ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ 09-07-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ
ಹುಮನಾಬಾದ ರೋಡಿಗೆ ಇರುವ ಖಾನ ಮೋಟಾರ್ಸ ಅಂಗಡಿ ಮುಂದೆ ಮೃತ ಮಹ್ಮದ ಖಯುಮ ತಂದೆ ಅಬ್ದುಲ
ಹಮೀದ ಈತನು ನಡೆದುಕೊಂಡು ಗಂಜ ಬಸ್ ಸ್ಟಾಂಡ ಕಡೆಗೆ
ಹೋಗುತ್ತಿದ್ದಾಗ ಒಂದು ಟಂ.ಟಂ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನ ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮೃತ ಮಹ್ಮದ ಖಯುಮ ತಂದೆ ಅಬ್ದುಲ
ಹಮೀದ ಈತನಿಗೆ ಹಿಂದಿನಿಂಡ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನ ಸಮೇತ ಓಡಿ
ಹೋಗಿದ್ದು ನಂತರ 108 ಅಂಬುಲೈನ್ಸ ವಾಹನದಲ್ಲಿ
ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆತನು ಅಪಘಾತದಲ್ಲಿ ಆದ
ಭಾರಿಗಾಯಗಳಿಂದ ರಾತ್ರಿ 08-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತ ಫಿರ್ಯಾದಿ ಇಂದು ಮೃತ ದೇಹವು
ಗುರ್ತಿಸಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಇಂದು ದಿನಾಂಕ 10/07/2013 ರಂದು 9-30 ಪಿ.ಎಂ.ಕ್ಕೆ ಪಿರ್ಯಾಧಿ ನಾಗೇಶ ತಂದೆ ಶ್ರೀಮಂತ ರೆಡ್ಡಿ
ವ: 43 ಸಾ: ಜೈನಗಲ್ಲಿ ಆಳಂದ ತಾ: ಆಳಂದ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ಅರ್ಜಿ ಕೊಟ್ಟಿದ್ದು
ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ 10/07/2013 ರಂದು ಮದ್ಯಾಹ್ನ ಆಳಂದ ಎಸ್.ಬಿ.ಎಚ್ ಬ್ಯಾಂಕಿಗೆ ಹೋಗಿ
ಲಾಕರದಲ್ಲಿಟ್ಟ ಬಂಗಾರದ ಆಭರಣಗಳನ್ನು ಅಂದರೆ 1) ಬಂಗಾರದ ನೇಕಲೇಸ್ ಅಂದಾಜು 8 ತೊಲೆ ಅ.ಕಿ. 2
ಲಕ್ಷ 2)
ಗಂಟನಾ (ಬಂಗಾರದ ತಾಳಿ ) 8 ತೊಲೆ ಅ.ಕಿ. 2 ಲಕ್ಷ 3) ಪಾಟಲಿ ಬಂಗಾರದ 6 ತೊಲೆ ಅ.ಕಿ. 1,1/2 ಲಕ್ಷ 4) ಬ್ರಾಸಲೇಟ್ ಬಂಗಾರದ 2 ತೊಲೆ ಅ.ಕಿ. 50 ಸಾವಿರ 5) ನೇಕಲೇಸ (ಲಾಕೇಟ) ಬಂಗಾರದ 1 ವರೇ
ತೊಲೆ ಅ.ಕಿ. 30 ಸಾವಿರ 6) 2 ಡಿಸೈನ್ ಉಂಗುರ ಬಂಗಾರದ 7 ಗ್ರಾಂ ಅ.ಕಿ. 20 ಸಾವಿರ 7) 1 ಸಾದಾ ಬಂಗಾರದ ಉಂಗುರ 5 ಗ್ರಾಂ ಅ.ಕಿ. 13
ಸಾವಿರ 8) ಕಿವಿಯ ಬಂಗಾರದ ಓಲೆ 5 ಗ್ರಾಂ ಅ.ಕಿ. 13 ಸಾವಿರ 9) 2 ಜೊತೆ ಕಾಲುಂಗರ ಬೆಳ್ಳಿ 2 ತೊಲೆ ಅ.ಕಿ. 8 ಸಾವಿರ 10) 2 ಜೊತೆ ಕಾಲು ಚೈನ್ ಬೆಳ್ಳಿ 8 ತೊಲೆ 28 ಸಾವಿರ 11) ಬಂಗಾರದ ತಾಳಿ ಬಂಗಾರದ 1,1/2 ತೊಲೆ 38 ಸಾವಿರ ಲಾಕರ ಇಂದ ತೆಗೆದಕೊಂಡು ನಾಳೆ ನನ್ನ ಚಿಕ್ಕಮ್ಮನ ಮಗನ ಮುದುವೆಗೆ
ಹೋಗಲು ಗುಲಬರ್ಗಾಕ್ಕೆ ಸುಮಾರು 4 ಗಂಟೆಗೆ ಬಂದು ಇಲ್ಲಿ ನನ್ನ ಹೆಂಡತಿ ಲಕ್ಷ್ಮಿ ಹಾಗು ಮಕ್ಕಳು
ವಿಕ್ರಮ್, ಆದಿತ್ಯಾ
ಹಾಗು ನಂದಿನಿ ಅಅವರು ಗುಲಬರ್ಗಾದಲ್ಲಿ ಶಾಲೆಯ ಸಲುವಾಗಿ ಇದ್ದು ಶ್ರೀ ಶ್ರೀಮಂತ ರಡ್ಡಿ ರವರ ಮನೆ
ನಂ. 10-105/4 ಶರಣ ನಗರದಲ್ಲಿ ಬಾಡಿಗೆ ಮನೆ ಮಾಡಿ ಇರುತ್ತಾರೆ. ಅವರಿಗೆ ಕರೆದುಕೊಂಡು ಸಾಯಂಕಾಲ
5-35 ಕ್ಕೆ ಎನ್.ಜಿ.ಓ ಕಾಲೋನಿಯಿಂದ ಆಟೋ ತೆಗೆದುಕೊಂಡು 5-45 ಪಿ.ಎಂ.ಕ್ಕೆ ಬಸ್ ಸ್ಟ್ಯಾಂಡಗೆ
ಬಂದು ಸುಮಾರು 5-50 ಪಿ.ಎಮ್. ಗಂಟೆಗೆ ಬೀದರಗೆ ಹೋಗುವ ಬಸ್ಸ ನಂ. ಕೆ.ಎ-38 ಎಫ್- 588 ಕುಳಿತು
ಕೊಂಡು ರಾಜಹಂಸ ಬಸ್ಸ ಕ್ಯಾರಿಯರ ಮೇಲೆ ಸೂಟಕೇಸ್ ಇಟ್ಟು ಟಿಕೇಟ ತೆಗೆದುಕೊಂಡು ಕುತ್ತಿದ್ದೇವು.
ಸುಮಾರು 6 ಪಿ.ಎಂ ಗಂಟೆಗೆ ನಮ್ಮ ಮುಂದೆ ಒಬ್ಬ ಮನುಷ್ಯ ಅಡ್ಡ ಬಂದು
ಕೆಳಗೆ ನಿಂತ ವ್ಯಕ್ತಿಗೆ Hello by by ಅಂತಾ
ಹೆಳಿದ ಆಗ ನಾವು ಅವನಿಗೆ ಏ ಮೇಲೆ ಬಿಳಬೇಡ ಅಂದ ಗದರಿಸಿದೇವು ಆಗ ಕೆಳಗೆ ನಿಂತ ವ್ಯಕ್ತಿ ನಮಗೆ
ತೊದಲುತ್ತಾ Time ಕೇಳಿದ ಆಗ ನಾವು ಅವನಿಗೆ ಬಗ್ಗಿ ಟೈಮ್ ಹೇಳಿದೇವು. ಆಗ ಸಮಯದಲ್ಲಿ
ನಮ್ಮ ಚಿತ್ತ ಬೇರೆ ಕಡೆ ತಿರುಗಿಸಿ 3 ಜನ ಸೇರಿ carrier ಮೇಲೆ ಇಟ್ಟ ನಮ್ಮ ಸೂಟಕೇಸ್ ಹಾಗು ಅದರಲ್ಲಿ ಇದ್ದ ಬಂಗಾರದ ಒಡವೇಗಳು
ಹಾಗು 6-7 ಜೊತೆ ಬಟ್ಟೆಗಳು ಕಳ್ಳತನ ಮಾಡಿ ತೆಗೆದುಕೊಂಡು ಓಡಿ ಹೋಗಿರುತ್ತಾರೆ.
ಆ ಕಳ್ಳರನ್ನು ನಾವು ನೋಡಿದರೇ ಗುರುತು ಹಿಡಿಯುತ್ತೇವೆ. ಆದ್ದರಿಂದ ತಾವುಗಳು ಕಳ್ಳರನ್ನು
ಹಿಡಿದು ನಮ್ಮ ವಸ್ತುಗಳನ್ನು ಕೊಡಿಸಬೇಕಾಗಿ ಹಾಗು ಅವರ ಮೇಲೆ ಸೂಕ್ತ ರೀತಿಯ ಕಾನೂನು ರೀತಿಯ ಕ್ರಮ
ಕೈಕೊಳ್ಳಬೇಕಾಗಿ ವಿನಂತಿ ಅಂತಾ ವಗೈರೆ ಪಿರ್ಯಾಧಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ
ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 106/2013 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ
ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
No comments:
Post a Comment