ಅಶೋಕನಗರ ಪೊಲೀಸ ಠಾಣೆ
ಕಳವು ಪ್ರಕರಣ:
ಶ್ರೀ ಕಲ್ಲಪ್ಪ ತಂದೆ ಸಾಯಿಬಣ್ಣ ನಾಟೀಕಾರ ಸಾ:
ಶ್ರೀನಿವಾಸ ಸರಡಗಿ ತಾ:ಜಿ: ಗುಲಬರ್ಗಾ ರವರು ದಿನಾಂಕ 18/07/2013 ರಂದು
ಸಾಯಂಕಾಲ ಧಾರವಾಡಕ್ಕೆ ಹೊಗುವ
ಕುರಿತು ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆಗೆ
ಸೇಡಂ-ಹಾವೇರಿ ಬಸ್ಸಿನಲ್ಲಿ ಲಗೇಜ ಬ್ಯಾಗ ಮತ್ತು ಸೊನಿ
ಕಂಪನಿಯ ಲ್ಯಾಪಟಾಪ ಮತ್ತು ಶಾಲಾ ದಾಖಲಾತಿಗಳು ಇರುವ ಬ್ಯಾಗನ್ನು ಬಸ್ಸಿನ
ಸೀಟಿನ ಮೇಲೆ ಇಟ್ಟು ನೀರಿನ ಬಾಟಲ ತರಲು ಬಸ
ಸ್ಟ್ಯಾಂಡ ಕ್ಯಾಂಟಿನಕ್ಕೆ ಹೊಗಿ ಬಂದು
ನೊಡುವಷ್ಟರಲ್ಲಿ ಶಾಲಾ ದಾಖಲಾತಿ & ಲ್ಯಾಪಟಾಪ ಇರುವ ಬಾಗ ಇರಲಿಲ್ಲ.
ಎಲ್ಲಾ ಕಡೆ ಹುಡುಕಿದ್ದು ಸಿಗಲಿಲ್ಲ. ಯಾರೋ
ಕಳ್ಳರು ಕಳ್ಳತನ
ಮಾಡಿಕೊಂಡು ಹೊಗಿದ್ದು ಬ್ಯಾಗದಲ್ಲಿ 1) ಒಂದು
ಸೊನಿ ಲ್ಯಾಪಟಾಪ ಅ:ಕಿ: 40,000/- ರೂಪಾಯಿ
ಮತ್ತು 1) ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ, 2) ಪಿ.ಯು.ಸಿ
ಮೂಲ ಅಂಕಪಟ್ಟಿ 3) ಆಧಾರ ಕಾರ್ಡ, 4) ಕಾಲೇಜ
ರಸಿದಿಗಳು ಮತ್ತು
ಇನ್ನಿತರೆ ಶಾಲಾ ದಾಖಲಾತಿ ಇದ್ದು ಪತ್ತೆ ಮಾಡಿ ಕೊಡುವ ಕುರಿತು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸೇಡಂ ಪೊಲೀಸ ಠಾಣೆ:
ಕಳವು ಪ್ರಕರಣ:
ದಿನಾಂಕ:18-07-2013
ರಂದು ಶ್ರೀ. ಅಕ್ಬರ್ ಸಾಬ ನದಾಫ್ ಶಾಖಾಧಿಕಾರಿಗಳು, ಜೆಸ್ಕಂ ಸೇಡಂ. ರವರು ಠಾಣೆಗೆ ಹಾಜರಾಗಿ ಸೇಡಂ-ಚಿಂಚೋಳಿ
ರೋಡಿನ ಸಟಪಟನಳ್ಳಿಗೆ ಹೋಗುವ ಮಾರ್ಗದಲ್ಲಿರುವ ಐಡಲ್ 11. ಕೆ.ವಿ. ಶಿರೋಳ್ಳಿ ವಿದ್ಯೂತ್ ಮಾರ್ಗದ 5 ಕಂಬಗಳ
ಅಂದಾಜು 1.3 ಕಿ.ಮೀ ಅಳತೆಯ ಅಲೂಮಿನಿಯಂ ವೈಯರನ್ನು ದಿನಾಂಕ:17-07-2013 ರಂದು ರಾತ್ರಿ 1000
ಗಂಟೆಯಿಂದ ಬೆಳಗ್ಗೆ 0600 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ.
ಸದರಿ ಕಳವಾಗಿರುವ ವಿದ್ಯೂತ್ ಕಂಬದ ಅಲೂಮಿನಿಯಂ ವೈಯರಿನ ಅಂದಾಜು ವೆಚ್ಚ ರೂ 45,000/- ಗಳು ಆಗಿರುತ್ತದೆ.
ಕಳ್ಳತನವಾದ ವಿಷಯ ಮೇಲಾಧಿಕಾರಿಗಳಿಗೆ ತಿಳಿಸಿ ಠಾಣೆಗೆರುವಲ್ಲಿ ತಡವಾಗಿರುತ್ತದೆ. ಕಾರಣ ಸದರಿ
ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ದೂರು ಅರ್ಜಿ ಸಾರಂಶದ
ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಮಲಾಪೂರ ಪೊಲೀಸ್
ಠಾಣೆ:
ವರದಕ್ಷಿಣೆ
ಕಿರುಕುಳ ಪ್ರಕರಣ:
ಶ್ರೀಮತಿ.ವಿಶಾಖಾ ಗಂ. ಶಿವರಾಜ ಗೋಗರೆ ಸಾ: ಸೊಂತ ರವರು ದಿ: 28-11-10 ರಂದು ಶಿವರಾಜ ತಂದೆ ಸುಭಾಷ ಗೋಗರೆ ರವರೊಂದಿಗೆ
ವಿವಾಹವಾಗಿದ್ದು ನನ್ನಮದುವೆ ಕಾಲಕ್ಕೆ ಅವರ ತಂದೆ
ತಾಯಿ ಶಿವರಾಜನಿಗೆ 5 ತೊಲೆ
ಬಂಗಾರ, ಬಟ್ಟೆ-ಬರೆ, ,ವಾಚ್ ಹಾಗೂ ನಗದು ಹಣ 11,000/- ರೂಪಾಯಿ ವರದಕ್ಷಿಣೆ
ರೂಪದಲ್ಲಿ ನೀಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡನ ಮನೆಯಲ್ಲಿ ಮೊದ
ಮೊದಲು ಸರಿಯಾಗಿ ನೋಡಿಕೊಳ್ಳುತ್ತಿದ್ದು, ನಂತರ ಗಂಡ ಶಿವರಾಜ ತಂದೆ ಸುಭಾಷ ಗೋಗರೆ, ಅತ್ತೆ ರೇವತಿ ಗಂಡ ಸುಭಾಷರಾವ ಗೋಗರೆ , ನಾಗರಾಣಿ
ಗಂಡ ಗಜಾನಂದ ಮಾಲ್ದಾರ, ಗಜಾನಂದ ತಂದೆ ದತ್ತಾತ್ರೇಯ ಮಾಲ್ದಾರ, ಲಖನ
ತಂದೆ ಸುಭಾಷರಾವ ಗೋಗರೆ ಮತ್ತು ದತ್ತಾತ್ರೇಯ ತಂದೆ ಬಳವಂತರಾವ ಮಾಲ್ದಾರ ರವರು ತವರು ಮನೆಯಿಂದ
ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರ ತರಬೇಕು ಇಲ್ಲದಿದ್ದರೆ ಶಿವರಾಜನಿಗೆ ಇನ್ನೊಂದು ಮದುವೆ
ಮಾಡುತ್ತೇವೆ ಅಂತಾ ದಿನಾಲು ಅವಾಚ್ಯವಾಗಿ ಬೈಯ್ಯುತ್ತಾ ಕೈಯಿಂದ ನನಗೆ ಹೊಡೆಯುವುದು ಮತ್ತು
ನೂಕಿಸಿಕೊಡುವುದು ಮಾಡುತ್ತಾ ನನಗೆ ಸರಿಯಾಗಿ ಊಟಕ್ಕೆ ಹಾಕದೇ ಒಂದು ರೂಮಿನಲ್ಲಿ ಕೂಡಿಹಾಕಿ
ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಳಲಾಗಿದೆ
No comments:
Post a Comment