Police Bhavan Kalaburagi

Police Bhavan Kalaburagi

Monday, August 19, 2013

Gulbarga District Reported Crimes

ಕಳವು ಪ್ರಕರಣಗಳು :
ಕಮಲಾಪೂರ ಪೊಲೀಸ ಠಾಣೆ :ದಿನಾಂಕ: 17/08/2013 ರಂದು ಮಧ್ಯಾಹ್ನ 01-00 ಗಂಟೆಗೆ ಶ್ರೀ.ಕಲ್ಯಾಣರಾವ ತಂದೆ ಗುಂಡಪ್ಪ ಶೇರಿ ಜಿ: ಗುಲಬರ್ಗಾ ಇವರು ಸುಮಾರು 10 ವರ್ಷಗಳಿಂದ ಕಮಲಾಪೂರದ ಮಾಟೂರ ಕಾಂಪ್ಲೇಕ್ಸ್ ದಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ದಿನಾಂಕ 17-08-2013 ರಂದು ಸಾಯಂಕಾಲ 05-00 ಗಂಟೆಗೆ ಅಂಗಡಿ ಬಂದ ಮಾಡಿಕೊಂಡು ಹೋಗುದ್ದು ಮರು ದಿನ ಬೆಳಗ್ಗೆ 10-00 ಗಂಟೆಗೆ ನಾನು ನನ್ನ ಅಂಗಡಿಗೆ ಬಂದು ಕೀಲಿ ತೆಗೆಯಲು ಹೋದಾಗ ನನ್ನ ಅಂಗಡಿಯ ಶೇಟರದ ಬಾಗಿಲು ತೆರೆದೇ ಇದ್ದು, ಬಾಗಿಲು ಮಣಿದಿತ್ತು, ಒಳಗೆ ಹೋಗಿ ನೋಡಲಾಗಿ ನನ್ನ ಅಂಗಡಿಯಲ್ಲಿದ್ದ ಬೆಳ್ಳಿಯ ಸಾಮಾನುಗಳು ಇರಲಿಲ್ಲ. ಸಾಮಾನುಗಳ ಒಟ್ಟು ಅಂದಾಜು ಮೊತ್ತ 1,14,500/- ರೂಪಾಯಿಗಳ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಅಪರಿಚಿತ ಕಳ್ಳರು ರಾತ್ರಿ 10-00 ಗಂಟೆಯಿಂದ ದಿನಾಂಕ: 17/08/2013 ರ ಬೆಳಗಿನ ಜಾವ  5-00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಅಂಗಡಿಯ ಶೇಟರದ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಗಾಂಧಿ ತಂದೆ ಚನ್ನಬಸಪ್ಪ ಕಿಣಗಿ ಸಾ: ಲೋಹಾರಗಲ್ಲಿ ಗುಲಬರ್ಗಾ  ರವರು   ದಿನಾಂಕ:16/08/2013 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನನ್ನ ಹೊಂಡಾ ಆ್ಯಕ್ಟಿವ ದ್ವೀಚಕ್ರ ವಾಹನ ನಂ: ಕೆಎ-32 ಆರ್-2460 ನೇದ್ದನ್ನು ಸಾಯಿಮಂದಿರ ಹತ್ತಿರ ನಿಲ್ಲಿಸಿ ಸರ್ವಜ್ಞ ಕಾಲೇಜ ಕ್ಯಾಂಟಿನದಲ್ಲಿ ಕೆಲಸಕ್ಕೆ ಹೋಗಿದ್ದು ರಾತ್ರಿ 7:00 ಪಿಎಮ್ ಸುಮಾರಿಗೆ ಹೋರಗಡೆ ಬಂದು ನೋಡಲಾಗಿ ನನ್ನ ಗಾಡಿ ಕಾಣಿಸಲಿಲ್ಲ. ಆಗ ಸರ್ವಜ್ಞ ಕಾಲೇಜದಲ್ಲಿ ಕೆಲಸ ಮಾಡುವವರಿಗೆ ಮತ್ತು ಸಾಯಿ ಮಂದಿರ ಹತ್ತಿರ ಅಂಗಡಿಯವರಿಗೆ ನನ್ನ ಗಾಡಿ ಬಗ್ಗೆ ವಿಚಾರಿಸಿದ್ದು ಮತ್ತು ರಾಮಮಂದಿರ ಕರುಣೇಶ್ವರ ನಗರ ಕಡೆ ಗಾಡಿ ಹುಡಕಾಡಿದ್ದು ಗಾಡಿ ಸಿಕ್ಕಿರುವದಿಲ್ಲ. ನನ್ನ ಹೊಂಡಾ ಆಕ್ಟಿವ  ದ್ವಿಚಕ್ರ ವಾಹನದ ನಂ: ಕೆಎ-32 ಆರ್- 2460 ಚಿಸ್ಸಿ ನಂ: ME4JF082K58032059 ಇಂಜಿನ ನ:JF08E8210890 ಅ.ಕಿ. 40,000=00 ರೂ ಕಿಮ್ಮತ್ತಿನದ್ದನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಹಚ್ಚಿ ಕೊಡಬೇಕಾಗಿ ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ 1808-2013 ರಂದು ಶ್ರೀ ಬಾಬುರಾವ  ತಂದೆ ಗೋವಿಂದರಾವ ಮೋರೆ ಸಾ: ಸೈಯ್ಯದ ಚಿಂಚೋಳಿ ತಾ: ಜಿ: ಗುಲಬರ್ಗಾ  ರವರು ಹೊಲದಿಂದ ಎತ್ತುಗಳನ್ನು ಹೊಡೆದುಕೊಂಡು ತಮ್ಮ ಖುಲ್ಲಾ ಜಾಗೆಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದಾಗ, ತಮ್ಮನಾದ  ಚಿತಂಬರಾಯ ಮತ್ತು ಅವನ ಹೆಂಡತಿ ಕಲಾವತಿ  ಮತ್ತು ಮಗ ಜೈರಾಮ ಕೂಡಿಕೊಂಡು ಬಂದು ನಮ್ಮ ಜಾಗೆಯಲ್ಲಿ ಏಕೆ ಎತ್ತುಗಳನ್ನು ಕಟ್ಟುತ್ತಿದಿ ಅಂತ ಜಗಳ ತೆಗೆದು ಆರೋಪಿ ಹೆಂಡತಿ ಮತ್ತು ಮಗ ಇಬ್ಬರು ಪಿರ್ಯಾದಿ ಒತ್ತಿ  ಹಿಡಿದು  ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು  ಆಗ ಆರೋಪಿತನು ಚಿತಂಬರಾಯ ಬಂದು ಹಲ್ಲಿನಿಂದ ಎಡಕಿವಿಗೆ  ಜೋರಾಗಿ ಹಲ್ಲಿನಿಂದ ಕಚ್ಚಿ ರಕ್ತಗಾಯ ಮಾಡಿದ್ದು ಆಗ ಚೀರಾಡಲು ಪಿರ್ಯಾದಿ ಹೆಂಡತಿ ಬಿಡಿಸಲು ಬಂದಾಗ ಆರೋಪಿತನು ಹೆಂಡತಿಗೆ ಅವ್ಯಾಚ್ಛವಾಗಿ ಬೈದು ಹೊಡೆಯುತ್ತಿದ್ದಾಗ ಪಿರ್ಯಾದಿ ಬಿಡಿಲು ಹೋದಾಗ ಆರೋಪಿ ಜೈರಾಮ ಇವನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: