ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ: ಅಶೋಕ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಮನೆ ಕಳ್ಳತನ ಸ್ವತ್ತಿನ
ಅಪರಾಧಗಳು ಆಗುತ್ತಿದ್ದರಿಂದ ನೂತನ ಎಸ.ಪಿ ಅಮಿತಸಿಂಗ ಐ.ಪಿ.ಎಸ, ಕಾಶೀನಾಥ ತಳಕೇರಿ ಹೆಚ್ಚುವರಿ ಎಸ.ಪಿ, ರವರು ಸ್ವತ್ತಿನ ಅಪರಾಧಗಳ ಪತ್ತೆಗಾಗಿ ಉದಯಕುಮಾರ ಡಿ.ಎಸ.ಪಿ ರವರ ನೇತೃತ್ವದಲ್ಲಿ
ಟಿ.ಹೆಚ್.ಕರಿಕಲ್ ಪಿ.ಐ ಅಶೋಕ ನಗರ, ಎಸ.ಎಸ. ಹುಲ್ಲೂರ ಪಿ.ಐ ಶಹಾಬಾದ, ಕೆ.ಎಸ.ಕಲ್ಲದೇವರು ಪಿಎಸಐ ಅಶೋಕ ನಗರ ಹಾಗೂ ಸಿಬ್ಬಂದಿ ಜನರಾದ ಮೌಲಾಲಿ ಹೆಚ್.ಸಿ
264, ರಫಿಕ ಪಿಸಿ 370, ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಸುರೇಶ ಪಿಸಿ 534, ಬಸವರಾಜ ಪಿಸಿ 765, ಗುರುಮೂರ್ತಿ ಪಿಸಿ 264, ರವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಈ ತಂಡವು ಕಳೆದ ಒಂದುವರೆ ವರ್ಷದಿಂದ ಮನೆ ಕಳ್ಳತನ ಮಾಡುತ್ತಿದ್ದ, ಕುಖ್ಯಾತ ಕಳ್ಳ ಭೀಮಾಶಂಕರ @ ಭೀಮಾ ತಂದೆ ಸಂಬಣ್ಣ ಬೋಳೆವಾಡ ಸಾ: ಬೋಳೆವಾಡ ಹಾ:ವ: ಬಾಪುನಗರ ಗುಲಬರ್ಗಾ ಇತನಿಗೆ
ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರದ ಬೆಂಜಮಿನ್
ಸುಮಿತ್ರ ರವರ ಮನೆ , ಸಂತೋಷ ಕಾಲೋನಿ ಕಲ್ಯಾಣರಾವ ಕುಲಕರ್ಣಿ , ಕೋತಂಬರಿ ಲೇಔಟದ ಮಲ್ಲಿಕಾರ್ಜುನ ಪಾಟೀಲ, ಎನ್.ಜಿ.ಓ ಕಾಲೋನಿಯ ಶಶಿಕಲಾ, ವಿದ್ಯಾನಗರದ ವೀರಶೇಟ್ಟಿ ದೊಡ್ಡಮನಿ , ಶಾಂತಿನಗರದ ಅಪ್ತಾಬ ತಂದೆ ಅಬ್ದುಲ ರಜಾಕ ರವರುಗಳ ಮನೆ ಕಳ್ಳತನ ಆಗಿದ್ದು. ಈ 6 ಬಡಾವಣೆಗಳಲ್ಲಿ ಮನೆ ಕಳ್ಳತನವಾದ ಪ್ರಕರಣಗಳನ್ನು ಬೇದಿಸಿದ್ದು ಅಲ್ಲದೇ ಸ್ಪೇಶನ ಬಜಾರ ಪೊಲೀಸ
ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಾಸ್ತ್ರಿನಗರ, ರಹೆಮತ ನಗರ, ಪಿ&ಟಿ ಕಾಲೋನಿ, ವಿರೇಶ ನಗರ 4 ಬಡಾವಣೆಗಳಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣಗಳನ್ನು ಹೀಗೆ ಒಟ್ಟು
10 ಪ್ರಕರಣಗಳು ಬೇಧಿಸಿ ಆರೋಪಿತನಿಂದ ಒಟ್ಟು 250 ಗ್ರಾಂ ಬಂಗಾರದ ಆಭರಣಗಳು ಹಾಗೂ 1 ಕೆ.ಜಿ
ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿ ಭೀಮಾಶಂಕರ @ ಭೀಮಾ ಬೊಳೆವಾಡ ಇತನು 2011 ನೇ ಸಾಲಿನಲ್ಲಿ ಎನ್.ಜಿ.ಓ ಕಾಲೋನಿಯ ಪ್ರಾಣೇಶ ಹೆರೂರಕರ ರವರ ಮನೆ ಕಳ್ಳತನ ಪ್ರಕರಣದಲ್ಲಿ
ದಸ್ತಗಿರಿಯಾಗಿ ಜೈಲಿಗೆ ಹೋಗಿದ್ದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ
ಹಾಜರಾಗದೇ ಕಳೆದ ಒಂದೂವರೆ ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಇತನ ವಿರುದ್ದ ನ್ಯಾಯಾಲಯದಿಂದ 3 ದಸ್ತಗಿರಿ ವಾರೆಂಟಗಳು ಜಾರಿಯಾಗಿದ್ದು, ಸದರಿ ಕುಖ್ಯಾತ ಕಳ್ಳನು ಒಬ್ಬಳು ಹೆಂಡತಿ ಅಲ್ಲದೆ 3 ಹೆಣ್ಣು ಮಕ್ಕಳೊಂದಿಗೆ
ಸಂಬಂಧ ಬೆಳೆಸಿದ್ದು ವಿಚಾರಣೆಯಿಂದ ತಿಳಿದುಬಂದಿರುತ್ತದೆ. ಅಲ್ಲದೆ ಸುಮಾರು 7-8 ಕಡೆ ರಾತ್ರಿ
ವೇಳೆ ಬೆಡ್ ರೂಮ ಕಿಟಕಿಯಿಂದ ಬಂಬೂದಿಂದ ಪಾಂಟ್ಯ ಶರ್ಟಗಳನ್ನು ತೆಗೆದು ಹಣ ಕಳ್ಳತನ ಮಾಡಿರುವ ಬಗ್ಗೆ, ಹೇಳಿದ್ದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
No comments:
Post a Comment