Police Bhavan Kalaburagi

Police Bhavan Kalaburagi

Saturday, July 6, 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ.ದಸ್ತಗೀರ ತಂದೆ ಮಹಮ್ಮದ ಜಾನಿ ಆಳಂದ ವಯ;60 ಜ್ಯಾತಿ;ಮುಸ್ಲಿಂ ಉ;ಒಕ್ಕಲುತನ ಸಾ;ಸುಂಟನೂರ ಗ್ರಾಮ ತಾ;ಆಳಂದ   ಜಿ;ಗುಲಬರ್ಗಾ  ರವರು  ನನ್ನ ಅಣ್ಣನ ಮಗನಾದ ಲಾಲಾ ಸಾಹೇಬ ತಂದೆ ಬಾಬುಸಾಬ ಆಳಂದ ವಯಾ||36 ವರ್ಷ ಸಾ;ಸುಂಟನೂರ ತಾ;ಆಳಂದ  ಇತನು   ದಿನಾಂಕ:05-07-2013 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಗುಲಬರ್ಗಾಕ್ಕೆ ಹೋಗಬೇಕೆಂದು ಸುಂಟನೂರ ಕ್ರಾಸಿ ಹತ್ತಿರ ನಿಂತಾಗ ಆಳಂದ ರೋಡ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ಚಾಲಕನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಬಂದವನೆ ರೋಡ ಬದಿಗೆ ನಿಂತ ಲಾಲಾಸಾಹೇಬ ಇತನಿಗೆ  ಡಿಕ್ಕಿ ಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ಸ್ಥಳದಲ್ಲಿಯೇ ಮೃತ ಪಟ್ಟನು, ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.32 ಎಫ್. 947 ನೆದ್ದು ಇದ್ದು ಅದರ ಚಾಲಕನ ಹೆಸರು ಸಿದ್ದರಾಮ  ಅಂತಾ ತಿಳಿದಿರುತ್ತದೆ ಅಂತಾ ಶ್ರೀ.ದಸ್ತಗೀರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 334/2013 ಕಲಂ.279,304(ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಮಧ್ಯಾಹ್ನಬಸವರಾಜ ತಂದೆ ಶಿವಶರಣಪ್ಪ,ಗುಂಡಪ್ಪಾ ತಂದೆಶಂಕ್ರೆಪ್ಪ,ಶರಣಪ್ಪ@ಶ್ಯಾಣು ಸಾ:ಹೊನಗುಂಟಿ,ಶಾಣು ಸಾ:ಗಂವಾರ ಹಾ:ವ:ಶಾಂತನಗರ,)ಶಿವಲೀಲಾ ಗಂಡ ಶಿವಶರಣಪ್ಪ ರವರೆಲ್ಲರೂ ಕೈಯಲ್ಲಿ ಬಡಿಗೆಮತ್ತು ಕಲ್ಲುಗಳನ್ನು ತೆಗೆದುಕೊಂಡು ನನ್ನ ತಮ್ಮ ಶಂಕರ & ಮಗ ಶರಣಬಸಪ್ಪ ಇಬ್ಬರನ್ನು ಹಿಡಿದು ಕೊಂಡು ಟ್ಯಾಕ್ಟರನಿಂದಹೊಲದಲ್ಲಿ ನೇಗಿಲ ಹೊಡೆಯಬೇಡಿರಿ ಅಂತಾ ತಕರಾರುಮಾಡಿನನ್ನ ತಮ್ಮ ಶಂಕರ & ಮಗ ಶರಣಬಸಪ್ಪ ನನ್ನನ್ನು ಬಿಡಿಸಲುಬಂದಾಗ ಅವರಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದಕಟ್ಟಿಗೆಯಿಂದ ಹೊಡೆದಿರುತ್ತಾರೆ.  ಸದರಿಯವರು ಹೊಡೆದರಿಂದ ನನಗೆಬಾಯಿಗೆ ರಕ್ತಗಾಯ & ಮುಂದಿನ  ಹಲ್ಲುಗಳು ಅಲುಗಾಡುತ್ತಿವೆ ಮತ್ತು ಒಳಪೆಟ್ಟಾಗಿರುತ್ತದೆ ಅಂತಾ ಶ್ರೀ ಶಿವಲಿಂಗಪ್ಪಾ ತಂದೆ ಪಂಪಣ್ಣಾ ತಿಪ್ಪನವರ ಸಾ:ಹಳೆ ಶಹಾಬಾದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 133/2013 ಕಲಂ:504,506,147,148,149,323,324,325 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಬಸವರಾಜ ತಂದೆ ಶಿವಶರಣಪ್ಪ ತಿಪ್ಪನವರ ಸಾ:ಭಂಕೂರ ರವರು ನಾನು ದಿನಾಂಕ:05/03/2013 ರಂದು ಮಧ್ಯಾಹ್ನ ಹಳೆ ಶಹಾಬಾದದ ಹನುಮಾನ ಗುಡಿಯ ಹತ್ತಿರ  ಇರುವಾಗ ಶಿವಲಿಂಗಪ್ಪಅಂಜನಾದೇವಿದ್ರೌಪತಿವಿದ್ಯಾವತಿಶಂಕರಮತ್ತು ಶರಣಬಸಪ್ಪಾ ಇವರುಗಳು ಬಂದು ನಮ್ಮ ಹೊಲದಲ್ಲಿ ಟ್ರಾಕ್ಟರನಿಂದ ನೇಗಿಲು ಹೊಡೆಯುವದನ್ನು ಏಕೆ ನಿಲ್ಲಿಸಿದ್ದು ಅಂತಾಅವಾಚ್ಯವಾಗಿ ಬೈದು ಕಟ್ಟಿಗೆಯಿಂದಕಲ್ಲಿನಿಂದಕೈಯಿಂದ ಹೊಡೆದರು ಮತ್ತು ಅಂಜನಾದೇವಿದ್ರೌಪತಿ ಮತ್ತು ವಿದ್ಯಾವತಿ ಕೂಡಿಕೊಂಡು ನಮ್ಮ ತಾಯಿಗೆ ಅವಾಚ್ಯವಾಗಿ ಬೈದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2013 ಕಲಂ:147,323,324,504 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಭೀಮಾಶಂಕರ ಕಾಂಬಳೆ ಅವರಿಗೆ ನಾನು ಕೊಟ್ಟಂತಹ 2 ತೊಲೆ ಬಂಗಾರ ಹಾಗೂ 80,000/-ರೂಪಾಯಿಗಳು ಕೇಳಲು ಹೋದಾಗ ಭೀಮಾಶಂಕರನ ಅಣ್ಣ ವಸಂತ ಕಾಂಬಳೆ ಇತನು ಅವಾಚ್ಯವಾಗಿ ಬೈದು ಮಾನಭಂಗ ಮಾಡಲು ಪ್ರಯತ್ನಿಸಿದಾಗ ನಾನು ಚಿರಾಡುತ್ತಿದ್ದಾಗ ಮನೆಯಲ್ಲಿದ್ದ ನಾಗಮ್ಮಾ ಕಾಂಬಳೆಮಾದೇವಿ ಕಾಂಬಳೆ ರವರು ಬೆದರಿಕೆ ಹಾಕಿ ಕೈಯಿಂದ ಹೊಡೆದಿರುತ್ತಾರೆ ಅಂತಾ ಶ್ರೀ ಮರೇಮ್ಮಾ ಗಂಡ ದೇವಪುತ್ರ ಸೋಮನ ಸಾ:ಮಿಲ್ಲತ ನಗರ ಶಹಾಬಾದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂ:135/2013 ಕಲಂ:323,354,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:05/07/2013 ರಂದು ಸಾಯಂಕಾಲ6.00 ಗಂಟೆ ಸುಮಾರಿಗೆ ನಮ್ಮ ಮನೆಯ ಎದರುಗಡೆ ನಮ್ಮ ತಮ್ಮ ಇಸ್ಮಾಯಿಲ್‌ ಇತನಿಗೆ ನಮ್ಮ ಕಾಕಂದಿರರಾದ ಲಾಲಬಾ ತಂದೆ ಮೋದಿನಸಾಬ,ಅಜೀಜ ತಂದೆ ಮೋದಿನಸಾಬ ಕೂಡಿ ವಿನಾಃಕಾರಣ ಜಗಳ ತೆಗೆಯುತ್ತಿದ್ದಾಗ ನಾನು ಹೋಗಿ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ನನಗೆ ಮತ್ತು ನನ್ನ ತಮ್ಮ ಇಸ್ಮಾಯಿಲ್‌ಗೆ ಹೊಡೆದು ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಇಬ್ರಾಹಿಂ ತಂದೆ ಅಬ್ದುಲ ನಬಿ ಸಾ:ದೇವನ ತೆಗನೂರ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:136/2013 ಕಲಂ: 324,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ ತಂದೆ ದ್ಯಾವಣ್ಣಾ ಕೂಡಿ ನಮ್ಮ ಮನೆಯ ಎದರುಗಡೆ ಹೋಗುತ್ತಿರುವಾಗ ನಮ್ಮ ಅಣ್ಣ  ಅಬ್ದುಲ ಸಾಬ ಮತ್ತು ಆತನ ಮಕ್ಕಳಾದ  ಇಬ್ರಾಹಿಂ, ಇಸ್ಮಾಯಿಲ್‌,ಮೋದಿನಸಾಬ,ವಾಹೀದ ರವರೆಲ್ಲರೂ ಕೂಡಿಕೊಂಡು ಸದರಿ ಹೊಲ ನನಗೆ ಮತ್ತು ಅಜೀಜ್‌ ಇಬ್ಬರಿಗೂ ಸಮನಾಗಿ ಹಂಚು ನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದಕೈಯಿಂದ ಹೊಡೆದರು 8 ಎಕರೆ ಹೊಲದಲ್ಲಿ ಅರ್ಧ ಹೊಲ ನಮ್ಮ ಹೆಸರಿಗೆ ಮಾಡದಿದ್ದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಶ್ರೀ ಲಾಲ ಅಹ್ಮದ ತಂದೆ ಮೋದಿನಸಾಬ ಕೊಟನೂರ ಸಾ:ದೇವನತೆಗನೂರ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 137/2013 ಕಲಂ:143,147,323,324,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: