ಕೊಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ ಶಾಂತಬಾಯಿ @ ಶಾಂತಾ ಗಂಡ ಮಲ್ಲಣ್ಣಾ ಉಡಗಿ ಸಾ:ಆಜಾದಪೂರ
ಗುಲಬರ್ಗಾ ಇವರು ನನ್ನ ಗಂಡ ಮಲ್ಲಣ್ಣ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 07-09-2013
ರಂದು 2.30 ಪಿಎಂ ಸುಮಾರಿಗೆ ನಮ್ಮ ಮನೆಯಲ್ಲಿ
ನಾನು & ಸಂಗಪ್ಪಾ ಭೀಮಾಶಂಕರ ಹಾಗೂ ನನ್ನ ತಾಯಿ ದೊಡ್ಡಮ್ಮಾ ಗಂಡ ಸಿದ್ದಪ್ಪಾ ಮಾತನಾಡುತ್ತಾ
ಕುಳಿತಾಗ ನಿಂಗಪ್ಪಾ ಇತನು ಹೊರಗಿನಿಂದ ಮನೆಗೆ ಬಂದಾಗ ನನ್ನ ತಾಯಿಯು ನನ್ನ ತಮ್ಮ ನಿಂಗಪ್ಪನಿಗೆ “ ಏ ನಿಂಗಪ್ಪಾ ನನಗೆ ಹೊಲದ ಕಡಿತಕ್ಕೆ ಹಾಕಿಕೊಂಡವರಿಂದ
ಹೆಚ್ಚಿಗೆ 50000/-ರೂ ಕೊಡಿಸು ಅಂತಾ ಅಂದಾಗ ಸದರಿ ನಿಂಗಪ್ಪಾ ಇತನು ನಿನಗೆ ಯಾಕೆ ಬೇಕು ಹಣ ನಾನು
ಹಣ ಕೊಡಿಸುವದಿಲ್ಲಾ ಅಂತಾ ಅಂದನು ಆಗ ನನ್ನ ತಾಯಿ ನನಗೆ ಹಣ ಬೇಕು ಅಂತಾ ಒತ್ತಾಯ ಮಾಡುತ್ತಿರುವಾಗ
ನಿಂಗಪ್ಪಾ ಇತನು ನನ್ನ ತಾಯಿಗೆ ನೀನಗೆ ಜೀವಂತ ಬಿಟ್ಟರೆ ತಾನೆ ನೀನು ನನಗೆ ಪದೇ, ಪದೇ ಹಣ ಕೊಡಿಸು
ಅಂತಾ ಕೇಳುತ್ತಿ ಅಂತಾ ಅಂದು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ತಾಯಿಯ ತಲೆಗೆ ಜೋರಾಗಿ 2-3 ಏಟು
ಹೊಡೆದನು ಹೊಡೆತದ ರಬಸಕ್ಕೆ ನನ್ನ ತಾಯಿಯು ನೆಲಕ್ಕೆ ಬಿದ್ದಳು ತಲೆಯಿಂದ ಭಾರಿ ರಕ್ತಸ್ರಾವವಾಗಿ
ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ ಸದರಿ ನಿಂಗಪ್ಪಾ ಇತನು ನನ್ನ ತಾಯಿಗೆ ಬಡಿಗೆಯಿಂದ ಹೊಡೆದು
ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿದ್ದು ನಂತರ
ನಾನು ಗಾಬರಿಯಾಗಿ ನನ್ನ ತಮ್ಮ ಕರೇಪ್ಪಾ ತಂದೆ ಭೀಮಶ್ಯಾ ಕೂಡಿ ಶಂಕರವಾಡಿಗೆ ಬಂದು ನೋಡಲಾಗಿ ನನ್ನ
ಅತ್ತೆಯು ಪಡಸಾಲಿಗೆ ಕೋಣೆಯಲ್ಲಿ ಅಂಗಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ತಲೆಯ ಮೇಲೆ
ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀಮತಿ ಸುನೀತಾ ಗಂಡ ನಿಂಗಪ್ಪ ಉಡಗಿ ಕೆಲಸ
ಸಾ:ಶಂಕರವಾಡಿ ಹಾ:ವ:ಶಾಂತನಗರ ಭಂಕೂರ ಇವರು ಶಂಕರವಾಡಿ ಗ್ರಾಮದ ನಮ್ಮ ಸಂಬಂಧಿಕರಾದ
ಮಲ್ಲಿಕಾರ್ಜುನ ಉಡಗಿ ರವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 07-09-2013 ರಂದು 3.00
ಪಿಎಂ ಸುಮಾರಿಗೆ ನಿನ್ನ ಗಂಡ ನಿಂಗಪ್ಪಾ ಇತನೊಂದಿಗೆ ನಿನ್ನ ಭಾವಂದಿರರು & ಮೈದುನರು ಕೂಡಿ
ಹೊಲದ ಕಡತ ಹಚ್ಚಿದ ಹೆಚ್ಚಿಗೆ ಹಣ ಸಂಬಂಧವಾಗಿ ಜಗಳ ಮಾಡುತ್ತಿದ್ದಾಗ ಸಪ್ಪಳ ಕೇಳಿ ಅಲ್ಲಿಯೇ
ನಿಂತು ನೋಡಲಾಗಿ ಸದರಿ ಮಲ್ಲಣ್ಣಾ ಇತನು ನಿನ್ನ ಗಂಡನಿಗೆ ‘ ಏ ಭೋಸಡಿ ಮಗನೆ ತಾಯಿಯ ಸಂಭಂಧವಾಗಿ ಹಣ ಕೊಡಿಸು ಅಂತಾ
ಹೇಳಿದರು ಕೂಡಾ ನೀನು ಕೊಡಿಸುವದಿಲ್ಲಾ ಅಂತಾ ಅಂದವನೆ ನಿನ್ನ ಗಂಡನ ಎರಡು ಕೈಗಳು ಹಿಂದೆ ಹಿಡಿದು
ಬೀಮಾಶಕರ , ಮಲ್ಲಣ್ಣ ಮತ್ತು ಸಂಗಪ್ಪ ಮೂರು ಜನ ಕುಡಿಕೊಂಡು ನಿನ್ನ ಗಂಡನಿಗೆ ಕೊಡಲಿಯಿಂದ ಮತ್ತು
ಸೈಜಗಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದಾಗ ನಾನು ಗಾಬರಿಯಾಗಿ ನನ್ನ
ತಂದೆ-ತಾಯಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿ ನಾವೆಲ್ಲರೂ ಕೂಡಿ ಶಂಕರವಾಡಿಯ ನಮ್ಮ ಮನೆಗೆ ಹೋಗಿ
ನೋಡಲಾಗಿ ನನ್ನ ಗಂಡನು ಅಂಗಳದಲ್ಲಿ ಬೋರಲಾಗಿ ಮುಖ ಕೆಳಗೆ ಮಾಡಿ ರಕ್ತದ ಮಡುವಿನಲ್ಲಿ
ಬಿದ್ದಿದ್ದನು ನನ್ನ ಗಂಡನಿಗೆ ಕುತ್ತಿಗೆಗೆ ಭಾರಿ ರಕ್ತಗಾಯ, ಗದ್ದಕ್ಕೆ, ತಲೆಗೆ, ಕಪಾಳಕ್ಕೆ, ಹಣೆಗೆ
ಮತ್ತು ಹೊಟ್ಟೆಯ ಬಲಪಕ್ಕಕ್ಕೆ, ಹೊಟ್ಟೆಯ ಮೇಲೆ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಮೃತ
ಪಟ್ಟಿರುತ್ತಾನೆ ಸದರಿ ನನ್ನ ಭಾವಂದಿರರು & ಮೈದುನ ಕೂಡಿ ನನ್ನ ಗಂಡನಿಗೆ ಕೊಲೆ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ
ಜುಜಾಟ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 07-09-2013 ರಂದು 13-30 ಗಂಟೆ ಸುಮಾರಿಗೆ
ಕಮಲಾಪೂರ ಗ್ರಾಮದ ಗಿರಿ ತಾಂಡಾದ ಸಮೀಪ ಡಾವರಗಾಂವ ಇವರ ಹೊಲದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ
ಭಾತ್ಮಿ ಬಂದ ಮೇರೆಗೆ, ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ
ಆಡುತ್ತಿದ್ದನ್ನು ನೋಡಿ, ಪಂಚರ ಸಮಕ್ಷಮದಲ್ಲಿ ನಾನು, ಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು.
ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ 4 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು
ವಿಚಾರಿಸಿ, ಅಂಗ ಶೋಧನೆ ಮಾಡಲಾಗಿ,
1. ಶಂಕರ ತಂದೆ ಶರಣಪ್ಪಾ ದೊಡ್ಡಮನಿ ಸಾಃ ಅಂತಪನಾಳ
2.ಪ್ರಕಾಶ ತಂದೆ ಹಣಮಂತ ಲೊಂಡೆ ಸಾಃ ಅಂತಪನಾಳ 3. ವಿಶ್ವಾಸ ತಂದೆ ಬಸವರಾಜ ಬಾಚಗುಂಡಿ
ಸಾಃಕಮಲಾಪೂರ 4. ರಾಜು ತಂದೆ ರಘುವೀರ ಉಡಬಾಳ. ಸಾಃಕಮಲಾಪೂರ
ತಾಃಗುಲಬರ್ಗಾ ಒಟ್ಟು 11750-00 ರೂ. ಮತ್ತು 52 ಇಸ್ಪೇಟ
ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆ
ಕೈಕೊಂಡಿದ್ದು. ದಾಳಿ ಮಾಡುವ ಕಾಲಕ್ಕೆ ಆಟೋ ನಂ. ಕೆಎ:32-3277 ನೇದ್ದರ ಚಾಲಕ ಬಬ್ಬರ ಈತನು ತನ್ನ
ಆಟೋ ಸಮೇತ ಓಡಿ ಹೋಗಿದ್ದು. ನಂತರ ಜಪ್ತ ಪಂಚನಾಮೆಯೊಂದಿಗೆ, ಎಲ್ಲಾ
04 ಜನ ಆರೋಪಿತರನ್ನು, ಮತ್ತು ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ
11750-00 ರೂ ಹಾಗು, 52 ಇಸ್ಪೇಟ
ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ. ಓಂಕಾರಿ ತಂದೆ ಲಕ್ಷ್ಮಣ
ತಳವಾರ ಜಾತಿ:ವಾಲ್ಮಿಕಿ (ಬೇಡರು), ಉ:ಪ್ರಭಾರಿ ಮುಖ್ಯ ಗುರುಗಳು, ಸಾ:ಹಿರಿಯ ಪ್ರಾಥಮಿಕ ಶಾಲೆ
ಮುಷ್ಠಳ್ಳಿ ಗ್ರಾಮ, ತಾ:ಸೇಡಂ. ರವರು ದಿನಾಂಕ 07-09-2013 ರಂದು ಬೆಳಗ್ಗೆ 09-30 ಗಂಟೆ
ಸುಮಾರಿಗೆ ಮುಷ್ಠಳ್ಳಿ ಗ್ರಾಮದ ಹೆಚ್.ಪಿ.ಎಸ್ ಶಾಲೆಯ ಶಿಕ್ಷಕರಾದ ಬಸವರಾಜ ಪುಜಾರಿ ಶಾಲಾ
ಅವಧಿಯಲ್ಲಿ ಮುಖ್ಯ ಗುರುಗಳ ಕೋಣೆಯಲ್ಲಿ ಅವರು ಕುಳಿತಿರುವಾಗ ನಮ್ಮ ವಿಷಯವನ್ನು ಏಕೆ
ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಿಕೊಟ್ಟಿದ್ದಿರಿ ಎಂದು ಪ್ರಶ್ನಿಸಿ ನನಗೆ “ಲೇ ವಾಲ್ಮಿಕಿ ಬ್ಯಾಡ ಸೂಳೆ ಮಗನೇ
ನಿನ್ನನ್ನು ಕೊಲೆ ಮಾಡಿಸಬೇಕಾಗಿತ್ತು ಮುಂದೆ ನೋಡು ಒಂದು ವಾರದಲ್ಲಿ ನಿನ್ನನ್ನು ಕೊಲೆ
ಮಾಡಿಸುತ್ತೇನೆ” ಎಂದು ಬೈದು ಕುರ್ಚಿಯಿಂದ ಎದ್ದು
ಬಂದು ನನಗೆ ಹಲ್ಲೆ ಮಾಡುವಾಗ ನಲಿಕಲಿ ಕೋಣೆಯಲ್ಲಿದ್ದ ಸಹಶಿಕ್ಷಕರಾದ ಶರಣಪ್ಪ ಸಣಿ ಹಾಗೂ ನಮ್ಮ
ಶಾಲೆಯ ಸಮೀತಿಯ ಸದಸ್ಯರಾದ ಹಣಮಂತರೆಡ್ಡಿ ಇವರುಗಳು ಬಂದು ಜಗಳ ಬಿಡಿಸಿದರೂ ಸಹಾ ಬಸವರಾಜ ಪುಜಾರಿ
ಇತನು “ಲೇ ವಾಲ್ಮಿಕಿ ಬ್ಯಾಡ ರಂಡಿ ಮಗನೇ
ನೀನು ಊರು ಹೊರಗೆ ಇರಬೇಕು ನೀನು ಊರ ಹೊರಗೆ ಇರಬೇಕು ಶಾಲೆಯಲ್ಲಿ ಬಂದಿದ್ದಿಯ” ಎಂದು ಜೋರಾಗಿ ಬೈದು ನಿನ್ನ
ವಾಲ್ಮಿಕಿ ಜಾತೆಯನ್ನು ಬಳ್ಳಾರಿ ಜಿಲ್ಲೆಯಲ್ಲಿ ತೋರಿಸು ನಮ್ಮ ಗುಲಬರ್ಗಾ ಜಿಲ್ಲಯಲ್ಲಿ ಅಲ್ಲ
ಎಂದು ಬೈದು ಈ ಶಾಲೆಯ ಮುಖ್ಯ ಗುರಗಳ ಸ್ಥಾನ ಇರುವದು ನನಗಾಗಿ ನಿನ್ನಂಥ ಕೀಳು ಜಾತಿಯವರಿಗಲ್ಲ
ನೀನು ನನ್ನ ಜೊತೆ ಶಾಲೆಯಲ್ಲಿರುವದು ಅಸಹ್ಯವಾಗುತ್ತದೆ. ನಿನ್ನಂಥವರಿಗೆ ಹೇಗೆ ಸರಕಾರಿ ನೌಕರಿ
ಕೊಟ್ಟತ್ತೊ ಗೊತ್ತಿಲ್ಲ. ಎಂದು ಮಾತಿಗೊಮ್ಮೆ ಜಾತಿ ನಿಂದನೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment