Police Bhavan Kalaburagi

Police Bhavan Kalaburagi

Saturday, August 10, 2013

GULBARGA DIST REPORTED CRIMES

ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ  
ಅಪಘಾತ ಪ್ರಕರಣ:      
ದಿನಾಂಕ 08-08-2013 ರಂದು ರಾತ್ರಿ 10-30 ಪಿ.ಎಮ್ ಸುಮಾರಿಗೆ  ಶ್ರೀಮತಿ ಚಂದ್ರಭಾಗಾ ಗಂಡ ಶಂಕರ ಜಿಂಗಾಡೆ ಸಾಃ ರೋಜಾ (ಕೆ) ಗುಲಬರ್ಗಾ ರವರು ಸನಾ ಹೋಟೆಲ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 2568 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಮಹೇಬೂಬ ನಗರ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಚಂದ್ರಭಾರವರಿಗೆ ಅಪಘಾತಪಡಿಸಿ ತನ್ನ ಮೋ. ಸೈಕಲ ಸಮೇತ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುಲಬರ್ಗಾ ಸಂಚಾರಿ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ
ಶ್ರೀಗಂಧ ಕಟ್ಟಿಗೆ ಕಳ್ಳರ ಬಂಧನ:
ದಿನಾಂಕ: 08/08/2013 ರಂದು ಮದಗುಣಕಿ ಕ್ರಾಸ್ ಹತ್ತಿರ ಮೂರು ಜನರು ಅಪರಿಚಿತರು ಶ್ರೀಗಂಧದ ಕಟ್ಟಿಗೆಯ ತುಕಡಿಗಳು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಹೋಗುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮಾದನ ಹಿಪ್ಪರಗಾ ಮತ್ತು ಸಿಬ್ಬಂದಿಯವರಾದ ಶ್ರೀ.ಕನೀರಾಮ ಹೆಚ್.ಸಿ. 183 ಮತ್ತು ಜೀಪ ಚಾಲಕ ಶ್ರೀ.ಶಾಂತಪ್ಪ ಪಿ.ಸಿ.115 ಮತ್ತು ಪಂಚರಾದ 1) ಶ್ರೀ.ಸಿದ್ದರಾಮ ತಂದೆ ಶರಣಪ್ಪ ಹಡಲಗಿ 2) ಶ್ರೀ.ರಾಜಶೇಖರ ತಂದೆ ಈರಣ್ಣಾ ಗಡ್ಡದ ಸಾ: ಮಾದನ ಹಿಪ್ಪರಗಾ ರವರೊಂದಿಗೆ ಮದಗುಣಕಿ ಕ್ರಾಸ್ ಹತ್ತಿರ 3 ಜನರು ತಮ್ಮ ಕೈಯಲ್ಲಿ ಕೈಚೀಲ ಹಿಡಿದುಕೊಂಡು ಬರುತ್ತಿರುವಾಗ ದಾಳಿ ಮಾಡಿ ವಿಚಾರಿಸಲು ಅವರ ಹೆಸರು 1) ಜೀವು ತಂದೆ ಮೋಹನ ಕಾಳೆ ಸಾ:ಶಕಾಪೂರ 2) ವಾಲ್ಕು ತಂದೆ ಸಕರಾಮ ಪವಾರ 3) ಸಕರಾಮ ತಂದೆ ಕಲ್ಲಪ್ಪ ಪವಾರ ಸಾ:ಇಬ್ಬರೂ ಝಳಕಿ(ಬಿ)  ತಾ: ಆಳಂದ. ಅಂತಾ ತಿಳಿಸಿರುತ್ತಾರೆ ಮತ್ತು ಅವರ ಹತ್ತಿರ ಕೈ ಚೀಲದಲ್ಲಿನ ಶ್ರೀಗಂಧದ ಕಟ್ಟಿಗೆಯ ಬಗ್ಗೆ ವಿಚಾರಿಸಲು ಅವರ ಹತ್ತಿರ ಸಿಕ್ಕ 8 ಕೆ.ಜಿ. ಶ್ರೀಗಂಧದ ಕಟ್ಟಿಗೆಯ ತುಕಡಿ ಅ.ಕಿ. 16,000/- ನೇದ್ದು ಗುಲಬರ್ಗಾ ತಾಲ್ಲೂಕಿನ ಭೀಮಳ್ಳಿ ಸೀಮೆಯಲ್ಲಿ ಕಡಿದು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಳಿಸಿದರು. ಸದರಿಯವರ ಹತ್ತಿರ ಇದ್ದ ಶ್ರೀಗಂಧದ ಕಟ್ಟಿಗೆಯ ತುಕಡಿಗಳು ಕಳ್ಳತನದೇ ಅಂತಾ ಖಚಿತ ಪಟ್ಟಾಗ ಜಪ್ತಿ ಪಂಚನಾಮೆ ಮಾಡಿಕೊಂಡು ನಂತರ ಮೇಲ್ಕಂಡ 3 ಜನರನ್ನು ಮತ್ತು 8 ಕೆ.ಜಿ. ಶ್ರೀಗಂಧದ ಕಟ್ಟಿಗೆ ಸಮೇತ ಪರತ್ ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ:
ಇಂದು ದಿನಾಂಕ:08/08/2013 ರಂದು ಪಿರ್ಯಾದಿ ಶ್ರೀಮತಿ ಅಶ್ವಿನಿ ಗಂಡ ಅಡಿವೆಪ್ಪ ಸಜ್ಜನ ಶಟ್ಟಿ ಸಾ:ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ:28/05/2010 ರಂದು ನನ್ನ ಮದುವೆ ಶ್ರೀ ಅಡಿವೆಪ್ಪ ರವರೊಂದಿಗೆ ಆಗಿದ್ದು ನನಗೆ ಮದುವೆಯಾದ ದಿನದಿಂದಲು ನನ್ನ ಗಂಡ ಅಡಿವೆಪ್ಪ ಹಾಗೂ ಮಾವ ಬಸವರಾಜ ಕೂಡಿ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ನಿನ್ನ ತಾಯಿ ಮನೆ ಮಾರಿ ವರದಕ್ಷಿಣೆ ಹಣ ತಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟು ಹಣ ತರದಿದ್ದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: