ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:03/07/2013 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಊಟ ಮಾಡಿ ಮನೆಗೆ ಕೀಲಿ ಹಾಕಿ ನನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿಯೇ ಮಲಗಿಕೊಂಡಿದ್ದು ದಿನಾಂಕ:-03/07/2013 ರಂದು ಮುಂಜಾನೆ 6:30 ಗಂಟೆ ಸುಮಾರಿಗೆ ನನ್ನ ತಮ್ಮನು ಪೋನ ಮಾಡಿ ಮನೆಯ ಬಾಗಿಲು ತೆರೆದು ಬಟ್ಟೆಗಳು ಚೆಲ್ಲಾ ಪಿಲ್ಲಾಯಾಗಿ ಬಿದ್ದಿರುತ್ತವೆ ಅಂತಾ ತಿಳಿಸಿದ್ದರಿಂದ ನಾನು ಬಂದು ನೋಡಲು ಅಲಮಾರಿಯಲ್ಲಿಟ್ಟಿದ್ದ 10 ಗ್ರಾಮ ಬಂಗಾರದ ನೆಕಲೆಸ್ ಅಕಿ 14000/- ರೂಪಾಯಿಗಳು, ಬೆಳ್ಳಿಯ ಕಾಲು ಚೈನ ಅಕಿ 5000/-, ರೂ ಹಾಗೂ ನಗದು ಹಣ 400/- ಹೀಗೆ ಒಟ್ಟು 19,4,00/- ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಲಿಂ ತಂದೆ ಮಹಮ್ಮದ ಯಾಸೀನ ಸಾ:ಮಿಲತ್ತನಗರ ಇವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 329/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:02/07/2013 ರಂದು ರಾತ್ರಿ 10:00 ಗಂಟೆಯ ಸಮಯಕ್ಕೆ ನಾನು ನನ್ನ ಕೆಎ-39-9047 ನೇದ್ದು ಲಾರಿಯನ್ನು ಭಾರತ ಪೋರ್ಡ ಶೋ ರೂಮ್ ಎದುರುಗಡೆ ಇರುವ ಖುಲ್ಲಾ ಪ್ಲಾಟದಲ್ಲಿ ಲಾರಿ ನಿಲ್ಲಿಸಿ ಮನೆಗೆ ಹೋಗಿ ಮಲಗಿಕೊಂಡಿದ್ದು ಬೆಳಿಗ್ಗೆ 6:00 ಗಂಟೆಗೆ ಬಂದು ನೋಡಲು ನಿಲ್ಲಿಸಿದ ಸ್ಥಳದಲ್ಲಿ ನನ್ನ ಲಾರಿ ಇರಲಿಲ್ಲ. ತಾವರಗೇರಾ ಗ್ರಾಮಕ್ಕೆ ಹೋದಾಗ ಅಲ್ಲಿ ಗೊಡಾನ್ ಹತ್ತಿರ ನನ್ನ ಲಾರಿಯನ್ನು ನಿಲ್ಲಿಸಿದ್ದು ಲಾರಿಯ 6 ಟೈಯರಗಳು ಡಿಸ್ಕ್ ಸಮೇತ ಅಂದಾಜು ಕಿಮ್ಮತ್ತು-45,000/-ರೂಪಾಯಿಗಳದ್ದು ಬಿಚ್ಚಿಕೊಂಡು ಕಳ್ಳತನ ಮಾಡಿರುತ್ತಾರೆ. ಅಂತಾ ಚಾಂದಖಾನ ತಂದೆ ಮೈಹಿಬೂಬ ಖಾನ್ ಸಾ|| ಕಪನೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:331/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಂಪೌಂಡ ಗೊಡೆ ಹಾನಿ ಮಾಡಿದ ಬಗ್ಗೆ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:03/07/2013 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಿಂಗಣ್ಣ ತಂದೆ ಶರಣಪ್ಪ ಹರಸೂರ ಇತನು ತನ್ನ ಸಂಗಡ ಇತರರನ್ನು ಕರೆದುಕೊಂಡು ಕೃಷಿ ವಿಶ್ವವಿಧ್ಯಾಲಯದ ಕೌಂಪೌಂಡ ಗೋಡೆಯನ್ನು ಯಾವುದೇ ಮಾಹಿತಿಯನ್ನು ನೀಡದೆ 40 ಮೀಟರ ಉದ್ದರ ಗೋಡೆಯನ್ನು ಒಡೆದು ಹಾನಿ ಮಾಡಿರುತ್ತಾರೆ ಈ ವಿಷಯದ ಬಗ್ಗೆ ಕೇಳಲು ಹೋದ ನನಗೆ ಮತ್ತು ಎಎಇ ರವರೊಂದಿಗೆ ಅಸಭ್ಯವಾಗಿ ವರ್ತಿಸಿ ಬೇದರಿಕೆ ಹಾಕಿರುತ್ತಾನೆ ಅಂತಾ ಶ್ರೀ ಧರ್ಮರಾಜ ಪ್ರೋಜೆಕ್ಟ್ ಡೈರೆಕ್ಟ ರ ಅಗ್ರೀ ಕಲ್ಚರ ರಿಸರ್ಚ ಸ್ಟೇಷನ ಆಳಂದ ರಸ್ತೆ ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:332/2013 ಕಲಂ 143, 147, 447, 427, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ::
ಕಮಲಾಫೂರ ಪೊಲೀಸ ಠಾಣೆ: ದಿನಾಂಕ01-07-2013 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ತಾಂಡಾದಲ್ಲಿದ್ದ ಖುಲ್ಲಾ ಪ್ಲಾಟದಲ್ಲಿ ಮನೆ ಕಟ್ಟಲು ನನ್ನ ಅಣ್ಣ ಭೀಮರಾವ ಇವನು ತಯ್ಯಾರಿ ಮಾಡುತ್ತಿರುವಾಗ ನಾನು, ಮೊದಲು ಮುಂಬೈಯಲ್ಲಿದ್ದ ಜಾಗ ಹಾಗು ಇಲ್ಲಿದ್ದ ಆಸ್ತಿಯಲ್ಲಿ ಹಂಚಿಕೆಯಾದ ನಂತರ ಮನೆ ಕಟ್ಟು ಅಂತಾ ತಡೆಯಲು ಹೋದಾಗ ನಮ್ಮ ಅಣ್ಣ ಭೀಮರಾವ, ಅತ್ತಿಗೆಯಾ, ಕಮಲಾಬಾಯಿ, ಆತನ ಮಗನಾದ ಸಂತೋಷ ಇವರು ನಮ್ಮ ಮನೆಯ ಮುಂದಿನ ರಸ್ತೆ ಮೇಲೆ ಬಂದು ನನ್ನ ಸಂಗಡ ಜಗಳ ತೆಗೆದು ಹೊಡೆದಿರುತ್ತಾರೆ ಅಂತಾ ಶ್ರೀ ಲಿಂಬು @ ಲಿಂಬಾಜಿ ತಂದೆ ಉಮ್ಲಾ ರಾಠೋಡ ಸಾ:ಸೊಂತ ಹರ್ಜಿ ತಾಂಡಾ ತಾಃಜಿಃ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ, 341, 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment