Police Bhavan Kalaburagi

Police Bhavan Kalaburagi

Wednesday, July 3, 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:02/07/2013 ರಂದು ಮಧ್ಯಾಹ್ನ 3:15 ಗಂಟೆಗೆ ನಿಂಬಾಳ ಐ.ಬಿ. ಹತ್ತಿರ ನಿಂಬಾಳ - ದುದ್ದನಿ ರೊಡಿನಲ್ಲಿ ನನ್ನ ತಮ್ಮನಾದ ಸೋಮನಾಥನು  ಮೋಟಾರ್ ಸೈಕಲ್ ನಂ: MH:13 X:2480 ನೇದ್ದರ ಮೇಲೆ ಶರಣಪ್ಪನಿಗೆ ಕೂಡಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಾರ ನಂ: KA:22 N:4470 ನೇದ್ದರ ಚಾಲಕನಾದ ರಾವುತಪ್ಪ ತಂದೆ ಅಣ್ಣಪ್ಪ ಮದರಿ ಇತನ್ನೂ ತನ್ನ ಕಾರನ್ನು ಅತೀವೇಗದಿಂದ ಅಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ್ ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶರಣಪ್ಪನಿಗೆ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತವೆ. ಅಂತಾ ದೆ. ಕಾರಣ ಸದರಿ ಕಾರಿನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಶೈಲ ತಂದೆ ಶ್ರೀಮಂತ ಹೊನ್ನಳ್ಳಿ ಸಾ:ನಿಂಬಾಳ  ತಾ: ಆಳಂದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:56/2013 ಕಲಂ:279,337,338,304(ಎ) ಐ.ಪಿ.ಸಿ ಸಂಗಡ187 ಐ.ಎಮ್.ವ್ಹಿ.ಆಕ್ಟ್.ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ವಿಧ್ಯಾರ್ತಿಯ ಮೇಲೆ ಹಲ್ಲೆ:

ರೋಜಾ ಪೊಲೀಸ್ ಠಾಣೆ:ನಾನು ಗೋಲ್ಡರೋಜ ಶಾಲೆ ಖಮರ ಕಾಲೋನಿಯಲ್ಲಿ 7ನೇ ತರಗತಿಯ (ಎ) ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದೆನೆ.  ಕೆಲವು ವರ್ಷಗಳ ಹಿಂದೆ ಮನೆಯ ಚತ್ತ ಮೇಲಿಂದ ಕೆಳಗಡೆ ಬಿದ್ದು ತಲೆಗೆ ಭಾರಿಗಾಯಹೊಂದಿ ಸೋಲಾಪೂರದಲ್ಲಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗುಣಮುಖನಾಗಿ ಶಾಲೆಗೆ ಸೇರಿಕೆ ಆಗುವ ವೇಳೆಯಲ್ಲಿ ನನಗೆ ಆದ ಘಟನೆಯ ಬಗ್ಗೆ ಶಾಲಾ ಶಿಕ್ಷಕರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿಲಾಗಿತ್ತು. ದಿನಾಂಕ:02/07/2013 ರಂದು ಮಧ್ಯಾಹ್ನ ಹಿಂದಿ ವಿಷಯದ ಹೋಮವರ್ಕ ಮಾಡಿರುವದಿಲ್ಲಾ ಬಾಕಿ ಉಳಿದಿದ್ದು ಅದಕ್ಕಾಗಿ ಕ್ಲಾಸಮೆಂಟ ಹುಡುಗ ಮಾನಿಟರ ಆಗಿರುವ ಸಮೀರ ಹುಡುಗನ ಹತ್ತಿರ ಹಿಂದಿ ನೋಟ ಪುಸ್ತಕ ಕೊಡು ನಾನು ಕಂಪ್ಲೀಟ ಮಾಡಿ ಕೊಡುತ್ತೇನೆ ಅಂತಾ ಹೇಳಿ ಅವನಿಂದ ನೋಟ ಪುಸ್ತಕ ತೆಗೆದುಕೊಂಡಿದ್ದು ಅಷ್ಟರಲ್ಲಿಯೇ ನಮ್ಮ ಶಾಲೆಯ ರಿಜ್ವಾನ ಈತನು ಮೊದಲು ನಾನು ನೋಟಬುಕ್ ಬರೆದುಕೊಡುತ್ತೇನೆ ಅಂತಾ ನನಗೆ ತಕರಾರು ಮಾಡುತ್ತಿದ್ದನು ನಾನು ಅವನು ಒಬ್ಬರಿಗೊಬ್ಬರು ನೋಟಬುಕ್ ಬರೆಯುವ ವಿಷಯದಲ್ಲಿ ಮಾತನಾಡುತ್ತಿರುವ ಶಬ್ದ ಕೇಳಿ ಗಣಿತ ವಿಷಯದ ಸರ್ ಆಗಿರುವ ಇಮ್ರಾನ ಮತ್ತು ಸಮಾಜ ವಿಷಯದ ಹೇಳುವ ಟೀಚರ ಇವರೊಂದಿಗೆ ಬಂದು ನನಗೆ ಮೇರೆಕ್ಲಾಸ್ ಮೇ ಬಹುತ ಶಾಣಾ ಹೋಗಯಾ ಕ್ಯಾರೆ ತೆರೆಕೂ ತಮೀಜ ನಹಿ ಹೈ ಕ್ಯಾರೆ ಅಂತಾ ನನಗೆ ಬೈದಿದ್ದು ಅದಕ್ಕೆ ನಾನು ಏನು ಮಾತನಾಡದೇ ನಿಂತಾಗ ಮೇರೆಕೂ ಉಪ್ಪರಸೇ ಆರ್ಡರ್ಸ ಹೈ ತುಮಾರೆ ಜೈಸೆ ಗಲಾಟೆ ಕರನೆವಾಲೆ ಬಚ್ಚೊಕೂ ಮಾರನೆಕಾ ಇಜಾಜತ್ ಹೈ ಅಂತಾ ಹೇಳಿ ತನ್ನ ಕೈಯಲ್ಲಿ ತಂದಿದ್ದ ಸಣ್ಣ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದು ಅವರು ಹೊಡೆದ ಏಟಿಗೆ ನಾನು ಒಮ್ಮೆಲೆ ಮೂರ್ಚೆ ತಪ್ಪಿ ಬಿದ್ದಿರುತ್ತೆನೆ. ನಂತರ ನನಗೆ ಏನಾಗಿದೆ ಗೊತ್ತಿಲ್ಲಾ ಸಾಯಂಕಾಲ 7:00 ಗಂಟೆಗೆ ಆಸ್ಪತ್ರೆಯಲ್ಲಿ ನನ್ನ ತಂದೆ ತಾಯಿಯವರು ನನ್ನ ಅಣ್ಣನವರು ಆಸ್ಪತ್ರೆಯಲ್ಲಿ ತಂದಿರುವದು ನನಗೆ ಪ್ರಜ್ಞೆ ಬಂದಾಗ ತಿಳಿದಿರುತ್ತದೆ ಅಂತಾ ಶೇಖಅಮೀರ ತಂದೆ ಶೇಖಶಬ್ಬೀರ ಅಹ್ಮದ ವಯ:13 ವಿದ್ಯಾರ್ಥಿ ಗೋಲ್ಡ ರೋಜ ಶಾಲೆ ಖಮರ ಕಾಲೋನಿ ಸಾ: ಮಹ್ಮದ ರಫಿಕ್ ಚೌಕ್ ಹತ್ತಿರ ಖಮರ ಕಾಲೋನಿ ಗುಲಬರ್ಗಾ ಇತನು ನನಗೆ ಹೊಡೆದಿರುವ ಇಮ್ರಾನ ಸರ್ ಹಾಗೂ ಗೋಲ್ಡ ರೋಜ ಶಾಲೆಯ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:38/2013 ಕಲಂ.324,504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: