ಮಹಿಳಾ ಪೊಲೀಸ್ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ:
ದಿನಾಂಕ 24.7.2013 ರಂದು ಶ್ರೀಮತಿ ಜ್ಯೋತಿ @ ಶರಣಮ್ಮಾ ಗಂಡ ವಿಶಾಲ ತಿಪರಾದಿ
ಸಾ; ಬ್ಯಾಂಕ ಕಾಲನಿ ಇವರು ಠಾಣೆಗೆ ಹಾಜರಾಗಿ ದಿ 13.5.2013 ರಂದು ಪೂನಾದ ವಿಶಾಲ ಇತನೊಂದಿಗೆ
ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ತನ್ನ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ
12 ತೊಲೆ ಬಂಗಾರ ಮತ್ತು ಬೆಲೆ ಬಾಳುವ ಗ್ರಹಬಳಕೆಯ
ಸಾಮಾನುಗಳು ಕೊಟ್ಟಿದ್ದು, ಮದುವೆಯಾದ 3 ದಿನಗಳಲ್ಲಿಯೇ ನನ್ನ ಗಂಡ ಅತ್ತೆ ಬಾವ ಮನೆಯ ಸಣ್ಣಪುಟ್ಟ
ವಿಷಯಕ್ಕೆ ಜಗಳ ತೆಗೆಯುವುದು ನನಗೆ ಸರಿಯಾಗಿ
ಅಡುಗೆ ಮಾಡಲು ಬರುವದಿಲ್ಲಾ ಅಂತಾ ಜಗಳ ತೆಗದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ
ಕೊಟ್ಟಿದ್ದು ಅಲ್ಲದೇ ನಾವು ಪ್ಲಾಟ ಖರೀದಿ
ಮಾಡುತ್ತಿದ್ದು ಅದಕ್ಕಾಗಿ ನಿಮ್ಮ ತಂದೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ
ನನ್ನ ತವರು ಮನೆಗೆ ತಂದು ಬಿಟ್ಟಿರುತ್ತಾರೆ. ದಿನಾಂಕ 16.6.2013
ರಂದು ನನ್ನ ಗಂಡ ವಿಶಾಲ ಅತ್ತೆ ಶೆಶಿಕಲಾ ಇವರು ಗುಲಬರ್ಗಾದ ಬ್ಯಾಂಕ ಕಾಲನಿಯಲ್ಲಿರುವ ನಮ್ಮ ತವರು
ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಿನಗೆ 4 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ
ಅಂದರೆ ಬಂದು ಇಲ್ಲೇ ಕುಳಿತಿರುವಿಯಾ ಅಂತಾ ಕೈಯಿಂದ ಹೊಡೆಬಡೆ ಮಾಡಿದ್ದು. ನನ್ನ ಗಂಡ ವಿಶಾಲ
ಅತ್ತೆ ಶೆಶಿಕಲಾ ಮತ್ತು ಭಾವ ವೈಭವ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೇ ಗುಲಬರ್ಗಾದಲ್ಲಿ ಪ್ರಕರಣ
ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಸೇಡಂ
ಪೊಲೀಸ ಠಾಣೆ.
ಕಳವು ಪ್ರಕರಣ:
ದಿನಾಂಕ:23-07-2013 ರಂದು ರಾತ್ರಿ ಅಂದಾಜು 01-00 ಗಂಟೆ
ಸುಮಾರಿಗೆ ಬಿಚ್ಚಪ್ಪ ತಂದೆ ಶಿವಲಿಂಗಪ್ಪ ಮಾಡನೊರ ಸಾ: ಕೊಡ್ಲಾ ಇವರ ಮನೆಯ ಬಾಗಿಲ ಕೀಲಿ ಮುರಿದು
ಮನೆಯಲ್ಲಿದ್ದ 10,000/- ರೂಪಾಯಿ ಹಾಗೂ ಒಂದು ಮೊಬೈಲ್ ಸೆಟ್ ಅದರ ಸಿಮ್ ನಂ-9917553542 ಇದರ
ಅಂದಾಜು ಕಿಮ್ಮತ್ತು 1200/- ರೂಪಾಯಿ ಹೀಗೆ ಒಟ್ಟು 11200/- ರೂಪಾಯಿ ಕಿಮ್ಮತ್ತಿನ ಮಾಲು ಮತ್ತು
ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ:
ದಿನಾಂಕ: 23/07/2013 ರಂದು ಸಾಯಂಕಾಲ ಲಕ್ಷ್ಮೀಣ ತಂದೆ ಸೋಮಣ್ಣಾ
ಘೋಡಕೆ ಸಾ:ನಾಗಲೇಗಾಂವ ಇವರು ಸೂರ್ಯಕಾಂತ ತಂದೆ ರಾಮಚಂದ್ರ ಘೋಡಕೆ ರವರ ಹೊಲದಲ್ಲಿ ದನಗಳು ಬಿಟ್ಟು
ಮೇಯಿಸುತ್ತಿರುವಾಗ ಸೂರ್ಯಕಾಂತನ ತಂದೆ ನಮ್ಮ ಹೊಲದಲ್ಲಿ ದನಗಳು ಬಿಟ್ಟು ಮೇಯಿಸಬೇಡ ಅಂತಾ ಹೇಳಿದಾಗ
ಲಕ್ಷ್ಮಣನು ಸೂರ್ಯಕಾಂತನ ತಂದೆಯವರಿಗೆ ಅವಾಚ್ಯ ಶಬ್ದಗಳೀಂದ ಬಯ್ದು ಕಲ್ಲಿನಿಂದ ತಲೆಗೆ ಹೊಡೆದಿದ್ದು.
ಬಿಡಿಸಲು ಹೋದ ಸೂರ್ಯಕಾಂತನಿಗೆ ಸಹ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ
ಕೈಕೊಳ್ಳಲಾಗಿದೆ.
No comments:
Post a Comment