ಅಪಹರಣ ಪ್ರಕರಣಗಳು
:
ಅಶೋಕ ನಗರ ಠಾಣೆ : ಶ್ರೀ. ಬಸಲಿಂಗಪ್ಪಾ ತಂದೆ ಶಿವಬಸಪ್ಪಾ ನಿರಡಿ ಸಾ: ಮನೆ ನಂ. 85
ಶಾಂತಿ ನಗರ ಗುಲಬರ್ಗಾ ರವರು ದಿನಾಂಕ 12-09-2013 ರಂದು ಮುಂಜಾನೆ 10 ಗಂಟೆಗೆ ಸ್ಕೂಲ್ ಬಸ್ಸಿನಲ್ಲಿ ಸ್ಪಾರ್ಕ್ಲೆ
ಇಂಟರ ನ್ಯಾಷನಲ್ ಶಾಲೆಗೆ ಹೋಗಿದ್ದು ಸಾಯಂಕಾಲ 6 ಗಂಟೆಯಾದರೂ ಸಹ ಮನೆಗೆ ಬರಲಾರದಕ್ಕೆ
ಸ್ಪಾರ್ಕ್ಲೆ ಶಾಲೆಗೆ ಪೋನ ಮಾಡಿ ಕೇಳಿದ್ದು ಮತ್ತು ಸ್ಕೂಲ್ ಬಸ್ಸಿನ ಡ್ರೈವರ ರವರಿಗೆ ಪೋನ ಮಾಡಿ
ಕೇಳಿದಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಶಾಂತಿ ನಗರದ ಹನುಮಾನ ಮಂದಿರ ಹತ್ತಿರದ ಅಶೋಕ ನಗರಕ್ಕೆ
ಹೋಗುವ ದಾರಿಯ ಹತ್ತಿರ ಇಳಿಸಿರುವುದಾಗಿ ಹೇಳಿದರು. ನಂತರ ಸಾಯಂಕಾಲ 7-28 ಗಂಟೆಗೆ ಯಾವುದೂ ಒಂದು
ಅನಾಮದೇಯ ವ್ಯಕ್ತಿ ಮೋಬೈಲ್ ನಂ. 9620964079 ರಿಂದ ನನಗೆ ಪೋನ
ಮಾಡಿ ಹಿಂದಿ ಭಾಷೆಯಲ್ಲಿ ‘’ನಿರಡಿ ಪಲ್ಲವಿ ಬಿಲ್ಡಿಂರ್ಸ ಹೈ ಕ್ಯಾ
ಅಂತಾ ನನ್ನ ಹೆಸರು ವಿಳಾಸ ಕೇಳಿದದು ನಂತರ 7-35 ಪಿ.ಎಂ. ಸುಮಾರಿಗೆ ಪುನ: ಅದೇ
ನಂಬರದಿಂದ ಪೋನ ಮಾಡಿ ‘’ ತುಮಾರಾ ಬೆಟಾ ಮೇರೆ ಪಾಸ ಹೈ ಮೈ ಕ್ಯಾ
ಬೋಲತೋ ಸುನೋ 10 ಲಾಖ ರೂಪಯ್ಯಾ ದೇನಾ ಹೈ ಕಲ್ಲ ಸುಬಾಹ 10 ಬಜೆ ಪೋನ ಕರೆಂಗೆ ಬೇಟಾ ಹೊನಾ ಹೈತೋ
10 ಲಾಖ ರೂಪಯ್ಯಾ ಲೇಕೆ ಆನಾ’’ ಅಂತಾ ಹೇಳಿದಾಗ ನಾನು ಅವನಿಗೆ ನನ್ನ ಮಗನೊಂದಿಗೆ ಮಾತನಾಡಿಸೂ ಅಂತಾ
ಕೇಳಿದಾಗ ಅವರು ನಮ್ಮ ಮಾತು ಕೇಳು ಅಂತಾ ಹೇಳಿ ಪೋನ ಆಫ್ ಮಾಡಿದರು. ನಂತರ ನಾನು ಸುಮಾರು
ಸಲ ಪೋನ ಮಾಡಿದರೆ ಸ್ವೀಚ್ ಆಫ್ ಆಗಿರುತ್ತದೆ. ಕಾರಣ ಯಾರೋ ದುಷ್ಕರ್ಮಿಗಳು ನನ್ನ ಮಗನಿಗೆ
ಅಪಹರಣ ಮಾಡಿಕೊಂಡು ಒಯ್ದು 10 ಲಕ್ಷ ರುಪಾಯಿ ತಂದು ಕೊಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಮತ್ತು
ಹಣ ತಂದು ಕೊಡುವ ಸ್ಥಳವನ್ನು ನಾಳೆ ಮುಂಜಾನೆ ಹೇಳುವದಾಗಿ ಹೇಳಿರುತ್ತಾರೆ. ಆದ್ದರಿಂದ
ಅಪಹರಣವಾಗಿದ್ದ ನನ್ನ ಮಗ ನಿಶಾಂತನಿಗೆ ಪತ್ತೆ ಹಚ್ಚಿ ಅಪಹರಣ ಮಾಡಿದವರ ಮೇಲೆ ಕಾನೂನಿನ ರೀತಿಯ
ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ
ಮಹಿಳಾ ಠಾಣೆ : ಶ್ರೀಮತಿ ಗೋದಾವರಿ ಗಂಡ ಕಲ್ಯಾಣಪ್ಪಾ ಮಾಡ್ಯಾಳ ಸಾ;ಕೋಹಿನೂರ ತಾ; ಬಸವಕಲ್ಯಾಣ ಜಿ; ಬೀದರ ಇವರ ಮಗಳಾದ ಕುಮಾರಿ ಮಮತಾ ತಂದೆ ದಿ; ಕಲ್ಯಾಣಪ್ಪಾ ಇವಳು
ಸರಕಾರಿ ಮಹಿಳಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದು
ವ್ಯಾಸಾಂಗದ ಸಲುವಾಗಿ ಅವಳು ನನ್ನ ತವರು ಮನೆಯಾದ ಹಾಲ ಸುಲ್ತಾನಪೂರದಿಂದ ಗುಲಬರ್ಗಾಕ್ಕೆ
ಬಸ್ಸಿನಲ್ಲಿ ಕಾಲೇಜಿಗೆ ಬಂದು ಹೋಗಿ ಮಾಢುತ್ತಿದ್ದಳು. ಅದೇ ಕಾಲೇಜಿನಲ್ಲಿ ನನ್ನ ಅಣ್ಣನ ಮಗಳಾದ
ನಾಗವೇಣಿ ಇವಳು ಕೂಡ ದ್ವೀತಿಯ ವರ್ಷದಲ್ಲಿ ವಿದ್ಯಾಬಾಸ ಮಾಡುತ್ತಿದ್ದಾಳೆ.
ದಿನಾಂಕ 22.08.2013
ರಂದು ಬೆಳಗ್ಗೆ 7.45 ಎ.ಎಮಕ್ಕೆ ನನ್ನ ಮಗಳಾದ ಮಮತಾ ಇವಳು ಹಾಲಸುಲ್ತಾನಪೂರದಿಂದ ಕಾಲೇಜಿಗೆ
ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ ಅದೇ ದಿವಸ ನಮ್ಮ ಅಣ್ಣನ ಮಗಳಾದ ನಾಗವೇಣಿ
ಇವಳು ಮಮತಾಳನ್ನು ಕಾಣಲು ಕಾಲೇಜಿಗೆ ಹೋದಾಗ ಮಮತಾ ಇವಳು ಸಿಕ್ಕರುವದಿಲ್ಲಾ ಅಂತಾ ನನಗೆ ಮತ್ತು
ನನ್ನ ಅಣ್ಣನಾದ ಶರಣಗೌಡನಿಗೆ ಪೋನ ಮುಖಾಂತರ ವಿಷಯ ತಿಳಿಸಿದ್ದು ಆಗ ನನ್ನ ಅಣ್ಣ ಶರಣಗೌಡ ಕೂಡಲೇ
ಎಲ್ಲಾ ಕಡೆ ಮಮತಾಳನ್ನು ಹುಡುಕಿ ನೋಡಲಾಗಿ ಅವಳು ಸಿಕ್ಕಿರುವದಿಲ್ಲಾ. ಸಂಜೀವಕುಮಾರ ತಂದೆ
ಬಾಜಿರಾವ ಇತನ ಮೇಲೆ ನಮಗೆ ಸಂಶಯವಿರುತ್ತದೆ. ಅಪ್ರಾಪ್ತ ವಯಸ್ಸಿನ ಮಗಳಾದ ಮಮತಾಳನ್ನು
ಅಪಹರಿಸಿಕೊಂಡು ಹೋಗಿದ್ದು ಅವಳನ್ನು ಹುಡುಕಿಕೋಡಬೇಕು ಮತ್ತು ಅವಳ ಅಪಹರಣಕ್ಕೆ ಕಾರಣರಾದವರ ಮೇಲೆ
ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಸುಲಿಗೆ
ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಮಾರುತಿ ತಂದೆ ರೋಸಯ್ಯಾ ಪಲ್ಲಾ ಸಾ: ದುವ್ವುರ ಮಂಡಲ ಜಿ:- ಕಡಪ (ಎಪಿ) ರವರು ದಿನಾಂಕ
09-09-2013 ರಂದು ರಾತ್ರಿ 10.00 ಗಂಟೆಗೆ ಗುಜರಾತದ ಮುರುವಿಯಿಂದ ಟೈಲ್ಸ ಲೋಡ ಮಾಡಿಕೊಂಡು
ಚೆನ್ನೈಗೆ ಹೋರಟಿದ್ದು ಲಾರಿಯಲ್ಲಿ ತನ್ನ ಸಂಗಡ ಕ್ಲಿನರ್ ಶ್ರಿನಿವಾಸನು ಇದ್ದನು ನಮ್ಮ ಲಾರಿಯು
ಕರ್ನಾಟಕದಲ್ಲಿ ಚಿಂಚೋಳಿ ತಾಲೂಕಿನ ನಾಗಾಇದಲಾಯಿ ಗ್ರಾಮ ದಾಟಿ ಮುಂದುಗಡೆ ಬರುತ್ತಿದ್ದಾಗ ದಿನಾಂಕ
11-09-2013 ರಂದು 05.30 ಪಿ ಎಮ್ ಕ್ಕೆ ಬರುತ್ತಿದ್ದಾಗ ತಮ್ಮ ಲಾರಿಯ ಹಿಂದುಗಡೆಯಿಂದ ಒಂದು ಆಟೋ
ತಮ್ಮ ಲಾರಿಗೆ ಸೈಡ್ ಹೋಡೆದು ತಮ್ಮ ಲಾರಿಯ ಮುಂದುಗಡೆ ಬಂದು ನಿಂತಾಗ ನಾನು ಲಾರಿಯನ್ನು
ನಿಲ್ಲಿಸಿದೆನು ಆಟೀಒದಲ್ಲಿ 3 ಜನರು ಇದ್ದು ಅವರ ಪೈಕಿ 2 ಜನರು ಆಟೋದಿಂದ ಇಳಿದು ತನ್ನ ಹತ್ತಿರ
ಬಂದು ತನಗೆ ಕೈ ಮುಷ್ಟಿ ಮಾಡಿ ಹೋಡೆದರು ಆಗ ನಾನು ಅವರಿಗೆ ಹೆದರಿಕೊಂಡು 1000 ರೂಪಾಯಿಗಳನ್ನು
ಕೋಟ್ಟೆನು ಆಗ ಅವರು ತನಗೆ ಹೆದರಿಸಿ ತನ್ನ ಜೆಬಿನಲ್ಲಿದ್ದ 4000 ಸಾವಿರ ರೂಪಾಯಿ, ಒಂದು ನೋಕಿಯಾ ಮೋಬೈಯಲ್ ಕಸಿದುಕೊಂಡರು.
ನಂತರ ಅಲ್ಲಿಂದ ತಾವು ಬಂದ ದಾರಿಗೆ ಹಿಂತಿರುಗಿ ಹೋದರು .ಆಗ ಅಲ್ಲಿ ಎದರುಗಡೆಯಿಂದ ಬಂದು ಒಂದು ಆಟೋ ಬಂದಿತ್ತು ಸದರರ ಆಟೋದಲ್ಲಿದವನು ಘಟನೇ
ನೋಡಿರುತ್ತಾನೆ . ಸದರಿಯವರು ತನಗೆ ಹೆದರಿಸಿ ಬೆದರಿಸಿ ತನ್ನ ಹತ್ತಿರವಿದ್ದು 5000 ಸಾವಿರ
ರೂಪಾಯಿ ಒಂದು ನೋಕಿಯಞಾ ಹ್ತಾಂಡಸೆಟ್ ನ್ನು ದೋಚಿಕೊಂಡು ಹೋಡೆಬಡಿ ಮಾಡಿದ್ದು ಅವರ ವಿರುದ್ದ
ಕಾನೂನು ಪ್ರಕಾರ ಕ್ರಮಕೈಗೋಳ್ಳಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 12-09-2013 ರಂದು ಮದ್ಯಾಹ್ನ 13-30 ಗಂಟೆ
ಸುಮಾರಿಗೆ ಅಂಬು ತಂದೆ ರಾಮಚಂದ್ರಪ್ಪ ಸೋನಾಯಿ ಸಾ : ಡೊಂಗರಗಾಂವ ತಾ:ಜಿ: ಗುಲಬರ್ಗಾ ಇವನು ತಮ್ಮ ಹೋಲಕ್ಕೆ ಹೋಗುವಾಗ
ಕಾಲದಾರಿಯಲ್ಲಿ
ಕಲ್ಲಿನ ಗೋಡೆ ದಾಟುತ್ತಿರುವಾಗ ಕಲ್ಲಿನ ಸಂದಿಯಲ್ಲಿ ಇಟ್ಟು ಗೋಡೆ ಎರುತ್ತಿರುವಾಗ ಗೋಡೆಯಲ್ಲಿರುವ
ಹಾವು ಕೈಯಿಗೆ ಕಚ್ಚಿದ ಪ್ರಯುಕ್ತ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸುಬ್ಬಮ್ಮ ಗಂಡ
ರಾಮಚಂದ್ರಪ್ಪ ಸೋನಾಯಿ ಸಾ; ಡೊಂಗರಗಾಂವ ತಾಃಜಿಃ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮೃತ
ನಾನಾಚಂದ ಸಿಂದೇ ಮತ್ತು ಗಾಯಾಳು ಹೀರು ತಂದೆ ರಾಮು ರಾಠೋಡ ಇಬ್ಬರು ಕೂಡಿ ನಾನಾಚಂದನ ಮೋಟಾರ ಸೈಕಲ
ನಂ ಕೆ.ಎ-32 ಆರ್-6934 ನೇದ್ದರ ಮೇಲೆ ಗುಲಬರ್ಗಾದಿಂದ ಸ್ಟೇಶನ ಗಾಣಗಾಪುರಕ್ಕೆ ಹೋಗಬೇಕೆಂದು
ಕೇರಿ ಭೋಸಗಾ ಕ್ರಾಸನ ಹತ್ತಿರ ರೋಡಿನ ಮೇಲೆ ಹೋಗುವಾಗ ಅದೇ ವೇಳೆಗೆ ಆಳಂದ ರೋಡ ಕಡೆಯಿಂದ ಕ್ರೋಜರ
ನಂ ಕೆ.ಎ-32 ಎಂ-5594 ನೇದ್ದರ ಚಾಲಕನು ಅತೀವೇಗದಿಂದ ಮತ್ತು ನಿರ್ಲಜನತದಿಂದ ನಡೆಸಿಕೊಂಡು ಬಂದು
ಮೋಟಾರ ಸೈಕಲ್ ನಂ.ಕೆ.ಎ.32 ಆರ್.6934 ನೆದ್ದಕ್ಕೆ ಡಿಕ್ಕಿ ಹೊಡೆದಿದ್ದು ಸದರಿ ಮೋಟಾರ ಸೈಕಲ್
ಸವಾರ ನಾನಾಚಂದ ತಂದೆ ಲಕ್ಷ್ಮಣ ಸಿಂಧೆ ಸಾ;ಸ್ಟೇಶನ
ಗಾಣಗಾಪೂರ ತಾ;ಅಫಜಲಪೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು
ಮತ್ತು ಆತನ ಹಿಂದೆ ಕುಳಿತಿದ್ದ ಹೀರೂ ತಂದೆ ರಾಮು
ರಾಠೋಡ ಸಾ;ಗುಡೂರ ತಾಂಡಾ ತಾ:ಅಫಜಲಪೂರ ಇತನಿಗೆ ತಲೆಗೆ , ಬಲಗಾಲಿಗೆ ಭಾರಿ ರಕ್ತಗಾಗಿದ್ದು
ಇರುತ್ತದೆ. ಸದರಿ ಕ್ರೋಜರ ಚಾಲಕ ವಾಹವನನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಕಾರಣ ಸದರಿ
ಕ್ರೋಜರ ನಂ.ಕೆ.ಎ.32 ಎಂ.5594 ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಮಾಹಾದೇವ ತಂದೆ ಲಕ್ಷ್ಮಣ ಸಿಂಧೇ ಸಾ : ಸ್ಟೇಷನ ಗಾಣಗಾಪೂರ ಭ್ಆಗ್ಯವಂತಿ ನಗರ ಗುಲಬರ್ಗಾ
ರವರು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಗ್ರಾಮೀಣ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment