ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ದಿನಾಂಕ: 08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ. ಜಯವಂತರೆಡ್ಡಿ ತಂದೆ ಮಾಣಿಕರೆಡ್ಡಿ ಯನಗಲ ವ: 40 ವರ್ಷ ಜಾ: ರೆಡ್ಡಿ ಉ:ಒಕ್ಕಲುತನ ಸಾ: ಮುಸ್ತಾರಿವಾಡಿ ತಾ:ಹುಮನಾಬಾದ ಜಿ: ಬೀದರ ಮತ್ತು ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ ವ: 45 ವರ್ಷ ಸಾ; ಚರಕಪಲ್ಲಿ ತಾ: ಜಹಿರಾಬಾದ
ಜಿ: ಮೇದಕ (ಎ.ಪಿ) ರವರು
ಹುಮನಾಬಾದ- ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಕಮಲಾಪೂರ ಅಂಬೇಡ್ಕರ್ ಕಾಲೂನಿಯ ಹತ್ತಿರದ ದಾಬಾಕ್ಕೆ ಹೋಗುವ ಕುರಿತು ಜಗನ್ನಾಥ ರೆಡ್ಡಿಯ ಮೋಟರ್ ಸೈಕಲ ನಂ: ಕೆಎ-39- ಹೆಚ್ - 3834 ನೇದ್ದರ ಮೇಲೆ ಕುಳಿತುಕೊಂಡು ಹೋಗುತ್ತಿದ್ದಾಗ ಇಸ್ಮಾಯಿಲ್ ದಾಬಾದ ಹತ್ತಿರ ಗುಲಬರ್ಗಾ ಕಡೆಯಿಂದ ಹಣಮಂತ ತಂದೆ ಸೋಮಶೇಖರ ಪಾಟೀಲ್ ಸಾ; ನವನಿಹಾಳ ಈತನು ತನ್ನ ಮೋಟರ್ ಸೈಕಲ್ ನಂಬರ್ ಕೆಎ-32-ವಿ-2934 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಗನ್ನಾಥರೆಡ್ಡಿಯ ಮೋಟರ್ ಸೈಕಲಗೆ ಅಪಘಾತ ಪಡಿಸಿದ್ದು ಈ ಅಪಘಾತದಲ್ಲಿ ಜಗನ್ನಾಥರೆಡ್ಡಿಯ ತೆಲೆಯ ಹಿಂದುಗಡೆ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿರುವದನ್ನು ಕಂಡು ಜಯವಂತರೆಡ್ಡಿ ಚಿರಾಡುತ್ತಿದ್ದಾಗ ಅಪಘಾತ ಪಡಿಸಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಈ ಅಪಘಾತವು ದಿನಾಂಕ:08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಜರುಗಿದ್ದು. ನಂತರ ಯಾರೋ 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ
ಜಗನ್ನಾಥರೆಡ್ಡಿಯನ್ನು ಅಂಬುಲೇನ್ಸದಲ್ಲಿ ಕರೆದುಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಜಗನ್ನಾಥರೆಡ್ಡಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ರಾತ್ರಿ 11-30 ಗಂಟೆ ಸುಮಾರಿಗೆ ಜಹಿರಾಬಾದ ಸಮೀಪ ಮಾರ್ಗಮಧ್ಯದಲ್ಲಿಯೇ ಜಗನ್ನಾಥರೆಡ್ಡಿ ಮೃತಪಟ್ಟ ಬಗ್ಗೆ ಶ್ರೀ. ಜಯವಂತರೆಡ್ಡಿ ತಂದೆ ಮಾಣಿಕರೆಡ್ಡಿ ಯನಗಲ ರವರು ಫಿರ್ಯಾದಿಯ ಹೇಳಿಕೆ ಸಲ್ಲಿಸಿದ್ದು ಫಿರ್ಯಾದಿಯ ಮೇಲಿಂದ ಕಮಲಪೂರ ಪೊಲೀಸ್ ಠಾಣೆಯಲ್ಲಿ ಕಲಂ 279. 304 [ಎ] ಐಪಿಸಿ ಸಂಗಡ
187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment