ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ನಾನು ದಿನಾಂಕ:25-06-2013 ರಂದು 7 ಪಿಎಮ್ ದಿಂದ ಸಂತೋಷ ಕಾಲೋನಿಯ ಉದನೂರ ರಸ್ತೆಗೆ ಇರುವ ಶಾಂಗ್ರಿಲಾ ಅಪಾರ್ಟಮೆಂಟ್ಸ ಪಕ್ಕದ ಬಿಲ್ಡಿಂಗನಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುತ್ತಿದ್ದೇ ರಾತ್ರಿ ದಿನಾಂಕ :26-06-2013 ರಂದು ರಾತ್ರಿ 3-00 ಗಂಟೆ ಸುಮಾರಿಗೆ 4 ಜನ ಕಳ್ಳರು ಮುಖದ ಮೇಲೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಚೂಪಾದ ರಾಡ ಹಿಡಿದುಕೊಂಡು ಬಂದು ರಾಡಿನಿಂದ ಅಂಜಿಸಿ ಹಿಂದಿ ಬಾಷೆಯಲ್ಲಿ ಬೇದರಿಸಿ ನನ್ನ ಕೈಗಳನ್ನು ಹಿಡಿದುಕೊಂಡು ಅಲ್ಲೇ ನನ್ನ ಹಾಸಿಗೆ ಹತ್ತಿರ ಇದ್ದ ಬಟ್ಟೆಯಿಂದ ಬಲಗೈ ಮತ್ತು ಕಾಲನ್ನು ಕಟ್ಟಿ ಬಾಯಿಯಲ್ಲಿ ಬಟ್ಟೆ ತುರುಕಿ ನನ್ನ ಜೇಬಿನಲ್ಲಿದ್ದ 150 ರೂಪಾಯಿ ಮತ್ತು ಒಂದು ನೊಕೀಯಾ ಮೊಬಾಯಲ ಸಿಮ ಕಸಿದುಕೊಂಡು ಅದರಲ್ಲಿ ಒಬ್ಬನು ನನ್ನ ಹತ್ತಿರ ಕಾಯತ್ತಾ ನಿಂತಿದ್ದು 3 ಜನರು ಅಪಾರ್ಟಮೆಂಟ ಒಳಗೆಡೆ ಹೋಗಿ ಚಾವಿ ಹಾಕಿದ ಮನೆಗಳ ಬೀಗಗಳನ್ನು ಮುರಿದು ಕಳ್ಳತನ ಮಾಡಲು ಯತ್ನಿಸಿರುತ್ತಾರೆ. ಅಷ್ಟರಲ್ಲಿ ಅವಿನಾಶ ಕಕ್ಕೇರಿ ಸರ್ ರವರು ಕಳ್ಳರು ಕಳ್ಳರು ಅಂತಾ ಚಿರಾಡಲಿಕ್ಕೆ ಹತ್ತಿದ್ದಾಗ ಆ 4 ಜನರು ಓಡಿ ಹೋಗಿರುತ್ತಾರೆ ಅಂತಾ ಶ್ರೀ ಮ್ಯಾಥ್ಯೂವ @ ಮಲ್ಲಿಕಾರ್ಜುನ ತಂದೆ ದಿ:ಪ್ರಕಾಶ ಯಾದಗೀರ ವ-23 ವರ್ಷ ಉ-ಸೆಕ್ಯೂರಿಟಿ ಗಾರ್ಡ ವರ್ಗಿಸ್ಸ ಅಪಾರ್ಟಮೆಂಟ ಸಾ:ಅಂಬೇಡ್ಕರ ಚೌಕ ಹತ್ತಿರ ಯಾದಗೀರ ಹಾ:ವ: ಪ್ಲಾಟ ನಂ 9 ಸಿದ್ದೇಶ್ವರ ಕಾಲೋನಿ ವಿಶ್ವವಿದ್ಯಾಲಯ ಗೇಟ ಎದುರುಗಡೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2013 ಕಲಂ, 392, 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನ ಕಿರುಕುಳದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಬಂಗಾರಿ ಗಂಡ ಕಲ್ಯಾಣಿ ಪೂಜಾರಿ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ ರವರು ರವರು ನನ್ನ ಮದುವೆಯಾದ ಮೇ 2013 ನೇ ಸಾಲೀನಲ್ಲಿ ಕಲ್ಲಹಂಗರಗಾ ಗ್ರಾಮದ ಕಲ್ಯಾಣಿ ತಂದೆ ನಾಗಣ್ಣಾ ಪೂಜಾರಿ ಇತನೊಂದಿಗೆ ಮೇ 2013 ರಂದು ನೇರವೆರಿದ್ದು, ಮದುವೆಯ ನಂತರ ನನ್ನ ಗಂಡ ಕಲ್ಯಾಣಿ ಇತನು ಸಣ್ಣ ಪುಟ್ಟ ಕಾರಣಗಳಿಗೆ ಕಿಟಲೆ ಮಾಡುವದು ಮತ್ತು ಕರೆದಾಗ ಬೇಗನೆ ಹೋಗದಿದ್ದಕ್ಕೆ ಬೈಯುವದು ಹೊಡೆಬಡಿ ಮಾಡುತ್ತಿದ್ದನು. ದಿನಾಂಕ:05-07-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಮನೆಯಲ್ಲಿ ಎಲ್ಲರೂ ಊಟ ಮಾಡಿದ ನಂತರ ನನ್ನ ಗಂಡ ನನಗೆ ಬೇಗನೆ ಬಾ ಅಂತಾ ಕರೆದನು ಆಗ ನಾನು ಬೇಗನ ಹೋಗಲಿಲ್ಲಾ ತಡಮಾಡಿ ಹೋದೇನು. ಆಗ ನನ್ನ ಗಂಡ ನಾನು ಬಾ ಅಂದಾಗ ಬರುವದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ ನನ್ನ ಕಪಾಳ ಮೇಲೆ ಹೋಡೆದನು , ದಿನಾಂಕ:6-7-2013 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ,ರಾತ್ರಿ ನನ್ನ ಗಂಡ ಕಲ್ಯಾಣಿ ಇತನು ನನಗೆ ಬೈಯ್ದು ಹೊಡೆದಿದ್ದು ಅದನ್ನೆ ಮನಸಿನ ಮೇಲೆ ಬೇಜಾರು ಮಾಡಿಕೊಂಡು ಅಡುಗೆ ಮನೆಯಲ್ಲಿದ್ದ ಸೀಮೆ ಎಣ್ಣಿ ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ನಾನು ಚೀರಾಡುವದನ್ನು ನೋಡಿ ನನ್ನ ನೆಗೆಣಿ , ಗಂಡ ಮತ್ತು ಭಾವ ಹಾಗೂ ಮಾವನವರು ಬಂದು ಬೆಂಕಿ ಆರಿಸಿದರು, ಇದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:335/2013 ಕಲಂ.498 (ಎ),323,504, 306 ,511 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ನಂತರ ದಿನಾಂಕ:07-07-2013 ರಂದು 3-00 ಪಿ.ಎಂ.ಕ್ಕೆ ಅವಳ ತಂದೆಯಾದ ಲಕ್ಷ್ಮಣ ತಂದೆ ಶಿವರಾಯ ಮಳಗಿ ಪೂಜಾರಿ ಸಾ;ತಡಕಲ ತಾ;ಆಳಂದ ಜಿ;ಗುಲಬರ್ಗಾ ರವರು ನನ್ನ ಮಗಳು ಉಪಚಾರ ಫಲಕಾರಿಯಾಗದೆ ದಿನಾಂಕ:07-07-2013 ರಂದು 1-40 ಪಿ.ಎಂಕ್ಕೆ ಮೃತ ಪಟ್ಟಿರುತ್ತಾಳೆ ಅಂತಾ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣದಲ್ಲಿ ಕಲಂ. 306 ಐಪಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment