ನ ಗಂಡನ ಮನೆಯವರು ತವರು ಮನೆಯಿಂದ ಕಾರು ಖರೀದಿ ಮಾಡುವ ಕುರಿತು 1 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಾ ಅಂತಾ ಬಾತ ರೂಮಿನಲ್ಲಿ ಕರೆದುಕೊಂಡು ಕೈಯಿಂದ ಮತ್ತು ಬೆಲ್ಟದಿಂದ ಹೊಡೆ ಬಡೆ ಮಾಡುತ್ತಿದ್ದರು. ನನ್ನ ಗಂಡನು ಕುಡಿದ ಅಮಲಿನಲ್ಲಿ ಬಂದು ಹಣ ತೆಗೆದುಕೊಂಡು ಬಾ ಹೇಳಿ ಕೈಯಿಂದ ಬೆಲ್ಟ್ ದಿಂದ ಹೊಡೆ ಬಡೆ ಮಾಡುತ್ತಿದ್ದು, ಎಷ್ಟು ಹೊಡೆ ಬಡಿ ಮಾಡಿದರೂ ತವರು ಮನೆಯಿಂದ ಹಣ ತರಿಸದಿದಕ್ಕೆ ಅಗಷ್ಟ ತಿಂಗಳಲ್ಲಿ ರಮಜಾನ ಹಬ್ಬ ಇನ್ನೂ 12 ದಿವಸಗಳು ಬಾಕಿ ಇರುವಾಗ ನನಗೆ ಮುಂಬೈ ಯಿಂದ ನನ್ನ ತವರು ಮನೆಗೆ ನನ್ನ ಮೈದನ ಸೈಯ್ಯದ ಮಹೆಬೂಬ ಇವರ ಜೊತೆಯಲ್ಲಿ ಕಳುಹಿಸಿಕೊಟ್ಟಿರು. ನನ್ನ ತಂದೆ ತಾಯಿಯವರು ನಮ್ಮ ಗಂಡನ ಮನೆಯವರಿಗೆ ಪೋನ ಮಾಡಿ ನನ್ನ ಮಗಳಿಗೆ ಯಾಕೇ ಹೊಡೆ ಬಡಿ ಮಾಡುತ್ತಿದ್ದೀರಿ ವರದಕ್ಷಿಣೆ ರೂಪದಲ್ಲಿ ಎಲ್ಲಾ ಕೊಟ್ಟಿರುತ್ತೇವೆ. ಇನ್ನೂ 1 ಲಕ್ಷ ರೂ. ಎಲ್ಲಿಂದ ಕೊಡಬೇಕು ಅಂತಾ ಕೇಳಿದರು. ನಾನು ಮತ್ತು ನನ್ನ ತಂದೆ, ತಾಯಿ ಎಲ್ಲರೂ ಕೂಡಿಕೊಂಡು 2012 ನೇ ಸಾಲಿನ ಅಕ್ಟೋಬರ ತಿಂಗಳಲ್ಲಿ ಮುಂಬೈಯಲ್ಲಿ ವಾಸವಾಗಿರುವ ನನ್ನ ಗಂಡನ ಮನೆಗೆ ಕರೆದುಕೊಂಡು ಹೋದಾಗ ನನ್ನ ತಂದೆ, ತಾಯಿಗೆ ಅವಾಚ್ಯವಾಗಿ ಬೈದು 1 ಲಕ್ಷ ರೂ.ತೆಗೆದುಕೊಂಡು ಬಂದರೆ ನಿನ್ನ ಮಗಳಿಗೆ ಮನೆಯಲ್ಲಿಟ್ಟು ಕೊಳ್ಳುತ್ತೇವೆ ಇಲ್ಲದಿದ್ದರೆ ಮನೆಯಲ್ಲಿ ಬರಬೇಡಿರಿ ಅಂತಾ ಬೈದು ಹೊರೆಗೆ ಹಾಕಿರುತ್ತಾರೆ. ಅಲ್ಲದೇ ದಿನಾಂಕ 14-04-2013 ರಂದು ನನ್ನ ಗಂಡ ಇರಫಾನ ಈತನು ಮನೆಗೆ ಬಂದು ಕಾರು ಖರೀದಿ ಕುರಿತು 1 ಲಕ್ಷ ರೂ. ತೆಗೆದುಕೊಂಡು ಬಾ ಅಂತಾ ಹೇಳಿ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಶ್ರೀಮತಿ ತಾಯಬಾ ಸುಲ್ತಾನ ಗಂಡ ಸೈಯ್ಯದ ಇರಫಾನ ಸಾ|| ಬುಲಂದ ಪರವೇಜ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 320/2013 ಕಲಂ 143, 147, 148, 498 (ಎ), 504, 506 ಸಂ. 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಅಲ್ಲಾವೂದ್ದಿನ ತಂದೆ ಸುಲ್ತಾನ ಪಟೇಲ ಸಾ:ಸ್ಲಂ ಬೋರ್ಡ ಕಾಲೋನಿ ಜೆ.ಟಿ.ಟಿ.ಸಿ ಕಾಲೇಜ ಹಿಂದುಗಡೆ ಸಂತ್ರಾಸವಾಡಿ ಗುಲಬರ್ಗಾ ರವರು ನನ್ನ ಅಕ್ಕ ಪರವೀನ ಬೇಗಂ ವಯಾ||35 ವರ್ಷ ಇವಳನ್ನು ಶೇಖ ಮಹಿಬೂಬ ಹಜ್ ಕಮಿಟಿ ನಯಾಮೊಹಲ್ಲಾ ಗುಲಬರ್ಗಾ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆವೆ. ಅವಳಿಗೆ ನದೀಮ ವಯಾ|| 8 ವರ್ಷದ ಮಗನಿರುತ್ತಾನೆ. ನಮ್ಮ ಅಕ್ಕ ಪರವೀನ ಬೇಗಂ ಮತ್ತು ಅವಳ ಗಂಡ ಹಾಗೂ ಮಗ ಕೂಡಿಕೊಂಡು ಚಾಂದಬೀಬಿ ಬಿ.ಎಡ್.ಕಾಲೇಜ ಎದರುಗಡೆ ಮಿಲ್ಲತ ನಗರ ಕಾಲೂನಿ ಹೊರ ಬಡಾವಣೆಯಲ್ಲಿ ಒಂದು ರೂಮಿನಲ್ಲಿ ವಾಸವಾಗಿರುತ್ತಾರೆ. ನಮ್ಮ ಭಾವ ರೇಶನ ತಂದುಕೊಡುತ್ತಿರಲಿಲ್ಲಾ , ಮನೆಗೆ ಕಿರಾಣಿ ಸಾಮಾನು ತೆಗೆದುಕೊಂಡು ಬಾ ಅಂತಾ ಅಂದರೆ ಹೊಡೆ ಬಡಿ ಮಾಡುತ್ತಿದ್ದ, ಹಾಗೂ ಕುತ್ತಿಗೆ ಒತ್ತಲು ಪ್ರಯತ್ನಿಸಿರುತ್ತಾನೆ ಅಂತಾ ಈಗ 8 ದಿವಸಗಳ ಹಿಂದೆ ನನ್ನ ಮನಗೆ ಬಂದಾಗ ನನ್ನ ಅಕ್ಕಾ ಹೇಳಿದಳು. ಆದಾಗ್ಯೂ ಕೂಡಾ ಸಹಿಸಿಕೊಂಡು ಹೋಗು ಅಂತಾ ತಿಳಿ ಹೇಳಿದ್ದೆ. ನಿನ್ನೆ ದಿನಾಂಕ.24/6/2013 ರಂದು ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಮ್ಮ ಅಕ್ಕನ ಮನೆಗೆ ಹೋಗಿದ್ದು ನಮ್ಮ ಅಕ್ಕನ ಜೋತೆ ನಮ್ಮ ಭಾವ ಜಗಳ ತೆಗೆದು ಬೈಯುತ್ತಾ ನಮ್ಮ ಅಕ್ಕಳಿಗೆ ಎಳೆದಾಡಿ ಹೋಡೆಯುತ್ತಿದ್ದಾಗ ನಾನು ಬಿಡಿಸಿಕೊಂಡಿದ್ದು , ನಮ್ಮ ಭಾವನಿಗೆ ತಿಳುವಳಿಕೆ ಹೇಳಲು ಹೋದಾಗ ಅವನು ಕೇಳಿಲಿಲ್ಲಾ ,“ತೇರಿ ಬಹೇನ ಬಹುತಾ ಬಾತ ಕರತೆ, ಮೇರೆ ಸಾತ ಜಗಳ ಕರತೆ ಇಸಕೂ ನಹಿ ಚೋಡತು ಖತಮ ಕರದಾಲತೂ ಅಂತಾ ಸಿಟ್ಟಿನಲ್ಲಿ ಒದರಾಡುತಿದ್ದನು ಆಗ ನಾನು ಇನ್ನೊಮ್ಮೆ ಇದೇ ರೀತಿ ಜಗಳ ಮಾಡಿದರೆ ನಿನ್ನ ಮೇಲೆ ಪೊಲೀಸ್ ಕೇಸ ಮಾಡಿಸುತ್ತೇನ ಅಂತಾ ನಮ್ಮ ಭಾವನಿಗೆ ಹೇಳಿ ಜಗಳ ಬಿಡಿಸಿರುತ್ತೇನ. ನಂತರ ನಮ್ಮ ಅಕ್ಕಳಿಗೆ ತಿಳುವಳಿಕೆ ಹೇಳಿ ಊಟ ಮಾಡಿ ಮಲಗಿಕೊಳ್ಳಿ ಅಂತಾ ಹೇಳಿ ರಾತ್ರಿ ನಮ್ಮ ಮನಗೆ ವಾಪಸ ಹೋಗಿರುತ್ತೇನೆ.ರಾತ್ರಿ 9-00 ಗಂಟೆಯಿಂದ ದಿನಾಂಕ:25-6-2013 ರಂದು ಬೆಳಗ್ಗೆ 6-00 ಗಂಟೆಯ ಮದ್ಯದ ಅವಧಿಯಲ್ಲಿ ಶೇಖ ಮಹಿಬೂಬ ಇತನು ನಮ್ಮ ಅಕ್ಕ ಪರವೀನ ಬೇಗಂ ಇವಳನ್ನು ಮನಗೆ ಸಾಮಾನು ತಂದು ಕೋಡುವ ವಿಷಯದಲ್ಲಿ ಜಗಳ ಮಾಡಿ ಕುತ್ತಿಗೆ ಒತ್ತಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 321/2013 ಕಲಂ. 302 ಐಪಿಸಿ ನೆದ್ದರ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment