ಜಾತಿ
ನಿಂದನೆ ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀಮತಿ ಕಾವೇರಿ ಗಂಡ ಪ್ರಕಾಶ ದೊಡಮನಿ ಸಾ|| ನಿಂಬರ್ಗಾ ಇವರು ದಿನಾಂಕ 14-09-2013 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಅಡುಗೆ ಸಹಾಯಕಿಯಾದ ಶ್ರೀಮತಿ ನಜೀರಮಾ ಗಂಡ ಲಕ್ಷ್ಮಣ
ಕರನಾಳಕರ ಮತ್ತು ಆಕೆಯ ಗಂಡ ಲಕ್ಷ್ಮಣ ಕರನಾಳಕರ ಸಾ|| ದಂಗಾಪೂರ
ಇವರು ಅಂಗನವಾಡಿ ಕೇಂದ್ರದ ಬಾಗಿಲಿನ ಕೀಲಿ ತೆರೆದು ಯಾರೋ ಒಬ್ಬರಿಗೆ ಕೇಂದ್ರದಲ್ಲಿರುವ
ಆಹಾರ ಧಾನ್ಯಗಳನ್ನು ಕಳುವಿನಿಂದ ತ್ರಿಚರ್ಕ ವಾಹನದಲ್ಲಿ ಮಾರಾಟ ಮಾಡಿರುತ್ತಾರೆ, ದಂಗಾಪೂರ
ಗ್ರಾಮದ ನಿವಾಸಿಗಳು ಇದನ್ನು ನಿಲ್ಲಿಸಿರುತ್ತಾರೆ. ನಜಿರಮಾ
ಮತ್ತು ಆಕೆಯ ಗಂಡ ಲಕ್ಷ್ಮಣ ಇವರು ನಾನು ದಲಿತ ಕಾರ್ಯಕರ್ತೆಯಾಗಿದ್ದ ಕಾರಣ ಜಾತಿ ನಿಂದನೆ ಮಾಡಿ
ಕಳ್ಳತನ ಆಪಾದನೆಯನ್ನು ನನ್ನ ಮೇಲೆ ಹಾಕಬೇಕೆಂದು ನಾನು ಕೇಳಿದರೆ ಜಾತಿ ನಿಂದನೆ ಮಾಡಿ
ಬೈದಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಗೃಹಣಿಗೆ
ಕಿರುಕಳ ನೀಡಿದ ಪ್ರಕರಣ :
ಜೇವರ್ಗಿ
ಠಾಣೆ : ಶ್ರೀಮತಿ ಶಂಕ್ರೇಮ್ಮ ಪೂಜಾರಿ ಸಾ: ಬಣಮಿ ಇವಳು ಠಾಣೆಗೆ ಹಾಜರಾಗಿ
ದೂರು ಅರ್ಜಿ ಹಾಜರ ಪಡೆಸಿದ್ದು ಅದರ ಸಾರಂಶವೆನೆಂದರೇ ನನಗೆ ಸುಮಾರು 4 ವರ್ಷಗಳ ಹಿಂದೆ ಬಣಮಿ
ಗ್ರಾಮದ ನಿಂಗರಾಜ ಪೂಜಾರಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನಗೆ ಇನ್ನೂ ಮಕ್ಕಳು
ಆಗಿರುವುದಿಲ್ಲ ಮದುವೆಯಾಗಿ 2-3 ವರ್ಷಗಳ ವರೆಗೆ ಗಂಡನ ಮನೆಯಲ್ಲಿ ಅನೊನ್ಯವಾಗಿ ಇದ್ದೆನು ತದನಂತರ
ನನ್ನ ಗಂಡ ನಿಂಗರಾಜ ಮಾವ.ಕಲ್ಲಪ್ಪ ಅತ್ತೆ ಮಹಾದೇವಿ ಮೈದುನ ಅಶೋಕ ಮತ್ತು ನಮ್ಮ ಅತ್ತೆಯ ತಮ್ಮ
ಈರಣ್ಣಗೌಡ ತಂದೆ ಅಮೋಗಿ ಇವರೆಲ್ಲರೂ ಕೂಡಿ ರಂಡಿ ನೀನು ಸರಿಯಾಗಿಲ್ಲ ಅಂತ ಬೈದಾಡುತ್ತಾ ಬಂದಿದ್ದು
ಅಲ್ಲದೇ ನನ್ನ ಅತ್ತೆ-ಮಾವ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಲ್ಲದೇ ನಮಗೆ 3,00,000/- ಸಾಲ ಆಗಿರುತ್ತದೆ ತವರು ಮನೆಯಿಂದ
ತಗೆದುಕೊಂಡು ಬಾ ಅಂತ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು ಈ ವಿಷಯದಲ್ಲಿ
ಸುಮಾರು ಸಲ ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿದರು ಕೂಡಾ ಅವರು ಹಾಗೆ ಮಾನಸಿಕ ಮತ್ತು ದೈಹಿಕ
ಕಿರುಕುಳ ಕೊಡುತ್ತಾ ಬಂದಿರುತ್ತಾರೆ ನಿನ್ನೆ ದಿನಾಂಕ 14-09-2013 ರಂದು ನನ್ನ ತಂದೆ ನನಗೆ
ಮಾತಾಡಿಸುವ ಸಲುವಾಗಿ ನಮ್ಮೂರಿಗೆ ಬಂದಿದ್ದರು. ನಾನು ಮತ್ತು ನನ್ನ ತಂದೆ ಬಮ್ಮರಾಯ ಇಬ್ಬರೂ ನಮ್ಮ
ಮನೆಯಲ್ಲಿ ಮಾತನಾಡುತ್ತಾ ಕುಳಿತುಕೊಂಡಾಗ ಸಾಯಂಕಾಲ 6-00 ಸುಮಾರಿಗೆ ನನ್ನ ಗಂಡ ನಿಂಗರಾಜ ಮಾವ
ಕಲ್ಲಪ್ಪ ಅತ್ತೆ ಮಹಾದೇವಿ ಮೈದುನಾ ಅಶೋಕ ಹಾಗೂ ಈರಣ್ಣಗೌಡ ಇವರೆಲ್ಲರೂ ಕೂಡಿ ರಂಡಿ ನಿನಗೆ ಎಷ್ಟ
ಸಾರಿ ಹೇಳಿದರು 3 ಲಕ್ಷ ರೂಪಾಯಿ ತೆಗೆದುಕೊಂಡು ಬರುತ್ತಿಲ್ಲ ಹಣ ತಗೆದುಕೊಂಡು ಬಂದರೇ ಈ
ಮನೆಯಲ್ಲಿ ಇರು ಅಂತ ನನಗೆ ನನ್ನ ಗಂಡನು ಕೈಹಿಡಿದ್ದು ಹೋರಗೆ ಹಾಕುತ್ತಿದ್ದಾಗ ನಾನು ಯಾಕೇ
ಅಂದಿದಕ್ಕೆ ರಂಡಿ ನನಗೆ ಎದುರು ಮಾತನಾಡುತ್ತಿ ಅಂತ ಹೊಡೆಯಲು ಮೈ ಮೇಲೆ ಬಂದ ತಕ್ಷಣ ಅಂಚಿ
ಓಡುತ್ತಿದ್ದ ನನಗೆ ನನ್ನ ಮೈದುನ ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದಾಗ ನನ್ನ ಗಂಡನ್ನು
ಕೈಯಿಂದ ಕಪಾಳದ ಮೇಲೆ ಹೊಡೆದನು ಅತ್ತೆ ಇವಳು ಕೂದಲು ಹಿಡಿದ್ದು ಕೈಯಿಂದ ಬೆನ್ನ ಮೇಲೆ ಹೊಡೆದರು
ಮಾವ ಮತ್ತು ಈರಣ್ಣಗೌಡ ಇಬ್ಬರೂ ಈ ರಂಡಿಗೆ ಹೊಡೆಯಿರಿ ಅಂತ ಬೈದರು ನಾನು ಚಿರಾಡುವ ಬಾಯಿ
ಸಪ್ಪಳ ಕೇಳಿ ಓಣಿಯ ಪಾರ್ವತಿ,ಮಹಾಂತಗೌಡ, ಹಾಗೂ ನನ್ನ ತಂದೆ ಜಗಳ ಬಿಡಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment