ಕಳವು ಪ್ರಕರಣ :
ನೆಲೋಗಿ ಠಾಣೆ :
ಶ್ರೀಮತಿ ವೀಣಾ. ಶರಣಗೌಡ ಬಾಚವಾರ ಸಿಂಗನಳ್ಳಿ
ತಾ: ಶಹಾಪೂರ ಹಾ:ವ: ಸಾ/21/75 ಖಾಜಾ ಕಾಲೋನಿ ಜೇವರರ್ಗಿ ರವರು
ಸರಕಾರಿ ಹಿರಿಯ
ಪ್ರಾಥಮಿಕ ಶಾಲೆ ಯಾಳವಾರದಲ್ಲಿ ಸಹಶಿಕ್ಷಕಿಯಾಗಿ
ಕೆಲಸ ಮಾಡಿಕೊಂಡು ಇದ್ದು. ದಿನಾಂಕ: 18/08/2013 ರಂದು ಬಿಜಾಪೂರದಲ್ಲಿ ವಾಸವಾಗಿರುವ
ನನ್ನ ಅಣ್ಣನಾದ ವಿಜಯ ಮಾಹಾಂತೇಶ ತಂ/ ಬಸವರಾಜ ಐನಾಪೂರ ಇವರ ವಿವಾಹ ನಿಶ್ಚಿತಾರ್ತ ಇದ್ದ ಕಾರಣ
ದಿನಾಂಕ: 16/08/2013 ರಂದು ಬೆಳಿಗ್ಗೆ 10 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸನಲ್ಲಿ ಜೇವರ್ಗಿ
ಯಿಂದ ಹೊರೆಟೆನು. ಸದರಿ ಬಸ್ಸ್ ಬಿಜಾಪೂರಕ್ಕೆ ಮದ್ಯಾಹ್ನ 01;00 ಗಂಟೆಗೆ ತಲುಪಿತು. ನಂತರ ನಾನು
ಅಟೋ ರಿಕ್ಷಾದಲ್ಲಿ ಬಿಜಾಪೂರದಲ್ಲಿರುವ ನಮ್ಮ ಮನೆಗೆ ಹೋದೆನು. ಹೋದ ತಕ್ಷಣ ಮುಖ ತೊಳೆದು ಬಟ್ಟೆ
ಬದಲಾಯಿಸಲು ಬ್ಯಾಗನ್ನು ನೋಡಲಾಗಿ, ಸದರಿ ಬ್ಯಾಗಿನಲ್ಲಿ ಇಟ್ಟಿದ್ದ ನನ್ನ 150 ಗ್ರಾಂ ಬಂಗಾರದ
ಆಭರಣಗಳು ಹಿಗೆ ಒಟ್ಟು 3,61,150/- ರೂ ಆಭರಣಗಳು ಇರಲಿಲ್ಲಾ. ಕೂಡಲೆ ಬ್ಯಾಗನ್ನು ಪೂರ್ತಿ
ಹೂಡಕಾಡಿದ್ದು ಆಬರಣಗಳಿಟ್ಟ ಟಿಪಿನ್ ಬಾಕ್ಸ ಇರಲ್ಲಿಲ್ಲಾ. ಇವುಗಳನ್ನು ಬಸ್ಸನಲ್ಲಿ ಯಾರೋ ಕಳ್ಳರು
ಕಳ್ಳತನ ಮಾಡಿದ್ದು ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment