ಮಟಕಾ ಪ್ರಕರಣ:
ರೋಜಾ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ:09/07/2013
ರಂದು ಶ್ರೀ ನಿಂಗಪ್ಪಾ ಪೂಜೇರಿ ಪಿಎಸ್ಐ[ಅ.ವಿ] ರೋಜಾ ಠಾಣೆ ರವರು ಖಚಿತ ಮಾಹಿತಿ ಮೇರೆಗೆ ಕಾಲಾಹುಡಾ ಮೇಸ್ತ್ರಿ ಹೋಟೆಲ ಹತ್ತಿರದಲ್ಲಿ ಸಾರ್ವಜನಿಕರಿಂದ ತನ್ನ ಲಾಭಕ್ಕಾಗಿ ಹಣ ಪಡೆದುಕೊಂಡು 1 ರೂಪಾಯಿಗೆ 80ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಪಿಸಿ-645 ಮದರಸಾಬ, ಪಿಸಿ-248 ವೈಜನಾಥ, ಹಾಗೂ ಪಂಚರಾದ 1} ಸಂಜು @ ಸಂಜೀವಕುಮಾರ ತಂದೆ ಅರ್ಜುನ ರಾವ ಆಕಾಶ ಕೋರೆ
ಸಾ: ರೋಜಾ [ಬಿ] ಗುಲಬರ್ಗಾ 2} ರಾಜೇಂದ್ರ ತಂದೆ ತುಳಸಿರಾಮ ಬೋಳೆ ಸಾ: ರೋಜಾ [ಬಿ] ಗುಲಬರ್ಗಾ ರವರೊಂದಿಗೆ ಕಾಲಾಹೂಡಾ ಹತ್ತಿರ ಬರುವ ಮೇಸ್ರತಿ ಹೋಟೆಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಿಯಾಕೂ 80 ರೂಪಿಯಾ ದೇತಾಹೂ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ನಾವೆಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಉ: ಆಟೋ ಡ್ರೈವರ ಸಾ: ಮಂಗಲಗಿ ಗ್ರಾಮ ಹಾ||ವಾ|| ಮಿಲ್ಲತ ನಗರ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ ನಗದು ಹಣ 2350/-ರೂಪಾಯಿಗಳು ಅಲ್ಲದೇ 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಪಂಚರ ಸಮಕ್ಷಮ ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿ ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಈತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಕಳ್ಳತನ ಪ್ರಕರಣ:
No comments:
Post a Comment