ಆಶೋಕ ನಗರ ಪೊಲೀಸ ಠಾಣೆ :
ಹಲ್ಲೆ ಪ್ರಕರಣ: ಶ್ರೀ ಗಜೇಂದ್ರ ತಂದೆ ನಂಜುಂಡಪ್ಪ ನಾಯ್ಡು ಸಾ|| ಮ.ನಂ. 1/1827 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ : 16/08/2013 ರಂದು ತಮ್ಮ ಮ್ಯಾರೆಜ ಎನ್ಯುವರ್ಸರಿ ದಿನ ಇರುವದರಿಂದ ರಾತ್ರಿ 8-30 ಗಂಟೆ ಸುಮಾರಿಗೆ ನಾನು ಎನ್.ಜಿ.ಓ ಕಾಲೋನಿಯ ನಮ್ಮ ಮನೆಯ ಮುಂದೆ ನನ್ನ ಹೆಂಡತಿ ಸುಜಾತ ಇವಳಿಗೆ ಹೊಟೆಲ ಊಟಕ್ಕೆ ಕರೆದುಕೊಂಡು ಹೊಗಲು ರಡಿ ಆಗುತ್ತಿರುವಾಗ 5-6 ಮೊಟಾರ ಸೈಕಲ ಮೇಲೆ 8-10 ಜನರು ಕೈಯಲ್ಲಿ ತಲವಾರ, ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ನನ್ನ ತಮ್ಮ ಮಹೆಂದ್ರನಿಗೆ ಹೊಡೆಯಲು ಬರುತ್ತಿರುವಾಗ ಅವನು ತಪ್ಪಿಸಿಕೊಂಡು ಓಡಿ ಹೊದನು ಆಗ ನಾನು “ಏ ಯಾಕರೋ ಮನೆಗೆ ಬಂದು ಗುಂಡಾಗಿರಿ ಮಾಡುತ್ತಿದ್ರಿ” ಅಂತಾ ಹೇಳಿದ್ದಕ್ಕೆ ನಿನ್ನೆ ಮದುವೆಯಲ್ಲಿ ಜಗಳ ಮಾಡಿದ್ರಿ ಇವತ್ತು ನಿಮ್ಮನ್ನು ಬಿಡುವದಿಲ್ಲ ಕೊಲೆ ಮಾಡೆ ತಿರುತ್ತೆವೆ” ಅಂತಾ ಬೈದವರೆ ಅವರಲ್ಲಿ ಒಬ್ಬನು ಹೊಡೆಯಿರಿ ಅಂತಾ ಕುಮ್ಮಕ್ಕು ನೀಡಿದಾಗ ಭೀಮು ಎನ್ನುವವನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಕುತ್ತಿಗೆಗೆ ಹೊಡೆಯಲು ಯತ್ನಿಸಿದಾಗ ನಾನು ಕೈ ಅಡ್ಡ ಪಡಿಸಿದ್ದಕ್ಕೆ ಏಟು ನನ್ನ ಎಡಗೈ ಹಸ್ತದ ಬೆರಳುಗಳಿಗೆ ಹತ್ತಿ ಭಾರಿ ರಕ್ತ ಗಾಯಗಳಾಗಿರುತ್ತದೆ. ನಾನು ಕೈ ಅಡ್ಡಪಡಿಸದಿದ್ದರೆ ಮಚ್ಚಿನ ಏಟು ನನ್ನ ಕುತ್ತಿಗೆಗೆ ಹತ್ತಿ ಜೀವ ಹೊಗುವ ಸಂಭವವಿತ್ತು. ಮತ್ತು ಹಿಂದಿನಿಂದ ಅಪ್ಪಣ್ಣ ಎನ್ನುವವನು ತಲವಾರದಿಂದ ನನ್ನ ಬಲಗೈ ರಟ್ಟೆ ಹತ್ತಿರ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಆಗ ನಾನು ಚಿರಾಡಲಿಕ್ಕೆ ಹತ್ತಿದಾಗ ಆ 8-10 ಜನರು ಬೈಯುತ್ತಾ ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಮತ್ತು ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಮೇಲೆ ಕಲ್ಲು ಎತ್ತಿಹಾಕಿ ಡ್ಯಾಮೆಜ ಮಾಡುತ್ತಿದ್ದಾಗ ನಮ್ಮ ತಾಯಿ ಸುಧಾ, ನನ್ನ ಹೆಂಡತಿ ಸುಜಾತಾ ಹಾಗೂ ಗೆಳೆಯರಾದ ರಾಖೇಶ, ಅಜಯ ರವರು ಚಿರಾಡಲಿಕ್ಕೆ ಹತ್ತಿದಾಗ ಹಾಗೂ ಪೊಲೀಸರಿಗೆ ಪೊನ್ ಮಾಡುತ್ತಿರುವದನ್ನು ಗಮನಿಸಿದ ಆ ಹುಡುಗರು ಅಲ್ಲಿಂದ ಓಡಿ ಹೊಗಿರುತ್ತಾರೆ. ಆ ಹುಡುಗರಲ್ಲಿ ಕೆಲವು ಜನರ ಹೆಸರು ಗೊತ್ತಿದ್ದು 1) ಭೀಮು 2) ಅಪ್ಪಣ್ಣ 3) ಕಿಶನ 4) ಓಂ 5) ರವಿ ಬೈರಾಮಡಗಿ ಇವರ ಸಂಗಡ ಇನ್ನು 5-6 ಜನರು ಹುಡುಗರು ಇದ್ದು ಅವರ ಹೆಸರು ಗೊತ್ತಿರುವದಿಲ್ಲ ನೋಡಿದರೆ ಗುರುತ್ತಿಸುತ್ತೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
No comments:
Post a Comment