ಅಪಘಾತ ಪ್ರಕರಣ :
ನೆಲೋಗಿ ಠಾಣೆ :
ದಿನಾಂಕ: 22-08-2013 ರಂದು ಬೆಳಿಗ್ಗೆ ಶ್ರೀ ಕೇರನಾಥ ತಂದೆ ಬಾಗವಾನ ಜೊಗೇರ ಸಾ: ಜೇವರ್ಗಿ ರವರು
ತಮಗೆ ಪರಿಚಯ ಇದ್ದ ಮಾರುತಿ ಸುಜುಕಿ ಕಾರ ನಂ ಕೆಎ-36 ಎಮ್-7765 ನೇದ್ದರಲ್ಲಿ ತಮ್ಮ ಸಂಬಂಧಿಕರ
ಬದಾಮಿ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ತೀರಿಕೊಂಡಿದ್ದರಿಂದ 5 ಜನರು ಕೂಡಿಕೊಂಡು ಸದರ
ಕಾರಿನಲ್ಲಿ ಹೋಗುವಾಗ ಎಸ್ ಎನ್ ಹಿಪ್ಪರಗಾ ಕ್ರಾಸ ಹತ್ತೀರ 09.45 ಎ ಎಮ್ ಕ್ಕೆ ಬಂದಾಗ
ಎದುರಿನಿಂದ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-32 ಎಫ್- 1770 ನೇದ್ದರ ಚಾಲಕನು ಅತೀ ವೇಗ
ಮತ್ತು ನೀರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದಾಗ ಕಾರಿನಲ್ಲಿದ್ದ 1. ನಬಿ ತಂದೆ ಕೋನಮೀಯಾರ ವ;30 ಉ: ಕಾರ ಡ್ರಾವರ್ ಸಾ; ಜೇವರ್ಗಿ 2.ಮಚೇಂದ್ರನಾಥ ತಂದೆ ಪವನಾಥ ಜೊಗೇರ ವ:
45 ಉ: ಹಿಟ್ಟಿನ ಗಿರಣಿ ಮೇಕ್ಯಾನಿಕ್ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೂ 3 ಜನರಿಗೆ ಭಾರೀ ಗಾಯಗಳಾಗಿದ್ದು, ಸದರಿ
ಚಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಯಲ್ಲವ್ವ ಗಂಡ
ಸಿದ್ದಪ್ಪಾ ಕಾಳೆ ಸಾ|| ಆಲಮೇಲ, ತಾ|| ಸಿಂದಗಿ ಇವರು ಗಂಡನನ್ನು ದಿನಾಂಕ 19/08/2013 ರಂದು ಸಾಯಂಕಾಲ 0400 ಪಿ.ಎಮ
ಕ್ಕೆ ರೇಲಪೂತ @ ಬಾಬು
ಕಾಳೆ, ಮುಕೇಶ ತಂದೆ ರೇಲಪೂತ ಕಾಳೆ, ಶಮ್ಯಾ ತಂದೆ ರೇಲಪೂತ ಕಾಳೆ, ರವ್ಯಾ ತಂದೆ ಗೊವಿಂದ ಸಿಂಧೆ, ಬಪ್ಯಾ ತಂದೆ ಶ್ರೀಮಂತ, ಕುನ್ಯಾಬಾಯಿ
ಗಂಡ ರೇಲಪೂತ @ ಬಾಬು
ಕೂಡಿ ಗುಲಬರ್ಗಾದಿಂದ ಒಂದು ಕ್ರೂಸನ ವಾಹನ ಅದರ ಚಾಲಕ ಮತ್ತು
ಅದರ ನಂಬರ ಗೊತ್ತಿಲ್ಲ ಅದನ್ನು ತೆಗೆದುಕೊಂಡು ಆಲಮೇಲಕ್ಕೆ ಬಂದು ಫಿರ್ಯಾದಿಗೆ ಮತ್ತು ಮೃತ ಸಿದ್ದಪ್ಪನಿಗೆ ಜಬರದಸ್ತಿಯಿಂದ ದೇವರ ಮಾಡೋದಿದೆ
ನಡೆಯಿರಿ ಅಂತ ಕ್ರೂಸರ ವಾಹನದಲ್ಲಿ ಫಿರ್ಯಾದಿಗೂ,ಸಿದ್ದಪ್ಪ ಹಾಗೂ ಅವರ ಮಕ್ಕಳಿಗೂ ಹಾಕಿಕೊಂಡು ವೈಜಾಪೂರ ಗ್ರಾಮದ ಸೀಮಾಂತರದಲ್ಲಿರುವ ವಾರಿ ಹಳ್ಳದ ಹತ್ತಿರ ರಾತ್ರಿ
ಕರೆದುಕೊಂಡು ಹೋಗಿ ಅಲ್ಲಿ ಅವರು ಠಿಕಾಣಿ
ಹೂಡಿದ ಜಾಗೆಯಲ್ಲಿ ಇದ್ದು, ದಿನಾಂಕ 20/08/2013 ರಂದು ರಾತ್ರಿ 1000 ಗಂಟೆ
ಸುಮಾರಿಗೆ ಮೃತ ಸಿದ್ದಪ್ಪನು ನನಗೆ ಊರಿಗೆ ಬಿಡಿ ಅಂತಾ ಅಂದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚನೆ ಮಾಡಿಕೊಂಡು ಅವರು ಫಿರ್ಯಾದಿಯ ಗಂಡನಿಗೆ ಎಲ್ಲಿಗೂ ಹೋಗದಂತೆ ತಡೆದು
ಕೈಯಲ್ಲಿ ಚಾಕು ಮತ್ತು ಬಡಿಗೆ ಹಿಡಿದುಕೊಂಡು ಭೋಸಡಿ
ಮಗನೆ ನಮಗೆ ಹಣ ಕೇಳುತ್ತಿಯಾ ಅಂತಾ ಅಂದು ಮುಕೇಶ ಇತನು ಚಾಕುವಿನಿಂದ ಬಲಗಡೆ ಹೊಟ್ಟೆಗೆ ಮತ್ತು ಬಲಗಡೆ ಬೆನ್ನಿಗೆ ತಿವಿದಿದ್ದು ಇದರಿಂದ ಆತನಿಗೆ ತೀವೃ
ಸ್ವರೂಪದಗಾಯವಾಗಿದ್ದು ಉಪಚಾರ ಕುರಿತು ದಿನಾಂಕ 21/08/2013 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿದ್ದು ಗಾಯದ ಬಾಧೇಯಿಂದ ದಿನಾಂಕ 22/08/2013 ರಂದು ಮಧ್ಯಾಹ್ನ 0140 ಪಿ.ಎಮ
ಕ್ಕೆ ಮೃತಪಟ್ಟಿರುತ್ತಾನೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment