Police Bhavan Kalaburagi

Police Bhavan Kalaburagi

Thursday, June 6, 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:04/06/2013 ರಂದು ಮುಂಜಾನೆ 10:30 ಗಂಟೆ ಸುಮಾರಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಜಬ್ಬಾರ ಇತನು ಪೋನ ಮಾಡಿ ಗುಲಬರ್ಗಾ– ಸೇಡಂ ರಿಂಗ  ರೋಡಿಗೆ ಇರುವ ಮೇಜೆಸ್ಟೀಕ ಫಂಕ್ಷನ ಹಾಲ ಎದುರುಗಡೆ ಹನೀಪಾ ಗಂಡ ಮಹ್ಮದ ಹುಸೇನ ವಯಾ||65 ಸಾ|| ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರ ಶಹಾ ಶಾಲೆ ಹತ್ತಿರ ಗುಲಬರ್ಗಾ ಇವರು ಆಟೋದಿಂದ ಇಳಿದು ರೋಡ ಕ್ರಾಸ ಮಾಡುತ್ತಿರುವಾಗ ಖರ್ಗೆ ಪೆಟ್ರೋಲ ಪಂಪ ಕಡೆಯಿಂದ ಕಾರ ನಂ ಕೆಎ 29 ಎಮ್‌ 6311 ನೇದ್ದರ ಚಾಲಕ  ಕಾರನ್ನು ಅತೀ ವೇಗ ಅಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಹೊಡೆದು ಕಾರನ್ನು ಅಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ತಲೆಯ ಹಿಂದೆ ಬಾರಿರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಮಾತಾಡುವ ಸ್ಥಿತಿಯಲ್ಲಿರದೇ ಇರುವದರಿಂದ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮಾಡಿದ್ದು ಆಸ್ಪತ್ರೆಯವರು 20,000/- ರೂ ಗಳು ಕಟ್ಟಬೇಕು ಅಂತ ಹೇಳಿದ್ದರಿಂದ ನನ್ನ ಹತ್ತಿರ ಹಣ ಇಲ್ಲದೆ ಇರುವದರಿಂದ ಸರಕಾರಿ ಆಸ್ಪತ್ರೆಗೆ ಸಾಯಂಕಾಲ 4:45 ಗಂಟೆಯ ಸುಮಾರಿಗೆ ಸೇರಿಕೆ ಮಾಡಿರುತ್ತೇನೆ.  ಉಪಚಾರದಿಂದ ಗುಣ ಮುಖವಾಗದೆ ದಿನಾಂಕ:05/06/2013 ರಂದು ಮಧ್ಯರಾತ್ರಿ ಮೃತಪಟ್ಟಿರುತ್ತಾಳೆ ಅಂತ ಶ್ರೀ ನವಾಬ ತಂದೆ ಮಹ್ಮದ ಹುಸೇನ ಸಾ:ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರಶಹಾ ಶಾಲೆ ಹತ್ತಿರ ಗುಲಬರ್ಗಾ ರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 286/2013 ಕಲಂ 279, 304 (ಎ) ಐಪಿಸಿ ಸಂ. 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:05/06/2013 ರಂದು ಸಾಯಂಕಾಲ ಬೇಲೂರ (ಜೆ) ಸೀಮಾಂತರದಲ್ಲಿ ಬರುವ ಮಾಲಪೂರಿ ಕಂಕರ ಮಶೀನ ಹತ್ತಿರ ಇಸ್ಪೇಟ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಖಚಿತ ಬಾತ್ಮಿ ಮೇರೆಗೆ ಆನಂದರಾವ ಎಸ್ ಎನ್‌ ಪಿಎಸ್‌‌ಐ (ಕಾ&ಸು) ಗುಲ್ಬರ್ಗಾ ಗ್ರಾಮೀಣ ಠಾಣೆ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸಿರಾಜ ಅಹ್ಮದ ತಂದೆ ಮಹೆಬೂಬ ವ;36 ವರ್ಷ ಉ: ಮೆಕ್ಯಾನಿಕ ಸಾ: ಮಹೆಬೂಬ ನಗರ ಗುಲಬರ್ಗಾ , ಅಜ್ಮಲ ಅಹ್ಮದ ತಂದೆ ಎಕಬಾಲ ಅಹ್ಮದ ವ:37 ವರ್ಷ ಉ: ದಲ್ಲಾಳಿ ಕೆಲಸ ಸಾ: ಮಹೆಬೂಬ ನಗರ ಗುಲಬರ್ಗಾ, ಸೈಯ್ಯದ ಬಬಲೂ ತಂದೆ ಶಬ್ಬೀರ ಅಲಿ ವ:29 ವರ್ಷ ಉ: ಮೆಕ್ಯಾನಿಕ  ಕೆಲಸ ಸಾ: ತಾಜ ಫಂಕ್ಷನ ಹಾಲ ಹಿಂದೆ ಮಹೆಬೂಬ ನಗರ ಗುಲಬರ್ಗಾ,ಹೈದರಸಾಬ ತಂದೆ ಯಾಸೀನಸಾಬ ವ:53 ವರ್ಷ ಉ:ಹಣ್ಣಿನ ವ್ಯಾಪರ ಸಾ: ಬಿಲಾಲಬಾದ ಗುಲಬರ್ಗಾ,ಗುಲಾಮ ರಸೂಲ ತಂದೆ ಮಹ್ಮದ ನಬೀ ವ:39 ವರ್ಷ ಉ: ಬಟ್ಟೆ ವ್ಯಾಪರ ಸಾ: ಹಪ್ತ ಗುಮ್ಮಜ ಗುಲಬರ್ಗಾ ,ಸಾಜೀದ ಅಹ್ಮದ ತಂದೆ ಶಫೀ ಅಹ್ಮದ ವ:38 ವರ್ಷ ಉ;ಖಾಸಗಿ ಕೆಲಸ ಸಾ: ಸಂತ್ರಸವಾಡಿ ಗುಲಬರ್ಗಾ, ಅಮಜದ ತಂದೆ ಶಮ್ಮಶೀರ ಅಲಿ ವ:48 ವರ್ಷ ಉ:ವ್ಯಾಪರ ಸಾ:  ರೋಜಾ (ಬಿ) ಗುಲಬರ್ಗಾ, ಮಹ್ಮದ ಸಲೀಮ ತಂದೆ  ಮಹ್ಮದ ಬುರಾನ ವ:29 ವರ್ಷ ಉ: ವ್ಯಾಪರ ಸಾ: ಖಾಜ ಕಾಲನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿ ನಗದು ಹಣ 35640/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 287/2013 ಕಲಂ, 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕೊಲೆ ಪ್ರಕರಣ:

ಮುದೋಳ ಪೊಲೀಸ್ ಠಾಣೆ:ಲಚಮಪ್ಪಾ ತಂದೆ ಕಾಶಪ್ಪಾ ಕಾಳಾ, ಶಾಮಪ್ಪಾ ತಂದೆ ಬಿಚ್ಚಪ್ಪಾ, ಮಲ್ಲೇಶ ತಂದೆ ಬಸಪ್ಪಾ ಮೂರು ಜನರು ಕೂಡಿಕೊಂಡು  ದಿನಾಂಕ:05-06-2013 ರಂದು ಸಾಯಂಕಾಲ  4-30 ಗಂಟೆಯ ಸುಮಾರಿಗೆ ಮುಧೋಳ ಬಸ್ಸಸ್ಟ್ಯಾಂಡ ಪಕ್ಕದಲ್ಲಿರುವ ನಾಗೇಶ ತಂದೆ ಹಣಮಂತು ಇವರ ಪಾಸ್ಟ್ ಫುಡ್ ಹೋಟೆಲಿಗೆ ನಾಸ್ಟಾ ಮಾಡಲು ಹೋಗಿ ಮೂರು ಜನರು ನಾಸ್ಟಾ ಮಾಡಿದ್ದು, ಲಚಮಪ್ಪಾ ಇವನು ಇನ್ನೊಂದು ಸಿಂಗಲ್ ಪ್ಲೇಟ್ ನಾಸ್ಟಾ ಕೊಡು ಅಂತಾ ಕೇಳಿದಾಗ ಹೊಟೆಲದವನಾದ ನಾಗೇಶ ಇವನು ಸಿಂಗಲ್ ಪ್ಲೇಟ್ ನಾಸ್ಟಾ ಕೊಡುವುದಿಲ್ಲಾ ಅಂತಾ ಹೇಳಿ ನಾಗೇಶನು ಇತನು ಲಚಮಪ್ಪನಿಗೆ ಜಾತಿ ನಿಂದನೆ ಮಾಡಿ ಕೈಗಳಿಂದ ಲಚಮಪ್ಪನಿಗೆ ಹೊಟ್ಟೆಗೆ ಹೊಡೆದು ಕೈ ಹಿಡಿದು ದಬ್ಬಿಸಿಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ನಾಗೇಶನು ಅಡುಗೆ ಮಾಡಲು ಉಪಯೋಗಿಸುವ ಕಬ್ಬಿಣದ ರಾಡನ್ನು ತಗೆದುಕೊಂಡು ಲಚಮಪ್ಪನ ತಲೆಯ ಹಿಂಬಾಗಕ್ಕೆ, ಎದೆಗೆ ಹೊಡೆದು ಒಳ ಪೆಟ್ಟು ಮಾಡಿದಾಗ ಜೋರಾಗಿ ಹೊಡೆದು ಒಳ ಪೆಟ್ಟು ಮಾಡಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಒದ್ದಾಡುತ್ತಾ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಜಾತಿ ನಿಂದನೆ ಮಾಡಿ ಹೊಡೆದು ಕೊಲೆ ಮಾಡಿದ ನಾಗೇಶ ತಂದೆ ಹಣಮಂತು ಜಾ|| ಕಬ್ಬಲಿಗೇರ ಸಾ|| ಮುಧೋಳ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಮೃತನ ತಾಯಿಯಾದ ಶ್ರೀಮತಿ ಮುತ್ಯಮ್ಮ ಗಂಡ ಕಾಶಪ್ಪಾ ಕಾಳಾ ವ|| 50 ಉ|| ಕೂಲಿ ಜಾ|| ಮಾದಿಗ ಸಾ|| ಮದನಾ ಗ್ರಾಮ ಇವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 107/2013 ಕಲಂ:302 ಐ.ಪಿ.ಸಿ ಮತ್ತು 3 (1) (10)  ಎಸಸಿ/ಎಸಟಿ ಪಿಎ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: