Police Bhavan Kalaburagi

Police Bhavan Kalaburagi

Thursday, June 27, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಪುತಳಾಬಾಯಿ ಗಂಡ ಫೀರಪ್ಪಾ ಸಾ:ಜೋಗೂರು ರವರು ನನ್ನ ಗಂಡ ಪೀರಪ್ಪಾ ಇತನು ನಮ್ಮೂರ ಸಾಯಬಣ್ಣಾ ಮ್ಯಾಕೇರಿ ಇವನ ಅಕ್ಕಳಾದ ಶರಣಮ್ಮ ಇವಳ 2 ಎಕರೆ ಜಮೀನನ್ನು ನಮ್ಮ ಗ್ರಾಮದ ಬಂಡಪ್ಪಾ ಗಾಣೂರ ಈತನು ಖರೀದಿ ಮಾಡಿದ್ದು, ನನ್ನ ಗಂಡ ಸಾಕ್ಷಿ ಇರುತ್ತಾನೆ. ದಿನಾಂಕ:26-06-2013 ರಂದು 10-00 ಗಂಟೆ ಸುಮಾರಿಗೆ ಸಾಯಬಣ್ಣಾ ಮ್ಯಾಕೇರಿ ಈತನು ಮೊಟಾರ ಸೈಕಲ ನಂ:ಕೆಎ-32 ಇಬಿ-6367 ನೇದ್ದರ ಮೇಲೆ ನನ್ನ ಗಂಡನಿಗೆ ಹಿಂದೆ ಕೂಡಿಸಿಕೊಂಡು ಗುಲಬರ್ಗಾಕ್ಕೆ ಹೋಗಿ ಹಣ ಕೊಟ್ಟ ಬಗ್ಗೆ ನೋಟರಿ ಮಾಡಿಸಿಕೊಂಡು ಬರಲು ಮನೆಯಿಂದ ಕರೆದುಕೊಂಡು ಹೋದರು. ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವಾಗ ಸಾಯಬಣ್ಣಾ ಈತನ ಮೋಟಾರ ಸೈಕಲ ಚಲಾಯಿಸಿ ಸಿರನೂರ ಗ್ರಾಮದ ನಂತರ ಗೀತಾಂಜಲಿ ಪ್ಯಾಕ್ಟರಿ ಹತ್ತಿರ ತಿರುವಿನಲ್ಲಿ ತನ್ನ ಮೊಟಾರ ಸೈಕಲ ನಂ:ಕೆಎ-32 ಇಬಿ-6367 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಆಯ ತಪ್ಪಿ ರಸ್ತೆಯ ಗುಟಗಲ್ಲಿಗೆ ಡಿಕ್ಕಿ ಪಡಿಸಿದ್ದರಿಂದ ಸಾಯಬಣ್ಣಾ ಈತನಿಗೆ ಭಾರಿರಕ್ತಗಾಯಗಳಾಗಿದ್ದು, ಹಿಂದೆ ಕುಳಿತ ನನ್ನ ಗಂಡ ಪೀರಪ್ಪಾ ಈತನಿಗೆ ತಲೆಗೆ ಮೈಯಲ್ಲಾ ಭಾರಿರಕ್ತಗಾಯವಾಗಿರುತ್ತದೆ,ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ದಾರಿಯ ಮಧ್ಯ ಪೀರಪ್ಪಾ ಈತನು ಮೃತಪಟ್ಟಿರುತ್ತಾನೆ, ಕಾರಣ ಸಾಯಬಣ್ಣ ಮ್ಯಾಕೇರಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2013 ಕಲಂ, 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ನನ್ನ ಸೋದರ ಸೊಸೆಯು ದಿನಾಂಕ:25/06/2013 ರಂದು ಮಧ್ಯಾಹ್ನ 2-00 ಗಂಟೆಗೆ ಹೊರಗಡೆ ಹೋಗಿ ಮನೆಗೆ ಮರಳಿ ಬರುತ್ತಿರುವಾಗ ಸೂರ್ಯಕಾಂತ ತಂದೆ ಮಾರುತಿ ಪಾಲಪೂರೆ ಇವನು ಜಬರದಸ್ತಿಯಿಂದ ಕೈ ಹಿಡಿದು ಹಿಡಿದುಕೊಂಡು ಹೋಗುತ್ತಿದ್ದಾಗ ಅವಳು ಬಿಡಿಸಿಕೊಂಡು ಮನೆಗೆ ಬಂದು ತಿಳಿಸಿದ್ದರಿಂದ ನಾವು ಅವರ ರವರ ಮನೆಗೆ ಹೋಗಿ ಸೂರ್ಯಕಾಂತ ಇತನು ಚುಡಾಯಿಸಿರುತ್ತಾನೆ ಅವನಿಗೆ ಬುದ್ದಿವಾದ ಹೇಳಿರಿ ಅಂತಾ ಸೂರ್ಯಕಾಂತನ ಹೆಂಡತಿಗೆ ಹೇಳಿ ಮರಳಿ ಮನೆಗೆ ಬಂದಿರುತ್ತೆವೆ. ಸಾಯಂಕಾಲ 6:30 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿರುವಾಗ ಸೂರ್ಯಕಾಂತ ತಂದೆ ಮಾರುತಿ ಪಾಲಪೂರೆ, ಸೋಮಲಿಂಗ ತಂದೆ ಭೀಮಶ್ಯಾ ಪಾಲಪೂರೆ, ಮಾರುತಿ ತಂದೆ ಭೀಮಶ್ಯಾ ಪಾಲಪೂರೆ, ದತ್ತಾ ತಂದೆ ಸೊಮಲಿಂಗ ಪಾಲಪೂರೆ, ಶರಣು ತಂದೆ ಸೋಮಲಿಂಗ ಪಾಲಪೂರೆ, ಸುಭಾಷ ತಂದೆ ಬಲಭೀಮ ಕೊಳಿ  ರವರು ನನ್ನ ಮನೆಯೊಳಗೆ ಬಂದು ಜಾತಿ ಎತ್ತಿ ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಮಾಡಿರುತ್ತಾರೆ ಅಂತಾ  ಶ್ರೀ. ಸೋಮಲಿಂಗ ಸಾ: ಹಿರೋಳಿ   ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:54/2013 ಕಲಂ:143,147,148,323,324,448,354,504,506 ಸಂಗಡ 149 ಐಪಿಸಿ. ಮತ್ತು 3(X),(XI) SC/ST P.A Act.1989.  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: