Police Bhavan Kalaburagi

Police Bhavan Kalaburagi

Monday, August 12, 2013

GULBARGA DIST REPORTED CRIMES

ಚಿಂಚೋಳಿ ಪೊಲೀಸ್ ಠಾಣೆ:
ಅಪಹರಣ ಪ್ರಕರಣ:

ದಿನಾಂಕ: 10.08.2013 ಪಿರ್ಯಾದಿಯಾದ ಕುಮಾರಿ ಉಷಾ ತಂದೆ ಬಂಡೇಪ್ಪಾ ಕಟ್ಟಿಮನಿ ವ: 19 ವರ್ಷ ಉ: ವಿದ್ಯಾರ್ಥಿನಿ ತಾ:ಚಿಂಚೋಳಿ ಎಂಬುವವಳು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಪಿರ್ಯಾದಿ ನೀಡಿದರ ಸಂಕ್ಷಿಪ್ತ ಸಾರಂಶವೆನಂದರೆ. ಸುಮಾರು 03-04 ವರ್ಷಗಳ ಹಿಂದೆ ತನಗೆ ಒಂದು ಪೋನ ಬಂದಿದ್ದು ಆಗ ತಾನು ಮಾತನಾಡಲು ನಾನು ಮಂಜುನಾಥ ತಂದೆ ಭೀಮಯ್ಯ ಈಳಗೇರ ಅಂತಾ ತಿಳಿಸಿದ್ದು ಎನು ಕೆಲಸ ಇದೆ ಯಾಕೆ ಪೋನ ಮಾಡಿದ್ದಿರಿ ಅಂತಾ ತಾನು ಅವನಿಗೆ ಕೇಳಿದ್ದು ಆಗ ಅವನು ನಿನ್ನೊಂದಿಗೆ ಸ್ನೇಹ ಬೆಳೆಸುವದಿದೆ. ನಿನ್ನ ಹೆಸರು ವಿಳಾಸ ಹೇಳು ಅಂತಾ ಅಂದಿರುತ್ತಾನೆ. ಅದಕ್ಕೆ ತಾನು ತನ್ನ ಹೆಸರು ಉಷಾ ತಂದೆ ಬಂಡೇಪ್ಪಾ ಕಟ್ಟಿಮನಿ ಸಾ: ಐನೋಳ್ಳಿ ಅಂತಾ ತಿಳಿಸಿದ್ದು ಹಿಗೆ ಇಬ್ಬರೂ ಪೋನ ಮುಖಾಂತರ ಸಂಪರ್ಕದಲ್ಲಿ ನಿರಂತರವಾಗಿ ಕೆಲವು ದಿವಸದವರೆಗೆ ಮುಂದುವರಿದಿದ್ದು ಹೀಗೆ ಯಾವಾಗಲು ಪೋನದಲ್ಲಿ ಮಾತನಾಡುತ್ತಾ ಇದ್ದುದ್ದರಿಂದ ಇಬ್ಬರ ಮದ್ಯ ಸಲುಗೆ ಬೆಳೆದು ಪ್ರೀತಿ ಮಾಡತೊಡಗಿದೇವು. ತಾನು ಗುಲಬರ್ಗಾದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಡಿ.ಎಡ್ ವಿದ್ಯಾಭ್ಯಾಸ ಮಾಡುತ್ತಿದ್ದುದ್ದರಿಂದ ಆಗಾಗೆ ಅವನು ತನಗೆ ಬಂದು ಬೇಟಿ ಆಗಿ ಮಾತನಾಡಿಸುತ್ತಿದ್ದನು.ಹೀಗಿದ್ದು ತನ್ನ ಡಿ.ಎಡ್ ಕೋರ್ಸಿನ ಪ್ರಥಮ ವರ್ಷದ ವಾರ್ಷಿಕ ಪರೀಕ್ಷ ಮುಗಿಸಿಕೊಂಡು ಬಂದು 15 ದಿವಸಗಳು ರಜೆ ಇದ್ದುದ್ದರಿಂದ ತಮ್ಮೂರಾದ ಐನೋಳ್ಳಿಯ ನಮ್ಮ ಮನೆಯಲ್ಲಿ ಬಂದು ಇದ್ದೆನು. ರಜೆಗಳು ಮುಗಿದರಿಂದ ಕಾಲೇಜಿಗೆ ಮತ್ತೆ ಹೋಗಲೆಂದು ಚಿಂಚೋಳಿಯಿಂದ ಖಾಸಗಿ ವಾಹನದಲ್ಲಿ ತನಗೆ ತನ್ನ ತಂದೆ ಕುಡಿಸಿದ್ದು ತಾನು  ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣ ತಲುಪಿದ್ದು ಅಷ್ಟರಲ್ಲಿಯೇ ಮಂಜುನಾಥ ತಂದೆ ಭೀಮಯ್ಯ ಈಳಗೇರ ಎಂಬುವನು ಬಂದನು. ಇಬ್ಬರು ಬಸನಿಲ್ದಾಣದಲ್ಲಿ ಕುಳಿತುಕೊಂಡು ಮಾತನಾಡಿದೇವು. ಆಗ ಅವನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಅಂದಿದ್ದು ಆಗ ತಾನು ಒಲ್ಲೆತನ್ನ ಅಣ್ಣಂದಿರು ಮತ್ತು ತಂದೆ, ತಾಯಿಯವರು ಬೈಯ್ಯುತ್ತಾರೆ ಅಂತಾ ಅಂದರು ಕೇಳದೆ ತನಗೆ ಇಲ್ಲ ಸಲ್ಲದೆ ನೆಪಗಳನ್ನು ಒಡ್ಡಿ ತಾನು ಅವನಿಗೆ ಮದುವೆ ಆಗುವದಿಲ್ಲ ಅಂತಾ ಪರಿ ಪರಿಯಿಂದ ಹೇಳಿದರು ಕೇಳದೆ ಜಬರದಸ್ತಿಯಿಂದ ಬಾಂಬೆಗೆ ಹೊಗುವ ಬಸ್ಸಿನೋಳಗೆ ಕೈ ಹಿಡಿದು ಎಳದುಕೊಂಡು ಹೊಗಿ ಬಸ್ಸಿನಲ್ಲಿ ಕುಡಿಸಿ ಬಾಂಬೆಗೆ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಬಾಂಬೆಗೆ ಹೊದ ನಂತರ ಬಸ್ಸನಿಲ್ದಾಣದಲ್ಲಿಯೇ ಉಳಿದುಕೊಂಡೇವು. ತನಗೆ ಬಾಂಬೆಗೆ ಕರೆದುಕೊಂಡು ಹೊದಾಗ ತನಗೆ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೊಗಬೇಡಾ ತಾನು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುತ್ತೆನೆ ನಾನು ನಿನಗೆ ಮದುವೆ ಆಗುವದಿಲ್ಲ ಅಂತಾ ಹೇಳಿದರು ಕೇಳಿರುವದಿಲ್ಲ. ಬಾಂಬೆಯ ಬಸನಿಲ್ದಾದಲ್ಲಿ ಒಂದು ರಾತ್ರಿ ಇದ್ದೇವು. ಅಲ್ಲಿ ಅವನು ತನಗೆ ದೈಹಿಕ ಸಂಪರ್ಕ ಮಾಡಿರುವದಿಲ್ಲ. ರೈಲ್ವೆ ಮುಖಾಂತರ ತನಗೆ ನಸುಕಿನ ಜಾವ 4 ಗಂಟೆಗೆ ಗುಲಬರ್ಗಾ ರೈಲ್ವೆ ನಿಲ್ದಾಣಕ್ಕೆ ಬಂದಿರುತ್ತೆವೆ, ಅಲ್ಲಿಂದ ನಾನು ಅವನಿಂದ ತಪ್ಪಿಸಿಕೊಂಡು ನನ್ನ ಅಣ್ಣನಾದ ಸೂರ್ಯಕಾಂತನಿಗೆ ಕರೆಯಿಸಿದೆನು. ಆಗ ತನ್ನ ಅಣ್ಣನಾದ ಸೂರ್ಯಕಾಂತನು ಬಂದು ತಾನು ಕಾಣೆಯಾದ ಬಗ್ಗೆ ಚಿಂಚೋಳಿ ಪೊಲೀಸ ಠಾಣೆಯಲ್ಲಿ ತನ್ನ ಇನ್ನೊಬ್ಬ ಅಣ್ಣನಾದ ರವಿಕಾಂತ ಎಂಬುವವನು ದೂರು ನೀಡಿರುವ ವಿಷಯ ತಿಳಿಸಿದ್ದು, ನಂತರ ತಾನು ಮತ್ತು ತನ್ನ ಅಣ್ಣನಾದ ಸೂರ್ಯಕಾಂತ ಇಬ್ಬರು ಕೂಡಿಕೊಂಡು ಚಿಂಚೋಳಿ ಪೊಲೀಸ ಠಾಣೆಗೆ ಬಂದಿರುತ್ತೆವೆ. ತನ್ನ ಅಣ್ಣನಾದ ರವಿಕಾಂತನು ವಿಷಯದ ತಪ್ಪು ಗ್ರಹಿಕೆ ಮತ್ತು ತಪ್ಪು ಕಲ್ಪನೆಯಿಂದ ತಾನು ಕಾಣೆಯಾಗಿರುವ ದೂರು ನೀಡಿರುತ್ತಾನೆ. ಆದರೆ ತಾನು ಕಾಣೆಯಾಗಿರುವದಿಲ್ಲ ಮಂಜುನಾಥ ತಂದೆ ಭೀಮಣ್ಣ ಇಳಗೇರ ಸಾ|| ಕಂದಗೋಳ ಎಂಬುವವನು ತನಗೆ ಜಬರ ದಸ್ತಿಯಿಂದ ಮದುವೆ ಆಗುವದಕ್ಕಾಗಿ ಗುಲಬರ್ಗಾ ಕೇಂದ್ರ ಬಸನಿಲ್ದಾಣದದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿಯಾಗಿ ಕೊಟ್ಟ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಚಿಂಚೋಳಿ ಪೊಲೀಸ ಠಾಣೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

     
UÁæ«ÄÃt ¥ÉưøÀ oÁuÉ:
ಅಪಘಾತ ಪ್ರಕರಣ:

ದಿನಾಂಕ.20-07-13 ರಂದು ಮದ್ಯಾನ 3-00 ಪಿ.ಎಂ.ಕ್ಕೆ ಪಿರ್ಯಾದಿ ಮಲ್ಲಿನಾಥ ತಂದೆ ಬಸವಣಪ್ಪಾ ಸಂಗೋಳಗಿ ವಯ;35 ವರ್ಷ ಜ್ಯಾತಿ;ಸಮಗಾರ ಉ; ಟಂ.ಟಂ.ಚಾಲಕ ಸಾ;ರಾಮನಗರ ಗುಲಬರ್ಗಾ ಕೊಟ್ಟ ಹೇಳಿಕೆಯ ಸಾರಾಂಶವೆನೆಂದರೆ , ದಿ:-20/7/13 ರಂದು ತನ್ನ ಮೋಟಾರ ಸೈಕಲ್ ಎಸ್.ಕೆ. ದಾಲ ಮಿಲ್ಲ ದಾಟಿ ಸ್ವಲ್ಪ ಮುಂದೆ  ನನ್ನ  ಸೈಡ ಹಿಡಿದು ಗುಲಬರ್ಗಾದಿಂದ  ಕೆರಿಬೋಸಗಾ ಕಡೆಗೆ ಹೋಗುತವಾಗ ಅದೇ ವೇಳಗೆ ಆಳಂದ ಕಡೆಯಿಂದ ಒಂದು ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ  ಹೊಡೆದಿದರಿಂದ ನಾನು ಮೋಟಾರ ಸೈಕಲದೊಂದಿಗೆ ಕೆಳಗೆ ಬಿದಿದ್ದು ಇದರಿಂದ  ನನ್ನ  ಬಲತೊಡೆಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು, ಬಲಗೈ ಅಂಗೈ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯ, ಬಲಗಣ್ಣಿನ ಹತ್ತಿರ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ನನಗೆ ಡಿಕ್ಕಿ ಹೊಡೆದ ಬಸ್ಸು ನೋಡಲಾಗಿ ಕೆಎ 32 ಎಫ 1112 ಇತ್ತು. ಅದರ ಚಾಲಕ ಹೆಸರು  ಮುಸ್ತಪ್ಪ  ತಂದೆ ಅಬ್ದುಲ ನಬೀ ಚಿಂಚೋಳಿ  ಡಿಪೋ ನಂ.3 ಗುಲಬರ್ಗಾ ಅಂತಾ ಗೊತ್ತಾಗಿರುತ್ತದೆ. ನನ್ನ ಹಿಂದೆ ಆಟೋದಲ್ಲಿ ಬರುತ್ತಿದ್ದ  ಲಕ್ಷ್ಮೀಕಾಂತ ಮತ್ತು ಶರಣಬಸಪ್ಪ ಇಬ್ಬರು ಈ ಘಟನೆಯನ್ನು  ನೋಡಿ ನನಗೆ ಎಬ್ಬಿಸಿ ನನಗೆ ಉಪಚಾರ ಕುರಿತು108ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಗುಲಬರ್ಗಾ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿ ಕೆ.ಎಸ್.ಆರ್.ಟಿ.ಸಿ.ಬಸ್ಸ ನಂ. ಕೆಎ 32 ಎಫ 1112 ನೆದ್ದರ ಚಾಲಕ ಮುಸ್ತಪ್ಪ  ತಂದೆ ಅಬ್ದುಲ ನಬೀ ಚಿಂಚೋಳಿ  ಡಿಪೋ ನಂ.3 ಗುಲಬರ್ಗಾ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುಲಬರ್ಗಾ UÁæ«ÄÃt ¥ÉưøÀ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

No comments: