ಯು.ಡಿ.ಆರ್ ಪ್ರಕರಣ
ಗ್ರಾಮೀಣ ಪೊಲೀಸ ಠಾಣೆ:ಆಕಾಶ ತಂದೆ ಶಾಂತಕುಮಾರ ಖಾಬಾ ವಯಾ|| 18 ವರ್ಷ ವಿದ್ಯಾರ್ಥಿ ಸಾ||
ಚೆಂಗಟಾ ತಾ||ಚಿಂಚೊಳಿ ಜಿ||ಗುಲಬರ್ಗಾ ಇತನು ತನ್ನ ಅಜ್ಜ ಅಜ್ಜಿ ಮನೆಯಾದ ತಾಜಸುಪ್ತಾನಪೂರದಲ್ಲಿ ದಿನಾಂಕ: 27-06-2013 ರಂದು ಮಧ್ಯಾಹ್ನ ಚಹಾ ಮಾಡುವ
ಕುರಿತು ಸ್ಟೋ ಹತ್ತಿಸುವಾಗ ಆಕಸ್ಮಿಕವಾಗಿ ಸ್ಟೋ ಬ್ಲಾಸ್ಟ ಆಗಿ ಅವನು ಧರಿಸಿರುವ ಬಟ್ಟೆಗಳಿಗೆ ಬೆಂಕಿ ಹತ್ತಿ ಮೈ
ಸುಟ್ಟಿದ್ದರಿಂದ ದಿನಾಂಕ:01-07-2013 ರಂದು ಸಾಯಂಕಾಲ;5-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ
ಶ್ರೀಮತಿ ನಾಗವೇಣಿ ಗಂಡ ಶಾಂತಕುಮಾರ ಸಾ|| ಚೆಂಗಟಾ ರವರು ಹೇಳೀಕೆ ಮೇಲಿಂದ ಠಾಣೆ ಯು.ಡಿ.ಆರ್.
ನಂ:18/2013 ಕಲಂ, 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಯು.ಡಿ.ಆರ್ ಪ್ರಕರಣ
ಗ್ರಾಮೀಣ ಪೊಲೀಸ ಠಾಣ:ದಿನಾಂಕ:30-06-2013
ರಿಂದ ದಿನಾಂಕ: 01-07-2013 ರಂದು ಮಧ್ಯಾಹ್ನ ದ ಅವಧಿಯಲ್ಲಿ ಮೃತ ಕಾಶಿಭಾಯಿ ಗಂಟ ಮಲ್ಲಪ್ಪಾ ಕವರಿ
ವಯಾ|| 65 ವರ್ಷ ಇವಳು ಮಾನಸಿಕ ಅಸ್ವಸ್ಥೆಯಿದ್ದು ಬಸವಣಪ್ಪಾ ಇವರ ತೋಟದ ಭಾವಿಯಲ್ಲಿ ನೀರು
ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಕೆಸರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾಳೆ ಅಂತಾ
ಶ್ರಿಮತಿ ಶರಣಮ್ಮಾ ಗಂಡ ಮಹಾಂತಣ್ಣ ಸಾ|| ಶರಣಸಿರಸಗಿ ಗುಲಬರ್ಗಾ ರವರು ಹೇಳೀಕೆ ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಯು.ಡಿ.ಅರ್. ನಂ: 19/2013 ಕಲಂ, 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment