Police Bhavan Kalaburagi

Police Bhavan Kalaburagi

Wednesday, July 3, 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:ಶ್ರೀಮತಿ ಸುನಂದಾ @ ಜಯಶ್ರೀ ಗಂಡ ಪ್ರಭುಶರಣ ವಯಾ:32 ವರ್ಷ ಸಾ: ಪಾವನಗಂಗಾ ಕಾಲೋನಿ ರಾಜಾಪೂರ ಶಹಾಬಾದ ರಿಂಗ ರೋಡ  ಗುಲಬರ್ಗಾರವರು  ಸುಮಾರು ಮೂರು ವರ್ಷಗಳ ಹಿಂದೆ ಸೂಗುರೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಭುಶರಣ ತಂದೆ ಶಿವಣ್ಣಾ ಪಾಣಿ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ವರದಕ್ಷಿಣೆ ಅಂತಾ ಒಂದು ಲಕ್ಷ ರೂಪಾಯಿಗಳು ಹಾಗೂ 5 ತೋಲೆ ಬಂಗಾರ ಹಾಗೂ ಇತರೆ ಸಾಮಾನುಗಳು ಕೊಟ್ಟು ಕೊಡಲಾಗಿದೆ.ನನ್ನ ಗಂಡನವರು ಸೇಡಂ ತಾಲೂಕಿನ ಬೋರಕಪಳ್ಳಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ವರ್ಷದ ನಂತರ ಅತ್ತೆಯಾದ ಪಾರ್ವತಿ ,ಮಾವ ಶಿವಣ್ಣನಾದಿನಿ ಅಕ್ಕಮ್ಮಾ ಕಾಮಾಕ್ಷಿ ಇವರೆಲ್ಲರೂ ಸೇರಿ ನನಗೆ ಮನೆಯಲ್ಲಿ ಯಾವುದೇ ಕೆಲಸ ಮಾಡಿದ್ದರೂ ನಿನಗೆ ಕೆಲಸ ಮಾಡಲು ಬರುವುದಿಲ್ಲ. ನನ್ನ ಮಗನಿಗೆ ನೀನು  ಸರಿಯಾದ ಜೋಡಿಯಲ್ಲ ಅದಕ್ಕೆ ಅವನು ಮನೆಗೆ ಬರುವದನ್ನು ಬಿಟ್ಟಿದ್ದಾನೆ,. ನೀನು ನಿನ್ನ ತವರು ಮನೆಗೆ ಹೋಗು ಅಂತಾ ಬೈಯುವದುಹೊಡೆಯುವದು ಮಾಡಿ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ನನ್ನ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಬಂದು ನನ್ನ ಅತ್ತೆ ಮಾವನವರಿಗೆ ತಿಳುವಳಿಕೆ ಹೇಳಿದರೂ ಅವರು ಹಾಗೇ ಕಿರುಕುಳ ಕೊಡುವದು ಮುಂದುವರಿಸಿದ್ದರು, ಇನ್ನೂ ವರದಕ್ಷಣೆ ರೂಪದಲ್ಲಿ 1 ಲಕ್ಷ ರೂಪಾಯಿಗಳು ಎರಡು ತೊಲೆ ಬಂಗಾರ ತೆಗೆದುಕೊಂಡು ಬಾ ನಾವು ಕಟ್ಟುತ್ತಿರುವ ಮನೆಗೆ ಸಹಾಯವಾಗುತ್ತದೆ ಅಂತಾ ಹೇಳುತ್ತಿದ್ದರು, ದಿನಾಂಕ 28-06-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸ ಮಾಡುತ್ತಿರುವ ಊರಾದ ಬುರಗಪಲ್ಲಿ  ಶಾಲೆಗೆ ಹೋದಾಗ ನನ್ನ ಗಂಡ ಊರಿಗೆ ಹೋಗಲು ಬಸ್ ದಾರಿ ಕಾಯುತ್ತಿದ್ದನು. ಅವನು ನಮ್ಮನ್ನೇಲ್ಲ ನೋಡಿದ ಕೂಡಲೇ ಅವಾಚ್ಯವಾಗಿ ಬೈಯುತ್ತಿದ್ದರು, ನನ್ನ ತಂದೆ ತಾಯಿಗೆ ಯಾಕೇ ಬೈಯುತ್ತಿದ್ದೀ ಎಷ್ಟು ದಿವಸ ಅಂತಾ ಮನೆ ಬಿಟ್ಟು ಇರುತ್ತಿ ಅಂತಾ ಕೇಳಿದಾಗ ಹೊಡೆ ಬಡೆ ಮಾಡಿರುತ್ತಾನೆ. ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:40/2013 ಕಲಂ 498(ಎ),323,504,506 355 ಸಂಗಡ 34 ಐಪಿಸಿಮತ್ತು 3 4 ಡಿ.ಪಿ ಎಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:


ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ ಕವಿತಾ ಗಂಡ ಶಿವಕುಮಾರ ವಯಾ:20 ವರ್ಷ ಸಾ: ಸ್ಟೇಶನ ಏರಿಯಾ ತಾರಫೈಲ್ ಗುಲಬರ್ಗಾರವರು ,ನನ್ನ ಮದುವೆಯು ದಿನಾಂಕ:01-07-2009 ರಂದು ಶಿವಕುಮಾರ ತಂದೆ ಧರ್ಮರಾಜ ಕಾಂಬಳೆ ಸಾದೌಂಡ ಇವರೊಂದಿಗೆ ನಾಲ್ಕು ಲಕ್ಷದವರೆಗೆ ಖರ್ಚು ಮಾಡಿ ನನ್ನ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಕೆಲವು ತಿಂಗಳುಗಳ ನಂತರ ನನ್ನ ಪತಿ ಹಾಗೂ ಅತ್ತೆಯಾದ ಸೋನಾಬಾಯಿ ಗಂಡ ದರ್ಮರಾಜ ಕಾಂಬಳೆ ನಾದಿನಿಯಾದ ಭಾರತಿ ಗಂಡ ಸುನೀಲ ಹೋಳಕರ ಮತ್ತು ಇವಳ ಮಗನಾದ ಮಹೇಶ ತಂದೆ ಸುನೀಲ ಹೋಳಕರ ಇವರೆಲ್ಲರೂ ಒಂದಲ್ಲಾ ಒಂದು ರೀತಿಯ ತ್ರಾಸು ಕೊಡುತ್ತಾ ಬಂದಿರುತ್ತಾರೆ. ದಿನಾಂಕ:18-04-2013 ರಂದು ನಸುಕಿನ ವೇಳೆ 4-30 ಗಂಟೆಯ ಸುಮಾರಿಗೆ ತಾರಫೈಲದಲ್ಲಿರುವ ನನ್ನ ತಂದೆಯ ಮನೆಗೆ ನನ್ನ ಗಂಡನಾದ ಶಿವಕುಮಾರ ಹಾಗೂ ಆತನೊಂದಿಗೆ  ಇನ್ನೂ 2-3 ಜನ ಜನರೊಂದಿಗೆ ಬಂದು ನನಗೆ ಮನೆಯಿಂದ ಕರೆದು ಅವಾಚ್ಯ ಶಬ್ದಗಳಿಂದ ನೀನು ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂದರೆ ಇಲ್ಲೆ ಇದ್ದಿದಿಯಾ ಅಂತಾ ಹೊಡೆಯುತ್ತಿದ್ದಾಗ ನಮ್ಮ ಮನೆಯವರು ಎದ್ದು ಬಂದು ಜಗಳ ಬಿಡಿಸಲು ಪ್ರಯತ್ನಿಸುತ್ತಿರುವಾಗ ನನ್ನನ್ನು ಬೀಟು ಹೋಗಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 39/2013 ಕಲಂ, 498 (ಎ), 323, 504, 506, ಸಂಗಡ 34 ಐಪಿಸಿ ಮತ್ತು 3 ಮತ್ತು 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,

No comments: