Police Bhavan Kalaburagi

Police Bhavan Kalaburagi

Thursday, August 1, 2013

GULBARGA DIST REPORTED CRIMES

ಕಳ್ಳತನ ಪ್ರಕರಣ:
ಮಳಖೇಡ ಪೊಲೀಸ ಠಾಣೆ:                     
ದಿನಾಂಕ 31-07-2013 ರಂದು ರಾತ್ರಿ ಪಿರ್ಯಾದಿದಾರನು  ಠಾಣೆಗೆಬಂದು ಲಿಖೀತವಾಗಿ ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೇನೇಂದೆರೆ ದಿ: 30.31-07-2013 ರಂದು ರಾತ್ರಿವೆಳೆಯಲ್ಲಿ ನಮ್ಮ ಕಂಪನಿಯ (ಎಲ್.&ಟಿ ) ಕಾಂಟಟ್ರೇಟರರ ಪಿ.& ಎಂ ವರ್ಕಶಾಪ ಮುಂದೆ ಇಟ್ಟಿದ್ದ 01} ಕಾಪರ್ ಫ್ಲೇಕ್ಸಿಬಲ್ ವೈರ್ ಸಿಂಗಲ್ ರೋರ್ 98 ಮೀಟರ್ ಉದ್ದ  02)  ಮಲ್ಟಿಪಲ್ ಕೋರ್ ಕಾಪರ ಫ್ಲೇಕ್ಸಿಬಲ್ ವೈರ್ ಸಿಂಗಲ್ ಕೇಬಲ್ 120 ಮೀಟರ ಉದ್ದ  ಒಟ್ಟು ಅಂದಾಜು ಕಿಮ್ಮತ್ತು : 240000=00 ರೂ.    ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಪಿರ್ಯಾದಿಯಾ ನೀಡಿದ ಸಾರಾಂಶದ ಮೇಲ್ಲಿಂದ  ಮಳಖೇಡ ಠಾಣೆಯ ಗುನ್ನೆ ನಂ 75/13  ಕಲಂ,379 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಸದರಿ ಪ್ರಕರಣವು ಘೋರ ಪ್ರಕರಣವಾಗಿದ್ದು ಮಾನ್ಯರವರಲ್ಲಿ ಶೀಘ್ರ ವರದಿಯನ್ನು ಸಲ್ಲಿಸಲಾಗಿದೆ. 

ಕಳ್ಳತನ ಪ್ರಕರಣ:
ಸೇಡಂ ಪೊಲೀಸ್ ಠಾಣೆ:                     
ದಿನಾಂಕ:31-07-2013 ರಂದು ಫಿರ್ಯಾದಿ ವೆಂಕಟೇಶ ತಂದೆ ಯಾಕಂಬರಿ ಗೊಲ್ಲರ್ ವಯ:39 ವರ್ಷ, ಸಾ:ಆಡಕಿ ಗ್ರಾಮ, ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ದೂರು ಅರ್ಜಿ ಸಲ್ಲಿಸಿದ್ದರ ಸಾರಂಶವೇನೆಂದರೆ, ಸೇಡಂ ಪಟ್ಟಣದ ವೆಂಕಟೇಶ ನಗರ ರಿಂಗ್ ರೋಡ ಹತ್ತಿರ ನನ್ನದೊಂದು ಪ್ಲಾಟ್ ಇದ್ದು ಆ ಪ್ಲಾಟಿನಲ್ಲಿ ಹೊಸ ಮನೆ ಕಟ್ಟುತ್ತಿದ್ದು, ಆ ಮನೆಯ ಮುಂದುಗಡೆ 1.5 ಹೆಚ್.ಪಿ ಸಬ್ ಮರಸೀಬಲ್ ಪಂಪ್ ಸಟ್ ಹಾಕಿಸಿದ್ದು ಅಲ್ಲದೇ ಅದಕ್ಕೆ ಸುಮಾರು 320 ಫೀಟ್ ಕೇಬಲ್ ವಾಯರ್ ಇಳಿಸಿದ್ದು ಇರುತ್ತದೆ. ಹೀಗಿದ್ದು ನಿನ್ನೆ ನಾನು ಮತ್ತು ನಮ್ಮ ಕೆಲಸಗಾರರಾದ ಅಂಬು ತಂದೆ ಮೂರ್ತಿ ವಡ್ಡರ ಹಾಗೂ ಬಸವರಾಜ ತಂದೆ ಶರಣಪ್ಪ ಪಾಕಲ್ ಎಲ್ಲರೂ ಕೂಡಿ ಮುಂಜಾನೆಯಿಂದ ಸಾಯಂಕಾಲವರೆಗೆ ಕೆಲಸ ಮುಗಿಸಿ ಆಡಕಿ ಗ್ರಾಮ ಮನೆಗೆ ಹೋಗಿದ್ದು ಇರುತ್ತದೆ. ಪ್ರತಿನಿತ್ಯದಂತೆ ವೆಂಕಟೇಶ ನಗರದ ನಮ್ಮ ಹೊಸ ಮನೆಗೆ ಕೆಲಸಕ್ಕೆಂದು ಬಂದು ನೋಡುವಷ್ಟರಲ್ಲಿ ನಮ್ಮ ಮನೆಯ ಮುಂದೆ ಹಾಕಿಸಿದ್ದ 1.5 ಹೆಚ್.ಪಿ ಸಬ್ ಮರಸೀಬಲ್ ಪಂಪ್ ಸಟ್ ಅಂ.ಕಿ. 11500/- ರೂಪಾಯಿ ನೇದ್ದು ಮತ್ತು ಅದರ ಜೊತೆಯಲ್ಲಿ ಇದ್ದ 320 ಫೀಟ್ ಮೋಟಾರು ಕೇಬಲ್ ಅಂ.ಕಿ 5600/- ರೂಪಾಯಿ ನೇದ್ದು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳುವಾದ ಬಗ್ಗೆ ನೋಡಿ ಸುತ್ತಮುತ್ತ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮಾನ್ಯರವರು, ಕಳುವಾದ ನನ್ನ ಸಬ್ ಮರಸೀಬಲ್ ಪಂಪ್ ಸಟ್ ಮತ್ತು ಅದರ ಕೇಬಲ್ ವಾಯರ್ ಅವುಗಳನ್ನು, ಪತ್ತೆ ಮಾಡಿಕೊಡಬೇಕೆಂದು, ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಸೇಡಂ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.

ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:
ದಿನಾಂಕ 31/07/2013 ರಂದು ಫಿರ್ಯಾದಿ ಸೈಯದ್ ಮೋಸಿನ ತಂದೆ ಸೈಯದ್ ಇಕ್ಬಾಲಸಾಬ ಚೌಕಿದಾರ ಸಾ: ಐನೋಳ್ಳಿ ಠಾಣೆಗೆ ಹಾಜರಾಗಿ ತನ್ನ  ಹಿರಿಯ ಅಣ್ಣನಾದ ಸೈಯದ್ ಆಸ್ಪಕ್ @ ಗೋರೆಮಿಯ್ಯಾ ವ: 28 ಎಂಬುವವನು ಕಳೆದ ಶಿವರಾತ್ರಿ ಹಬ್ಬ ಒಂದು ವಾರ ಮುಂದೆ ಇದ್ದಾಗ ತನ್ನ ಮನೆಯಿಂದ ಮೋಟಾರ ಸೈಕಲಮೇಲೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ಅವನ ಹತ್ತಿರಇರುವ ಮೋಬೈಲ ನಂ 9740487488 ಮತ್ತು 8971751284 ನೇದ್ದವುಗಳು ಬಂದಾಗಿರುತ್ತವೆ. ತಮ್ಮ ಬಂದು ಬಳಗದವರಿಗೆಲ್ಲಾ ವಿಚಾರಿಸಲು ಯಾವೂದೇ ಸುಳಿವು ದೊರೆತ್ತಿರುವುದಿಲ್ಲಾ.  ದಿನಾಂಕ 10-04-2013 ರಂದು ಚಂದ್ರಂಪಳ್ಳಿ ಗ್ರಾಮದ ಕೆಲವು ಹುಡಗರು ಯುಗಾದಿ ಹಬ್ಬದ ನಿಮಿತ್ಯ ಎತ್ತುಗಳಿಗೆ ಮೈತೋಳೆಯಲು ಚಂದ್ರಂಪಳ್ಳಿ ಡ್ಯಾಮಿಗೆ ಹೋದಾಗ ನೀರಿನಲ್ಲಿ ಮೋಟಾರ ಸೈಕಲ ದೊರೆತ್ತಿದ್ದು ಅದರ ಮೇಲೆ ಚೌಕಿದಾರ ಅಂತ ತಮ್ಮ ಅಡ್ಡ ಹೆಸರು ನೋಡಿ ಪೋನ ಮಾಡಿ ಹೆಳೀದ್ದರಿಂದ ಡ್ಯಾಮಿಗೆ ಹೋಗಿ ನೋಡಲು ಮೋಟಾರ ನಮ್ಮದೆ ಇದ್ದು ನಮ್ಮ ಅಣ್ಣನ ಬಗ್ಗೆ ಯಾವೂದೇ ಸುಳಿವು ಸಿಗದ ಕಾರಣ ಅದೇ ದಿವಸ ಚಿಂಚೋಳಿ ಪೊಲೀಸ ಠಾಣೆಗೆ ಬಂದು ತನ್ನ ಅಣ್ಣನು ಕಾಣೆಯಾದ ಬಗ್ಗೆ ಒಂದು ಅರ್ಜಿ ಸಲ್ಲಿಸಿದ್ದು ನನ್ನ ಅಣ್ಣನಾದ ಸೈಯದ್ ಆಸ್ಫಾಕ್ @ ಗೋರೆಮಿಯ್ಯಾ ಎಂಬುವವನು ಚಂದ್ರಂಪಳ್ಳಿ ಗ್ರಾಮದ ಸುಬ್ಬಣ್ಣ ತಂದೆ ಅಂಜಪ್ಪ ನಿರಾಟೇರ್ ಎಂಬುವವಳ ತಂಗಿಯಾದ ತುಳಜಮ್ಮಾ ಎಂಬುವವಳು ಐನೋಳ್ಳಿಗೆ ಅಭ್ಯಾಸಕ್ಕಾಗಿ ಬರುತ್ತಿದ್ದಾಗ ಚೂಡಾಯಿಸುವದು ಮಾಡುತ್ತಿದ್ದರಿಂದ ಅವಳ ಅಣ್ಣಂದಿಯರಿಗೆ ವಿಷಯ ಗೋತ್ತಾಗಿ ವಾದ ವಿವಾದ ಆಗಿ ವೈಷ್ಯಮ್ಯ ಬೇಳೆದಿತ್ತು.
ದಿನಾಂಕ 31.07 .2013 ರಂದು  ಶ್ರೀಕಾಂತ ತಂದೆ ಕಾಶಪ್ಪಾ ಕೋಳಾರ ಎಂಬುವವನು ಬಂದು ತನಗೆ ನಿನ್ನೆ ರಾತ್ರಿ ಚಂದ್ರಂಪಳ್ಳಿಯಲ್ಲಿ ತುಳಜಮ್ಮಾಳ ಅಣ್ಣಂದಿಯರಾದ ಸುಬ್ಬಣ್ಣಾ ಮತ್ತು ಈಶಪ್ಪಾ ನಿರಾಟೆರ್ ಎಂಬುವವರು ನಿಮ್ಮ ಅಣ್ಣನಾದ ಸೈಯದ್ ಆಸ್ಪಾಕ್ @ ಗೋರೆಮಿಯ್ಯಾ ಎಂಬುವವನಿಗೆ ಕಳೆದ ಶಿವಾರಾತ್ರಿ ಹಬ್ಬಕಿಂತ ಒಂದು ವಾರ ಮುಂಚೆ ಅವರು ವೆಂಕಟ @ವೆಂಕಟೇಶ ,ಮತ್ತು ನಾರಾಯಣ ತಂದೆ ಬಸ್ಸಪ್ಪಾ ನಾಯ್ಕೋರ ಎಂಬುವವರು ಕೂಡಿ ಕೊಲೆ ಮಾಡಿ ಶವವನ್ನು ಹೂಳಿ ಸಾಕ್ಷಿ ನಾಶಪಡಿಸಿರುತ್ತೆವೆ. ನಮ್ಮನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಮಾತನಾಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದು ಸದರಿ 4 ಜನರು  ತುಳಜಮ್ಮಳಿಗೆ ಚೂಡಾಯಿಸಿದ ವಿಷಯಕ್ಕೆ ಸಂಭಂದಿಸಿದಂತೆ  ವೈಷ್ಯಮ್ಯದಿಂದಾಗಿ ನಮ್ಮಣ್ಣಾನಿಗೆ ಕೊಲೆ ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೋಳ್ಳಬೇಕು ಅಂತಾ ಕೋಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ  ಚಿಂಚೋಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.

No comments: