Police Bhavan Kalaburagi

Police Bhavan Kalaburagi

Monday, September 23, 2013

Gulbarga District Reported Crime

ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ಸಂಪೂರ್ಣ ಗಂ ಸಂಜೀವಕುಮಾರ ಗುಡೂರ ಸಾ : ಬಕ್ಕಚೌಡಿ ತಾ:ಜಿ: ಬೀದರ ಇವರ 6 ವರ್ಷದ ಮಗಳು  ತಮ್ಮೂರಿನ ಸರಕಾರಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವಿದ್ಯಾ ಅಭ್ಯಾಸ ಮಾಡುತ್ತಿದ್ದು ಸುಮಾರು 3 ತಿಂಗಳ ಹಿಂದೆ ಮಹಾಗಾಂವ ಕ್ರಾಸದಲ್ಲಿರುವ ಚಾಣಕ್ಯಾ ಕಾಂಪಿಟೇಟ್ವಿ ವಸತಿ ಶಾಲೆಯಲ್ಲಿ ಕೋಚಿಂಗ ಕ್ಲಾಸ ಸಲುವಾಗಿ ಪ್ರವೇಶ ಪಡೆದಿದ್ದು ಇರುತ್ತದೆ ಈಗ ಸೂಮಾರು 12-13 ದಿವಸಗಳಿಂದ ಪಲ್ಲವಿ ಇವಳು ತನಗೆ ಹೊಟ್ಟೆ ಬೇನೆಯಾಗುತ್ತಿದೆ ಅಂತಾ ತಿಳಿಸಿದ್ದರಿಂದ ಅವಳಿಗೆ ಅಲ್ಲಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿದ್ದು ಇರುತ್ತದೆ ಈಗ ಶಾಲೆಯಲ್ಲಿ ಅರ್ದ ವಾರ್ಷಿಕ ಪರೀಕ್ಷೆ ಇರುತ್ತವೆ ಅಂತಾ ತಮ್ಮೂರಿನ ಶಾಲೆಯ ಶಿಕ್ಷಕರು ತಿಳಿಸಿದ್ದರಿಂದ ನಿನ್ನೆ ದಿನಾಂಕ 21-09-2013  ರಂದು ತಾನು ಮಹಾಗಾಂವ ಕ್ರಾಸಗೆ ಬಂದು ಚಾಣಕ್ಯಾ ವಸತಿ ಶಾಲೆಯಿಂದ ತನ್ನ ಮಗಳಿಗೆ ಊರಿಗೆ ತೆಗೆದುಕೊಂಡು ಹೋಗಿದ್ದು ನಿನ್ನೆ ತನ್ನ ಮಗಳು ತನಗೆ ತಿಳಿಸಿದ್ದೇನಂದರೆ ತಮ್ಮ ಶಾಲೆಯ ರಾಜಶೇಖರ ಕಲಕೋರಿ ಎಂಬುವ ಶಿಕ್ಷಕನು ದಿನಾಂಕ 06-09-2013 ರಂದು ರಾತ್ರಿ ತಾನು ಮಲಗಿದ್ದ ಸ್ಥಳದಿಂದ ಎಬ್ಬಿಸಿಕೊಂಡು ಹೋಗಿ ಎಚ್, ಎಮ್ , ಕೋಣೆಯಲ್ಲಿ ತೆಗೆದುಕೊಂಡು ಹೋಗಿ ತನ್ನ ಮೈಮೇಲಿನ ಬಟ್ಟೆಗಳನ್ನು ತೆಗೆದು ಹಾಕಿ ನಗ್ನ ಮಾಡಿ ತನ್ನ ಮೇಲೆ ಅತ್ಯಾಚಾರ ಮಾಡಿರತ್ತಾನೆ ಹಾಗೂ ತಾನು ಅಳುತ್ತಿದ್ದಾಗ ಈ ವಿಷಯವು ಯಾರಿಗಾದರು ತಿಳಿಸಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅದ್ದರಿಂದ ಅಂಜಿಕೊಂಡು ತಾನು ಈ ವಿಷಯ ಇಷ್ಟು ದಿವಸ ಹೆಳಿರಲಿಲ್ಲಾ ಅಂತಾ ತಿಳಿಸಿದ್ದು ಚಾಣುಕ್ಯ ಶಾಲೆಯ ಶಿಕ್ಷಕನಾದ ರಾಜಶೇಖರ ಕಲಕೊರಿ ಇತನ ವಿರೂದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈಶ್ವರಪ್ಪ ನೀರಡಗಿ ಸಾ: ಲಕ್ಷ್ಮಿನಾಯಾರಣ ನಗರ ಪಿ &ಟಿ ಕ್ವಾಟರ್ಸ ಹಿಂದೆ ಗುಲಬರ್ಗಾ ಇವರು ದಿನಾಂಕ 21-09-2013 ರಂದು 4-30 ಪಿ.ಎಂ.ಕ್ಕೆ ಸಾಯಂಕಾಲ 5-25 ನಿಮಿಷಕ್ಕೆ ಬೆಂಗಳೂರು ಬೇಕರಿ, ಆಶ್ರಯ ಬಾರ ಪಕ್ಕದಲ್ಲಿ ಕೇಕ್ ಹಾಗು ಬ್ರೇಡ್ ಖರೀಧಿಸುತ್ತಿದ್ದಾಗ ನನ್ನ ಸ್ನೇಹಿತ ಜೊತೆ ಮಾತನಾಡುತ್ತಾ 20 ನಿಮಿಷ ತಡವಾಯಿತು. ತದನಂತರ ನಾನು ನನ್ನ ಹಿರೋ ಹೊಂಡಾ ಪ್ಯಾಷನ್  ನನ್ನ ಗಾಡಿ ನಂ. ಕೆ.ಎ-36 ಆರ್- 1186 ನೇದ್ದನ್ನು ಹಚ್ಚಿದ ಸ್ಥಳಕ್ಕೆ ಹೋಗಿ ನೋಡಲಾಗಿ ಗಾಡಿ ಕಾಣಿಸಲಿಲ್ಲಾ ಅಕ್ಕಪಕ್ಕದ ವರೆಗೆ ವಿಚಾರಿಸಿದಾಗ ನನಗೆ ಗೊತ್ತಿಲ್ಲಾವೆಂದು ತಿಳಿದರು ನಾನು ಗಾಡಿ ಹಚ್ಚಿದ ಸ್ಥಳದ ಪಕ್ಕದಲ್ಲಿ ಸಿ.ಸಿ. ಕ್ಯಾಮೇರಾ ಅಳವಡಿಸಿಲಾಗಿತ್ತು. ತದನಂತರ ಆಶ್ರಯ ಬಾರ ಮಾಲಿಕರಿಗೆ ವಿಚಾರಿಸಿದೆ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ನೋಡಲು ಬನ್ನಿವೆಂದು ಒಳಗಡೆ ಕರೆದುಕೊಂಡು ಹೋಗಿ ಕ್ಯಾಮೇರಾ ವಿಕ್ಷಿಸಿದಾಗ ಗಾಡಿ ತೆಗೆದಕೊಂಡು ಹೋಗುವ ವ್ಯಕ್ತಿ ಬಾರನಿಂದ ಹೊರಗಡೆ ಬಂದು 2 ನಿಮಿಷ ಗಾಡಿಯ ಪಕ್ಕದಲ್ಲಿ ನಿಂತು ತದನಂತರ ನೇರವಾಗಿ ಗಾಡಿಯ ಹತ್ತಿರ ಬಂದು ಚಾವಿ ಹಚ್ಚಿ ತೆಗೆದುಕೊಂಡು ಹೋಗಿದ್ದು ನೋಡಲಾಯಿತು. ವ್ಯಕ್ತಿಯ ಎತ್ತರವಾಗಿದ್ದು ದಪ್ಪವಿದ್ದು ಕಾಲಲ್ಲಿ ಕರಿ ಬೂಟು, ಹಾಗು ಟಿ. ಶರ್ಟ, ಹಳದಿ, ಬಿಳಿ ಹಾಗು ಕರಿ ಬಣ್ಣದ ಟೀಶರ್ಟ, ದರಿಸಿದ್ದು ತಿಳಿದು ಬಂದಿದೆ. ಆ ವ್ಯಕ್ತಿಯ ಪತ್ತೆಹಚ್ಚಿ ನನ್ನ ಮೋಟಾರ ಸೈಕಲ್ ಹುಡುಕಿ ಕೊಡಲು ವಿನಂತಿ ಅದರ ಕಿಮ್ಮತ್ತು 30,000/- ರೂ ಇರುತ್ತದೆ.  ಪತ್ತೆ ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಕುಮಾರ ಎಂ. ಮಡ್ಡಿ ನಗರ ಅಧ್ಯಕ್ಷರು ದಲಿತ ಸೇನೆ ಗುಲಬರ್ಗಾ ಇವರು ದಿನಾಂಕ 22-09-2013 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನರ್ಸಿಂಗ್ ವಿದ್ಯಾರ್ಥಿ ರವಿ ಎಂಬುವವರು ಮೊಬೈಲ್ ಗೆ ಕರೆ ಮಾಡಿ ತಿಳಿಸಿದ್ದೆನೆಂದರೇ, ನಾನು ಅಲ್ ಕರೀಮ್ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದು ನಾಳೆ ಪರೀಕ್ಷೆ ಸುಮಾರು 40 ಜನ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಕೇಳಿದರೆ ನೀವು ಒಬ್ಬಬ್ಬರೂ 70 ರಿಂದ 01 ಲಕ್ಷ ರೂ ರವರೆಗೆ ಕಟ್ಟಬೇಕು ಹಾಲ್ ಟಿಕೆಟ್ ಕೊಡುವುದಿಲ್ಲಾ. ನಿಮ್ಮ ಸಮಾಜ ಕಲ್ಯಾಣ ಇಲಾಖೆಯವರು ಫೀಸು ಕಟ್ಟಿರುವುದಿಲ್ಲ ಅಂತಾ ತಕರಾರು ಮಾಡುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿ ಸಂಗಡ ಶಶೀಲ, ರಾಜು, ನಾಗೇಂದ್ರ ಜವಳಿ ಇವರೆಲ್ಲರೂ ಕೂಡಿಕೊಂಡು ಕಾಲೇಜಿ ಹೋಗಿ ವಿಚಾರಿಸುತ್ತಿರುವಾಗ ಇಮ್ತಿಯಾಜ್ ಇವನು ನಮ್ಮ ಜೊತೆ ತಕರಾರು ಮಾಡಿ ಜಾತಿ ಎತ್ತಿ ಬೈಯುತ್ತಿದ್ದರಿಂದ  ಏಕೆ ಬೈಯುತ್ತೀರಿ ಅಂತಾ ಕೇಳಿದಾಗ ಇಮ್ತಿಯಾಜ್ ಇತನು ನಮ್ಮ ಕಾಲೇಜಿನ ಮುಖ್ಯಸ್ಥರು & ಪ್ರಾಚರ್ಯರು ನಿಮ್ಮನ್ನು ಒದ್ದು ಕಳುಹಿಸಲು ಹೇಳಿದ್ದಾರೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀಮತಿ  ತಿಪ್ಪಮ್ಮ ಗಂಡ ರಾಮಲಿಂಗಪ್ಪ ಮುಖ್ಯ ಅಡುಗೆಯವರು ಅಕ್ಷರ ದಾಸೋಹ ಮುಷ್ಠಳ್ಳಿ, ತಾ:ಸೇಡಂ ರವರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಷ್ಠಳ್ಳಿಯ ಅಕ್ಷರ ದಾಸೋಹದ ಮುಖ್ಯ ಅಡುಗೆಯವಳಿದ್ದು, ದಿ:21-09-2013 ರಂದು ಬೆಳಗ್ಗೆ 0915 ಗಂಟೆ ಸುಮಾರಿಗೆ ಶಾಲೆಯ ಬಿಸಿ ಊಟ ಕೋಣೆಯಲ್ಲಿ ನಾನು ಮತ್ತು ಅಡುಗೆ ಸಹಾಯಕಿಯಾದ ಶ್ರೀಮತಿ. ಶಂಕ್ರಮ್ಮ ಗಂಡ ಬಸಯ್ಯಸ್ವಾಮಿ ಎಂಬುವವರು ಅಡುಗೆ ಸಂಭಂದ ತಯಾರಿ ಮಾಡಿಕೊಳ್ಳುತ್ತಿದ್ದೇವು. ಈ ಸಮಯದಲ್ಲಿ ಬಿಸಿ ಊಟ ಕೋಣೆಗೆ ಬಂದ ಮುಖ್ಯ ಗುರುಗಳಾದ ಓಂಕಾರ ಸರ್ ಮತ್ತು ಶರಣಪ್ಪ ಸರ್ ಸಿಟ್ಟಿನಿಂದ ಅಡುಗೆ ಕೋಣೆಗೆ ಬಂದು, ಶರಣಪ್ಪ ಸರ್ ಇವರು ನನಗೆ ಹೊಲೆ ರಂಡಿ, ಜಂಗಮ ಸೂಳೆ ಶಾಲೆಗೆ ಬರುವದು ಬಿಟ್ಟು ಮೀಟಿಂಗ್ ಅಂತ ತಿರುಗಾಡಿದರೆ ಅಡುಗೆ ಯಾರು ಮಾಡಬೇಕು? ನಿನ್ನದು ಹೇಳಿ ಕೇಳಿ ಹೊಲೆಯ ಜಾತಿ, ಈ ಹೊಲಸು ಜಾತಿ ಹೊಲಸು ಗುಣ ನಿನಗೆ ಹುಟ್ಟಿನಿಂದ ಬಂದಿದೆ ಅದಕ್ಕೆ ರಂಡಿ ನಿನಗೆ ಅಡುಗೆ ಮಾಡಲು ಬ್ಯಾಡ ಅಂತ ಹೇಳಿದ್ದು ನೀನು ಮುಟ್ಟಿದ ತಿಂಡಿ ಹೊಲಸಾಗಿರುತ್ತದೆ. ಎಂದು ಬೈದು ಕೈಯಿಂದ ಹೊಡೆದು ದೈಹಿಕ ಹಲ್ಲೆ ಮಾಡಿರುತ್ತಾರೆ. ಜೊತೆಯಲ್ಲಿದ್ದ ಓಂಕಾರ ಸರ್ ಕೂಡಾ ನನಗೆ ರಂಡಿ ಭೋಸಡಿ ಅಂತ ಬೈದು, ಸರಿಯಾಗಿ ಕೆಲಸಕ್ಕೆ ಬರುವದಿಲ್ಲ ಅಂದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಿತಂಬರಾಯ ತಂದೆ ಕಾಶಿನಾಥ ಕಮ್ಮನ್ ಸಾ : ಪಟ್ಟಣ ರವರು ದಿನಾಂಕ 29-09-13 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ತಮ್ಮ ಎದುರು ಪ್ಲಾಟನ ಪಕ್ಕದಲ್ಲಿ ನಮ್ಮ ಕಾಕಾ ಮನೆ ಕಟ್ಟುಲು ಅಳತೆ ಮಾಡುತ್ತಿದ್ದಾಗ 4 ಫೀಟ ಸಂದಿ ಬಿಡಲು ಹೇಳಿದ್ದಕ್ಕೆ 1. ಕಲ್ಯಾಣಿ ತಂದೆ ಭೀಮಶ್ಯಾ ಕಮ್ಮನ 2. ರುಕ್ಕವ್ವ ಗಂಡ ಭೀಮಶ್ಯಾ ಕಮ್ಮನ 3. ಶಿವಪ್ಪ ಕಮ್ಮನ 4. ರಾಘಪ್ಪ ಕಮ್ಮನ ಸಾ: ಎಲ್ಲರೂ ಪಟ್ಟಣ ಗ್ರಾಮ ಎಲ್ಲರು ಕೂಡಿಕೊಂಡು ಬಂದು ನಮ್ಮ ಜಾಗೆಯಲ್ಲಿ ಸಂದಿ ಬಿಡಲು ಹೇಳುವವನು ನಿವ್ಯಾರು ಅಂತಾ ಜಗಳಾ ತೆಗದು ಅವಾಚ್ಯ ಬೈದು ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: