ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ :ಶ್ರೀ ಆನಂದ ತಂದೆ ಶಿವಪುತ್ರ ಸಾ; ಶಹಾಬಜಾರ ಗುಲಬರ್ಗಾ ಇವರು ದಿನಾಂಕ
29-08-2013 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಆಳಂದ ಚಕ್ಕ ಪೋಸ್ಟ ಹತ್ತಿರ ಹೋಗಲು ತಮ್ಮ ಸಂಬಂಧಿಕ
ಸಾಗರ ಇತನು ತನ್ನ ಗೆಳೆಯನಾದ ಸೂರ್ಯಕಾಂತ ಮಾಟೂರ ಇತನೊಂದಿಗೆ ಅಲ್ಲಿಗೆಬಂದರು . ಸಾಗರ ಇತನು ತಿಳಿಸಿದ್ದು ಏನೆಂದರೆ ತನ್ನ ಸಂಗಡ ಇದ್ದ ಸೂರ್ಯಕಾಂತ ಮಾಟೂರ ಇತನು ಬೆಂಗಳೂರಿಗೆ ಹೋಗುವವರಿದ್ದಾರೆ ಅವರಿಗೆ ಬಸ್ಸ ಸ್ಟ್ಯಾಂಡ ವರೆಗೆ ಬಿಟ್ಟು ಬರೋಣ ನಡೆಯಿರಿ ಅಂತಾ ಹೇಳಿ ಸಾಗರ ಮುನ್ನೊಳ್ಳಿ ಇತನು ತನ್ನ
ಮೋಟಾರ ಸೈಕಲ ನಂ.ಕೆ.ಎ.32 ಇಡಿ 4738 ಮೇಲೆ ತನ್ನ ಹಿಂದೆ ಸೂರ್ಯಕಾಂತನಿಗೆ ಕೂಡಿಸಿಕೊಂಡು ಹೊರಟಿದ್ದು ನಾನು ಹಾಗೂ ನಾಗರಾಜ ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಆಳಂದ ಚಕ್ಕ ಪೊಸ್ಟದಿಂದ ರಿಂಗರೋಡ ಮೂಲಕ ಬಸ್ಸ ಸ್ಟ್ಯಾಂಡ ಕಡೆಗೆ ಹೋರಟಿದ್ದೇವು.ರಿಂಗರೋಡ ಮೂಲಕ ಹೊರಟಾಗ ಹುಸೇನಿ ಗಾರ್ಡನ ಎದರುಗಡೆ ರಿಂಗರೋಡ ಮೇಲೆ ಬಂದಾಗ ಸಾಗರ ಮತ್ತು ಸೂರ್ಯಕಾಂತ ಇದ್ದ ಮೋಟಾರ ಸೈಕಲ್ ಒಮ್ಮೆಲೆ ಸ್ಕಿಡಾಗಿ ಇಬ್ಬರು ಕೆಳಗೆ ಬಿದ್ದರು. ಅವರ ಹಿಂದುಗಡೆ ಹೊರಟಿದ್ದ ನಾವು ಕೂಡಲೆ ನಮ್ಮ ಮೋಟಾರ ಸೈಕಲನ್ನು ನಿಲ್ಲಿಸಿ ಹೋಗಿ ನೋಡಲಾಗಿ ಸಾಗರನಿಗೆ ಮುಖಕ್ಕೆ ತರಚಿದ ರಕ್ತಗಾಯ ,ಎಡಗೈ
ಮುಂಗೈಗೆ ಬಾರಿ ಗುಪ್ತ ಪೆಟ್ಟು , ಬಲಗೈ ಮೋಳಕೈಗೆ ತರಚಿದ ರಕ್ತಗಾಯವಾಗಿದ್ದವು ಮತ್ತು ಸೂರ್ಯಕಾಂತನಿಗೆ ಗದ್ದದ ಕೆಳಗೆ ತುಟಿಗಳಿಗೆ ಬಾರಿ ರಕ್ತಗಾಯ ಮತ್ತು ಎದೆಗೆ ಹೋಟ್ಟೆಗೆ ಭಾರಿ ಗುಪ್ತ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಆಗ
ನಾನು ಮತ್ತು ನನ್ನೊಂದಿಗೆ ಇದ್ದ ನಾಗರಾಜ ಇಬ್ಬರು ಕೂಡಿಕೊಂಡು ಸ್ಥಳಕ್ಕೆ 108 ಅಂಬುಲೆನ್ಸ ಕರೆಯಿಸಿಕೊಂಡು ಅದರಲ್ಲಿ ಸಾಗರ ಮತ್ತು ಸೂರ್ಯಕಾಂತ ಇವರಿಬ್ಬರನ್ನು ಉಪಚಾರ ಕುರಿತು ಗುಲಬರ್ಗಾದ ಯುನೈಟೆಡ ಆಸ್ಪತ್ರೆಗೆ ಕರೆದಕೊಂಡು ಹೋಗಿ ಸೇರಿಕೆ ಮಾಡಿದ್ದು ಸಾಗರ ಇತನು ತನ್ನ ಮೋಟಾರ ಸೈಕಲ ನಂ.ಕೆ.ಎ.32 ಇ.ಡಿ 4738 ನೆದ್ದನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ. ಅಷ್ಟರಲ್ಲಿ ಸೂರ್ಯಕಾಂತನ ಸಂಬಂಧಿಕರು ಬಂದು ಸೂರ್ಯಕಾಂತನಿಗೆ ಭಾರಿಗಾಯವಾಗಿದ್ದರಿಂದ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಿಗೆ ಕರೆದುಕೊಂಡು ಹೋಗಿರುತ್ತಾರ ಸದರಿ ಪ್ರಕರಣದಲ್ಲಿನಯ ಗಾಯಾಳು ಸೂರ್ಯಕಾಂತ
ತಂದೆ ಸೋಮಣ್ಣಾ
ಮಾಟೂರ ಇತನಿಗೆ ಬಸವೇಶ್ವರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು
ಗುಲಬರ್ಗಾದಿಂದ ಹೈದ್ರಾಬಾದನ ಯಶೋಧ ಆಸ್ಪತ್ರೆ ಸೋಮಾಜಿ
ಗುಡಾ ಹೈದ್ರಾಬಾದ ಕರೆದುಕೊಂಡು ಹೋಗಿದ್ದು
ದಿನಾಂಕ. 30-8-2013 ರಂದು
5-45 ಎ.ಎಂ.ಕ್ಕೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ
ಶಂಕ್ರೇಪ್ಪಾ ದೊಡ್ಡಮನಿ ಸಾ:ಬೆಳಗುಂಪಿ ಹಾ:ವ:ತೊನಸಳ್ಳಿ (ಎಸ್) ಇವರು ದಿನಾಂಕ 01-09-2013
ರಂದು ತೊನಸಳ್ಳಿ (ಎಸ್) ಗ್ರಾಮದಲ್ಲಿರುವ ಅಂಬೇಡ್ಕರ ಚೌಕದ ಹತ್ತಿರ ನಿಂತಾಗ ಜೇವರ್ಗಿ
ಕಡೆಯಿಂದ ಲಾರಿ.ನಂ.ಕೆಎ-32,4731 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ
ನಡೆಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ನನಗೆ ತಲೆಗೆ ಭಾರಿ ಒಳಪೆಟ್ಟು, ಎರಡು ಮುಂಗೈಗೆ
ಒಳಪೆಟ್ಟು ಮತ್ತು ಟೊಂಕಕ್ಕೆ ರಕ್ತಗಾಯ ಹಾಗೂ ಒಳಪೆಟ್ಟು ಮಾಡಿದ್ದು ಸದರಿ ಲಾರಿ ಚಾಲಕನು ತನ್ನ
ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣ
ಪ್ರಕರಣ :
ಮಹಿಳಾ
ಠಾಣೆ : ಶ್ರೀ ಬಸವರಾಜ ತಂದೆ ವಿರಭದ್ರಪ್ಪಾ ಕೋರಿ ಸಾ: ಮನೆ ನಂ ಈ ಡಬ್ಲೂ .ಎಸ್. 16
ಆರ.ಟಿ.ಓ ಆಫೀಸ ಹಿಂದುಗಡೆ ಗುಬ್ಬಿ ಕಾಲೋನಿ ಗುಲಬರ್ಗಾ
ಇವರ ಮಗಳಾದ ಪೂಜಾ ವ: 17 ವರ್ಷ ಇವಳು ದಿನಾಂಕ: 17.08.2013 ರಂದು ಬೆಳಗ್ಗೆ 8.00
ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ
ಅಂತಾ ಹೇಳಿ ಹೋದವಳು ಸಾಯಾಂಕಾಲವಾದರು ಮನೆಗೆ ಮರಳಿ ಬಂದಿರುವುದಿಲ್ಲಾ ನಾವು ಅಲ್ಲಿಂದ
ಇಲ್ಲಿಯವರೆಗೆ ಪೂಜಾ ಇವಳ ಸ್ನೇಹಿತರಲ್ಲಿ ಮತ್ತು ನಮ್ಮ ಸಂಭಂದಿಕರಲ್ಲಿ ಹುಡಿಕಾಡಿದರು ಸಿಕ್ಕಿರುವುದಿಲ್ಲಾ. ನನ್ನ ಮಗಳಿಗೆ
ಮಹೇಶ @ ಮಹಾದೇವ ದೊರೆ ಸಾ: ಗುಬ್ಬಿ ಕಾಲೋನಿ ಗುಲಬರ್ಗಾ ಇತನು
ಅಪಹರಿಸಿಕೊಂಡು ಹೋಗಿರಬಹುದು ಹಾಗು ನನ್ನ ಮಗಳಿಗೆ ಹುಡಿಕಿಕೊಡಬೇಕು ಅಂತಾ ನಮಗೆ ಸಂಶಯವಿರುತ್ತದೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment