ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ :ಶ್ರೀಮತಿ ಶಹಿದಾ ಬೇಗಂ ಗಂಡ ದಿ. ಸೈಯ್ಯದ ಗೌಸ್, ಸಾಃ ಸಂತ್ರಾಸವಾಡಿ ಗುಲಬರ್ಗಾ ರವರು ನಾನು ದಿನಾಂಕ:27-06-2013 ರಂದು 7-30 ಪಿ.ಎಮ್ ಕ್ಕೆ ಡಂಕಾ ಕ್ರಾಸ್ ಹತ್ತಿರ ಅಟೋರಿಕ್ಷಾ ನಂ. ಕೆಎ-32 ಬಿ-3099 ನೇದ್ದನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಬರುತ್ತಿದ್ದ ಒಂದು ಅಟೋರಿಕ್ಷಾಕ್ಕೆ ಒಮ್ಮೆಲೆ ಕಟ್ ಹೊಡೆದು ಮಹ್ಮದ ಅಕ್ತರಖಾನ ಇತನು ಅಟೋ ರಿಕ್ಷಾ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತು ಪ್ರಯಾಣಿಸುತ್ತಿದ್ದ ನನಗೆ ಬಲಗಾಲು ಮೊಳಕಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಶ್ರೀಮತಿ ಶಹಿದಾ ಬೇಗಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.39/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಸೇಡಂ ಪೊಲೀಸ ಠಾಣೆ: ನಮ್ಮ ಮನೆಯ ಪಕ್ಕದಲ್ಲಿ ಸ್ಯಾಮುವೆಲ್ ಎಂಬುವವರು ವಾಸವಿದ್ದು, ಆತನಿಗೆ ಇಬ್ಬರ ಹೆಂಡತಿಯರು ಹಾಗೂ ಮಕ್ಕಳಿರುತ್ತಾರೆ. ಆರು ತಿಂಗಳ ಹಿಂದೆ ಕ್ರಿಸ್-ಮಸ್ ಹಬ್ಬಕ್ಕಿಂತ 2-3 ದಿವಸದ ಮುಂಚೆ, ಸ್ಯಾಮುವೆಲ್ ಇವರ ಮನೆಯಲ್ಲಿ ಕ್ರಿಸ್-ಮಸ್ ಹಬ್ಬದ ತಯಾರಿ ನಡೆದಿತ್ತು. ಅದನ್ನು ನೋಡಲು ಅವರ ಮನೆಗೆ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹೋದಾಗ ಸ್ಯಾಮುವೆಲ್ ಮನೆಯಲ್ಲಿ ಒಬ್ಬನೆ ಇದ್ದನು. ನನ್ನನ್ನು ನೋಡಿ ಟಿ.ವಿ ನೋಡುಬಾ ಅಂತ ಕರೆದು ನಾನು ಟ.ವಿ ನೋಡುತ್ತಿರುವಾಗ ಹಿಂದಿನಿಂದ ಬಂದು ನನಗೆ ಎತ್ತಿಕೊಂಡು ಬಾಯಿ ಒತ್ತಿ ಹಿಡಿದು ಜಬರಿ ಸಂಭೋಗ ಮಾಡಿರುತ್ತಾನೆ. ನಾನು ಅಳುತ್ತಿರುವಾಗ ನನಗೆ ಸಮಾಧಾನ ಮಾಡಿ ನಮ್ಮ ಮನೆಗೆ ಕಳುಹಿಸಿದ್ದನು. 6 ತಿಂಗಳ ಕಳೆದ ನಂತರ ನನ್ನ ತಾಯಿ ನನ್ನ ಹೊಟ್ಟೆ ಬೆಳೆಯುತ್ತಿದ್ದುದ್ದು ಕಂಡು ನನಗೆ ಹೊಡೆ-ಬಡೆ ಮಾಡಿ ಬೆದರಿಸಿ ಕೇಳಿದಾಗ ಮೇಲಿನ ಸಂಗತಿ ಹೇಳಿರುತ್ತೇನೆ. ನನಗೆ ಜಬರಿ ಸಂಭೋಗ ಮಾಡಿದ ಸ್ಯಾಮುವೆಲ್ ತಂದೆ ಡೇನಿಯಲ್ ಸಂಜೀವನವರ ಜಾ:ಕ್ರಿಶ್ಚಿಯನ್ ಸಾ:ಬೆನಕನಳ್ಳಿ ಹಾ.ವ:ಇಂದಿರಾ ನಗರ ಸೇಡಂ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೊಂದ ಹುಡಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-158/2013 ಕಲಂ-376 ಐಪಿಸಿ ಸಂಗಡ 3(1) (XII) SC/ST P.A Act 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ಶ್ರೀಶೈಲ್ ಹಾಗೂ ಶಿವಪ್ಪ ಮುರಡಿ ಇಬ್ಬರೂ ಕೂಡಿಕೊಂಡು ಘತ್ತರಗಿ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಮೋಟಾರ್ ಸೈಕಲ್ ಮೇಲೆ ಹೋದರು, ಘತ್ತರಗಿಗೆ ಹೋಗಿ ಬರುವಾಗ ಮಂದೇವಾಲ ಕೇನಾಲ್ ದ ಹತ್ತೀರ ಮಡಿವಾಳಪ್ಪ ಗಾಣಿಗೇರ ಇವರ ಹೊಲದ ಬಾಜು ಇರುವ ರಾಷ್ಟ್ರೀಯ ಹೇದ್ದಾರಿ 218 ರ ಮೇಲೆ ಶ್ರೀಶೈಲ್ ಅಪಘಾತದಿಂದ ಮೃತ ಪಟ್ಟಿರುತ್ತಾನೆ. ಅವನ ಸಂಗಡ ಇದ್ದ ಶಿವಪ್ಪನಿಗೂ ಯಾರೋ ಜೀಪಿನಲ್ಲಿ ಹಾಕಿ ಮಂದೇವಾಲ ಆಸ್ಪತ್ರೆಗೆ ಕಳುಸಿರುತ್ತಾರೆ ಅಂತಾ ಹೇಳಿದ್ದರಿಂದ ನಾವು ನಮ್ಮೂರಿನಿಂದ ಮಂದೇವಾಲ ಕೇನಾಲ್ ಹತ್ತಿರ ಬಂದು ನೋಡಲು ನನ್ನ ಮಗ ರೋಡಿನ ಹತ್ತಿರ ಮೃತ ಪಟ್ಟಿದ್ದನು. ಎದುರಿನಿಂದ ಲಾರಿ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ತಲೆಗೆ, ಕಾಲಿಗೆ ಕೈಗೆ ಭಾರಿ ಪೆಟ್ಟಾಗಿ ಮೃತ ಪಟ್ಟಿರುತ್ತಾನೆ ಅವನ ಹಿಂದೆ ಕುಳಿತ ಶಿವಪ್ಪನಿಗೂ ಕಾಲಿಗೆ ಗಾಯಗಳಾಗಿರುತ್ತವೆ, ಅಪಘಾತಪಡಿಸಿದ ಲಾರಿಯನ್ನು ಪತ್ತೆ ಮಾಡಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಭೀಮರಾಯ ತಂದೆ ಮಲ್ಕಪ್ಪ ಯಳಸಂಗಿ ಸಾ:ವಸ್ತಾರಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2013 ಕಲಂ 279,337, 304(J).ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment