ಸಂಚು ರೂಪಿಸಿ ಸುಲಿಗೆ ಮಾಡಿದ ಸುಲಿಗೆಕೊರರ ಬಂಧನ, 2.5 ಲಕ್ಷ್ಯ ರೂ. ಮೌಲ್ಯದ ಆಭರಣ, ನಗದು ಹಣ, ಮೊಟಾರ ಸೈಕಲ ಹಾಗೂ ಇತರೆ ವಸ್ತುಗಳು ವಶ.
ಮಾನ್ಯ ಶ್ರೀ ಎನ್. ಸತೀಶಕುಮಾರ ಐಪಿಎಸ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:24-06-2013 ರಂದು ರಾತ್ರಿ ಗುಲಬರ್ಗಾ ನಗರದ ಧನ್ವಂತ್ರಿ ಆಸ್ಪತ್ರೆಯ ಎದುರುಗಡೆ ರಿಂಗ್ ರೋಡಿನ ಮೇಲೆ ಶ್ರೀಕಾಂತ ತಂದೆ ಅಶೋಕ ಚವ್ಹಾಣ ಹಾಗೂ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರು ತಮ್ಮ ಮೊಟಾರ ಸೈಕಲ ಮೇಲೆ ಬಂದು ಮೂತ್ರ ವಿಸರ್ಜನೆಗೆಂದು ನಿಂತಾಗ ಯಾರೋ ಇಬ್ಬರೂ ದುರ್ಷ್ಕಮಿಗಳು ಚಾಕು ತೊರಿಸಿ ಹೆದರಿಸಿ ಅವರ ಹತ್ತಿರ ಇದ್ದ ಬಂಗಾರದ ಆಭರಣಗಳು, ನಗದು ಹಣ ಹಾಗೂ ಇತರೆ ಸಾಮಾನುಗಳನ್ನು ಜಭರದಸ್ತಿಯಿಂದ ದೊಚಿಕೊಂಡು ಹೋಗಿದ್ದರ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಗುನ್ನೆ ನಂ:247/2013 ಕಲಂ,392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ಪತ್ತೆಗಾಗಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆ ವಹಿಸಿಕೊಂಡ ಸಿಪಿಐ ಎಂ.ಬಿ.ನಗರ ವೃತ್ತ ರವರು ತನಿಖೆ ವೇಳೆ ಪಿರ್ಯಾದಿ ಶ್ರೀಕಾಂತ ನೀಡಿದ ಹೇಳಿಕೆಗೂ ಹಾಗೂ ಸುಲಿಗೆಗೆ ಒಳಗಾದ ನೊಂದ ಶ್ರೀ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರ ಹೇಳಿಕೆಗೆ ಬಹಳಷ್ಟು ಅಂಶಗಳು ವ್ಯಕ್ತಿರಿಕ್ತವಾಗಿ ಕಂಡುಬಂದಿದ್ದು ಮತ್ತು ಇಬ್ಬರ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿರಲಿಲ್ಲ. ಶ್ರೀಕಾಂತ ಇತನಿಗೆ ದಾಳಿ ಮಾಡಿ ಸುಲಿಗೆ ಮಾಡಿದಾಗ ಆತನಿಗೆ ಯಾವುದೇ ಗಾಯ ಆಗದೇ ಮತ್ತು ಆತನಿಂದ ಯಾವುದೇ ಬಂಗಾರದ ಆಭರಣಗಳು ಕಳ್ಳತನವಾಗಿರಲಿಲ್ಲ. ಆದರೆ ಇನ್ನೊಬ್ಬ ಆನಂದ ಚವ್ಹಾಣ ಈತನ ಕೈಗೆ ಚಾಕುವಿನಿಂದ ಗಾಯವಾಗಿದ್ದು ಹಾಗೂ ಆತನಿಂದ ಸುಮಾರು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲಾಗಿತ್ತು. ಶ್ರೀಕಾಂತನ ಮೇಲೆ ಅನುಮಾನಗೊಂಡು ದಿನಾಂಕ:28-06-2013 ರಂದು ವಿಚಾರಣೆ ಮಾಡಲಾಗಿ ತನಗೆ ವಿಪರಿತ ಸಾಲವಾಗಿದ್ದರಿಂದ ಸಾಲ ತೀರಿಸುವ ಉದ್ದೇಶದಿಂದ ತಾನು ಮತ್ತು ತನ್ನ ಗೆಳೆಯರಾದ ಅಭಿಷೇಕ ಪಾಟೀಲ, ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಸಂಗಡ ಕರೆದುಕೊಂಡು ಸಂಚು ರೂಪಿಸಿ ಹೇಗಾದರೂ ಮಾಡಿ ಆನಂದನ ಹತ್ತಿರ ಇರುವ ಬಂಗಾರ ಹಾಗೂ ನಗದು ಹಣ ಕಿತ್ತುಕೊಳ್ಳಬೇಕು ಅಂತಾ ತಿರ್ಮಾನಿಸಿ ಶ್ರೀಕಾಂತ ಹಾಗು ಅಭಿಷೇಕ ಪಾಟಿಲ ಇಬ್ಬರೂ ಕೂಡಿಕೊಂಡು ಆನಂದ ಚವ್ಹಾಣ ಇತನಿಗೆ ತಮ್ಮ ಮೊಟಾರ ಸೈಕಲಗಳ ಮೇಲೆ ಕೃಷ್ಟಲ ಪ್ಯಾಲೇಸಗೆ ಊಟಕ್ಕೆ ಕರೆದುಕೊಂಡು ಬಂದು ಸರಾಯಿ ಕುಡಿಸಿದರು. ಅಭಿಷೇಕ್ ಪಾಟೀಲ ಈತನು ಕೇವಲ ಸರಾಯಿ ಕುಡಿದು ಊಟ ಮಾಡದೇ ಎದ್ದು ಹೋಗಿ ಪಿಡಿಎ ಕಾಲೇಜನ ಹತ್ತಿರ ಕೆಲಸ ಇದೆ ನಿಮ್ಮ ಊಟ ಆದ ಮೇಲೆ ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿ ಹೋರಟು ಹೋಗಿದ್ದನು. ಅಭಿಷೇಕ ಪಾಟೀಲ ತನ್ನ ಸ್ನೇಹಿತರಾದ ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಕರೆದುಕೊಂಡು ರಿಂಗ್ ರೋಡಿನ ಓಜಾ ಕಾಲೋನಿ ಹತ್ತಿರ ಇರುವ ಇಂಜನಿಯರ್ಸ ಕ್ಲಬ್ ಬಳಿ ಕತ್ತಲೆಯ ಸ್ಥಳದಲ್ಲಿ ಕುಳ್ಳಿರಿಸಿ ತಾನು ಸ್ವಲ್ಪ ದೂರದಲ್ಲಿ ಕಾಣದಂತೆ ನಿಂತುಕೊಂಡಿದ್ದನು. ಶ್ರೀಕಾಂತ ಮತ್ತು ಆನಂದ ಊಟ ಆದ ಮೇಲೆ ಶ್ರೀಕಾಂತನು ಅಭಿಷೇಕನಿಗೆ ಪೋನ್ ಮಾಡಿ ಆತನನ್ನು ಕರೆಯಲು ಎಲ್ಲಿಗೆ ಬರಬೇಕು ಅಂತಾ ಕೇಳಿದಾಗ ಆತನು ರಿಂಗ್ ರೋಡ ಕಡೆಯಿಂದ ಪಿಡಿಎ ಕಾಲೇಜು ಕಡೆಗೆ ಬರಲು ತಿಳಿಸಿದನು. ಶ್ರೀಕಾಂತ ಮತ್ತು ಆನಂದ ರಿಂಗ್ ರೋಡ್ ಮಾರ್ಗವಾಗಿ ಶ್ರೀಕಾಂತನ ಬೈಕ ಮೇಲೆ ಹೊರಟರು. ಬೈಕ ಚಲಾಯಿಸುತ್ತಿದ್ದ ಶ್ರೀಕಾಂತನು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಬೈಕನು ನಿಲ್ಲಿಸಿದನು. ಕೃಷ್ಣ ಮತ್ತು ರವಿ ಇವರು ಇಬ್ಬರನ್ನು ಹಿಂದಿನಿಂದ ದಾಳಿ ಮಾಡಿ ಕೆಳಗೆ ಬೀಳಿಸಿ ಅದರಲ್ಲಿ ಶ್ರೀಕಾಂತನು ಆರೋಪಿತರಾದ ಕೃಷ್ಣ ಮತ್ತು ರವಿಯೊಂದಿಗೆ ಶಾಮೀಲು ಇದ್ದು ಬೇಕಂತಲೇ ನಟಿಸಿ ಆನಂದನಿಂದ ಒಟ್ಟು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲು ಒಳಸಂಚಿನಿಂದ ಸಹಕರಿಸಿದ್ದನು. ಈ ವೇಳೆ ಆನಂದನಿಗೆ ತನ್ನ ಬಲಗೈಗೆ ಚಾಕುವಿನಿಂದ ದಾಳಿ ಮಾಡಿದಾಗ ಗಾಯವುಂಟಾಗಿರುತ್ತದೆ. ಶ್ರೀಕಾಂತ ತಂದೆ ಅಶೋಕ ಚವ್ಹಾಣ, ವಃ23 ವರ್ಷ, ಸಾ|| ಅಯ್ಯರವಾಡಿ ಗುಲಬರ್ಗಾ, ಅಭೀಷೇಕ ತಂದೆ ಜಗದೀಶ ಪಾಟೀಲ, ವಯಾ||23 ವರ್ಷ, ಸಾ|| ಗಂಜ ಕಾಲೋನಿ ಗುಲಬರ್ಗಾ, ಕೃಷ್ಣ ತಂದೆ ದೊಂಡಿಭಾ ಜಾಧವ, ವಯಾ||24 ವರ್ಷ ಸಾ|| ಅಯ್ಯರವಾಡಿ ಗುಲಬರ್ಗಾ, ರವಿ ತಂದೆ ಅರ್ಜುನ ಕಂಡೇಕರ್, ವಯಾ||42 ಅಯ್ಯರವಾಡಿ ಗುಲಬರ್ಗಾರವರಿಂದ ಸುಲಿಗೆ ಮಾಡಲಾದ ಬ್ರಾಸಲೈಟ್ 25 ಗ್ರಾಂ, ಚೈನ್ 20, ಗ್ರಾಂ, ಎರಡು ಉಂಗುರುಗಳು 10 ಗ್ರಾಂ, ಕೃತ್ಯಕ್ಕೆ ಬಳಸಿದ ಎರಡು ಬೈಕ್, ಎರಡು ಚಾಕು, ಒಂದು ದಸ್ತಿ ಹೀಗೆ ಒಟ್ಟು ಸುಮಾರು 2.5 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚಾರಣೆಯಲ್ಲಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ. ಪ್ರದೀಪ ಬೀಸೇ ಪಿ.ಎಸ್.ಐ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ, ಶ್ರೀ,ತಿಮ್ಮಣ್ಣ ಚಾಮನೂರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ,ಶ್ರಿ ಪರುಶುರಾಮ ಮನಗೂಳಿ ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ಶಂಕರ, ಅಣ್ಣಪ್ಪ, ಮನೋಹರ, ರಪಿಕ್, ಅಶೋಕ, ಆನಂದ, ಮಶಾಕ, ಅರ್ಜುನ, ವೀರಶೇಟ್ಟಿ, ಹಣಮಂತ, ಮಲ್ಲಿನಾಥ, ವೇದರತ್ನಂ, ತಾರಾಸಿಂಗ್ ರವರು ಭಾಗವಹಿಸಿದ್ದರು.
No comments:
Post a Comment