ಅಪಘಾತ ಪ್ರಕರಣ :
ಕಮಲಾಪೂರ
ಠಾಣೆ : ದಿನಾಂಕ: 09-09-2013
ರಂದು ಪ್ರಕಾಶ ತಂದೆ ಉಮಲಾ ಜಾಧವ ಸಾ: ಮರಮಂಚಿ
ತಾಂಡಾ ತಾ:ಜಿ: ಗುಲಬರ್ಗಾ ಮತ್ತು ಮೃತ ವಾಚು ಚವ್ಹಾಣ ಮತ್ತು ಥಾವರು ಚವ್ಹಾಣ ಕೂಡಿಕೊಂಡು
ಮಾತನಾಢುತ್ತಾ ಮರಮಂಚಿ ತಾಂಢಾದ ಕ್ರಾಸ್ ಹತ್ತಿರ ನಿಂತುಕೊಂಡಿದ್ದಾಗ ಮರಗುತ್ತಿ ಗ್ರಾಮದ ಪಿಕಅಪ್
ಜೀಫ ನಂ: ಎಂ.ಹೆಚ್,.13 –ಎ.ಎನ್-5488 ನೇದ್ದನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಢು ಬಂದು ಮಾತನಾಢುತ್ತಾ ನಿಂತಿದ್ದ ನಮಗೆ ಡಿಕ್ಕಿಹೊಡೆದು ಅಪಘಾತ
ಪಡಿಸಿದ್ದು, ಈ ಅಪಘಾತದಲ್ಲಿ ನನಗೆ ಮರ್ಮಾಂಗಕ್ಕೆ ಮತ್ತು ಹೊಟ್ಟೆಗೆ
ಗುಪ್ತಗಾಯವಾಗಿದ್ದು, ವಾಚು ಚವ್ಹಾಣ ಈತನಿಗೆ ತೆಲೆಗೆ ಮತ್ತು ಬಲಗಾಲಿಗೆ ಭಾರಿ
ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಥಾವರು ಚವ್ಹಾಣ ಈತನಿಗೆ ಎಡಭುಜಕ್ಕೆ ತರಚಿತ
ರಕ್ತಗಾಯ ಮತ್ತು ಎಡಗೈಗೆ ಭಾರಿ ಗುಪ್ತಗಾಯ, ಹಣೆಗೆ, ಎಡ ಹುಬ್ಬಿಗೆ ರಕ್ತಗಾಯ ಮತ್ತು ಎಡಗಾಲಿಗೆ ರಕ್ತಗಾಯ
ಮತ್ತು ಗದ್ದಕ್ಕೆ ಮತ್ತು ಮೈ-ಕೈಗಳೀಗೆ ತರಚಿದ ರಕ್ತಗಾಯಗಳಾಗಿದ್ದವು. ಅಪಘಾತ ಪಡಿಸಿದ ನಂತರ
ಪಿಕಅಪ್ ಜೀಪ ಚಾಲಕನು ತನ್ನ ಜೀಪನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಜೀಪನ್ನುಬಿಟ್ಟು ಓಡಿ
ಹೋಗಿರುತ್ತಾನೆ.ಆತನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ನೋಡಿದಲ್ಲಿ ಗುರ್ತಿಸುತ್ತೇನೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮುಧೋಳ
ಠಾಣೆ : ಶ್ರೀ ಹಣಮಂತ ತಂದೆ
ಬಿಚ್ಚಪ್ಪ ಮಡಿವಾಳ ಸಾ: ಮದನಾ ಗ್ರಾಮ, ದಿನಾಂಕ: 09-09-2013 ರಂದು ಮುಂಜಾನೆ ನಾನು ನನ್ನ ಮನೆಯಲ್ಲಿದ್ದಾಗ, ನನ್ನ ಪಕ್ಕದ
ಮನೆಯ ನನ್ನ ತಮ್ಮನಾದ ಸಾಯಪ್ಪ ತಂದೆ ಬಿಚ್ಚಪ್ಪ ಮಡಿವಾಳ ಇತನು ತನ್ನ ಮನೆಯಿಂದ ಹರಿಯುವ ಬಚ್ಚಲು
ನೀರನ್ನು ನಮ್ಮ ಗೊಡೆಗೆ ಹೊಡೆಯುತ್ತಿದ್ದನು, ಆಗ ಇದನ್ನು ನೋಡಿ ನಮ್ಮ ಮನೆಯ ಮುಂದೆ ನಿಂತು
ಸದರಿಯವನಿಗೆ, ನಿನ್ನ ಬಚ್ಚಲ ನೀರು ನನ್ನ ಮನೆಯ ಗೋಡೆಗೆ ಯಾಕೆ ಹೊಡೆಯುತ್ತಿದ್ದಿ ಅಂತಾ ಕೇಳಿದನು,
ನಮ್ಮ ಗೋಡೆಗೆ ಹೊಡೆಯ ಬೇಡಾ ಬಂದ ಮಾಡು ಅಂದಾಗ ಸದರಿಯವನು, ಮತ್ತು ಮನೆಯಲ್ಲಿದ್ದ ಇವನ ಹೆಂಡತಿಯಾದ
ಜಗಮ್ಮ ಗಂಡ ಸಾಯಪ್ಪ ಇವರು ಕೂಡಿ ನನ್ನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಗನೆ ಇದರ ಬಗ್ಗೆ,
ನೀ ಏನು ಕೇಳುತ್ತಿ, ಮಗನೆ ನಿನಗೆ ನೋಡೆ ಬಿಡುತ್ತೇನೆ ಅನ್ನುತ್ತಾ, ಇಬ್ಬರು ನನಗೆ ಕೈಗಳಿಂದ
ಹಿಡಿದು ಜಗ್ಗಾಡುತ್ತಾ. ಕೈಗಳಿಂದ ಬೆನ್ನಿನ ಮೇಲೆ ಮತ್ತು ಏದೆಗೆ ಹೊಡೆದು, ಏಳೆದಾಡುತ್ತಾ. ಅಲ್ಲೆ
ಬಾಜು ಇದ್ದ ಭೀಮರೆಡ್ಡಿ ಶೇರಿ ಇವರ ಕಲ್ಲು ಗೊಡೆಯಲ್ಲಿ ನೂಕಿ ಕೊಟ್ಟಾಗ ನನ್ನ ಏಡಗೈ ಮೊಣಕೈಗೆ,
ಏಡಗಾಲ ಪಾದಕ್ಕೆ ಕಲ್ಲುಗಳು ಬಡಿದು ರಕ್ತಗಾಯ ವಾಗಿರುತ್ತದೆ. ಆಗ ಇದನ್ನು ನೋಡಿ, ಬಿಡಿಸಲು ಬಂದ
ನನ್ನ ಮಗನಾದ ಶರಣಪ್ಪ ತಂದೆ ಹಣಮಂತ ಇತನಿಗೆ ನನ್ನ ತಮ್ಮನಾದ ಸಾಯಪ್ಪನು, ಕಲ್ಲನಿಂದ ಏಡಗಾಲ
ಮೊಣಕಾಲಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment