ಶಹಾಬಾದ ನಗರ ಠಾಣೆ:
ಯು.ಡಿ.ಆರ್ ಪ್ರಕರಣ:
ದಿನಾಂಕ:25/07/2013 ರಂದು ಶ್ರೀ ನೀಲಕಂಠ ತಂದೆ ಸಿದ್ದಪ್ಪ ಪಾಣಿಗಾಂವ ಸಾ:ಗೋಳಾ (ಕೆ)
ರವರು ಠಾಣೆಗೆ ಹಾಜರಾಗಿ ಬೆಳಗ್ಗೆ 10.30 ಎಎಂ ಸುಮಾರಿಗೆ ಮಾಲಗತ್ತಿ ಸೀಮಾಂತರದಲ್ಲಿರುವ ತಮ್ಮ
ಹೊಲಕ್ಕೆ ಹೋದಾಗ ಅವರ ಹೊಲದಲ್ಲಿರುವ ಬನ್ನಿ ಗಿಡಕ್ಕೆ ಒಬ್ಬ ವ್ಯಕ್ತಿ ನೇತಾಡುತ್ತಿರುವದನ್ನು
ನೋಡಿ ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ನೇಣು ಹಾಕಿ ಕೊಂಡಿದ್ದು ನೋಡಲಾಗಿ ಆತನು ಯಾರೋ
ಅಪರಿಚಿತನಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಆತನ ವಯಸ್ಸು ಅಂದಾಜು 23/25 ವರ್ಷ ಇದ್ದು
ಮೃತ ವ್ಯಕ್ತಿಯು ಬನ್ನಿ ಗಿಡದ ಮೇಲ್ಬಾಗದಲ್ಲಿ ಗುಲಾಬಿ ಬಣ್ಣದ ನೂಲಿನ ಹಗ್ಗ ಕಟ್ಟಿ ಅದಕ್ಕೆ
ಕೆಳಭಾಗದಲ್ಲಿ ಕಪ್ಪು ವಾಯರ ಹಗ್ಗ ಕಟ್ಟಿ ನೇಣು
ಹಾಕಿಕೊಂಡಿರುತ್ತಾನೆ. ಸದರಿಯವನ ಮೈ ಮೇಲೆ ಒಂದು ಬಿಳಿ ಗೇರಿ-ಗೇರಿ ಶರ್ಟ ಮತ್ತು ಒಂದು ಚಾಕಲೇಟ
ಬಣ್ಣದ ಚೌಕಡಿ ಲುಂಗಿ ಇರುತ್ತದೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ
ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕನಗರ ಠಾಣೆ:
ಕಳವು ಪ್ರಕರಣ:
ಶ್ರೀ.
ಸಮೀರ ತಂದೆ ರಶೀದ ಬಾಗವಾನ ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ದಿನಾಂಕ 25/07/2013 ರಂದು ಬೆಳಿಗ್ಗೆ 3-30 ರಿಂದ 4
ಗಂಟೆ ಸುಮಾರಿಗೆ ತಾವು ಮನೆಯಲ್ಲಿ ಮಲಗಿರುವ
ಸಮಯದಲ್ಲಿ ಯಾರೋ ಕಳ್ಳರು ಕಂಪೌಂಡ ಹಾರಿ ಮನೆಯ ಕಿಟಕಿ ಮುರಿದು ಒಳಗಡೆ ಬಂದು ಮನೆಯಲ್ಲಿದ್ದ ಒಂದು ಐ-ಫೋನ ಮೊಬೈಲ ಅದರ ಸೀಮ ನಂ 9611869999 ಮತ್ತು ಪ್ಯಾಂಟನ ಜೇಬಿನಲ್ಲಿದ್ದ 15,000/- ರೂಪಾಯಿಗಳನ್ನು ತೆಗೆದುಕೊಂಡು ಬೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ
ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೈಕೊಳ್ಳಲಾಗಿದೆ.
No comments:
Post a Comment