ಜಾತಿ ನಿಂದನೆ
ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ರವಿ ತಂದೆ ಕಿಶನ ಆಡೆ ಜಾ|| ಲಂಬಾಣಿ, ಉ|| ಮಿನಿ ಲಾರಿ ಚಾಲಕ, ಸಾ|| ನಿಂಬರ್ಗಾ ತಾಂಡಾ, ತಾ|| ಆಳಂದ ರವರು ದಿನಾಂಕ 11-09-2013 ರಂದು
ಮಧ್ಯಾಹ್ನ 02.30 ಪಿ.ಎಮ ಸುಮಾರಿಗೆ ದೇವಿಂದ್ರಪ್ಪಾ ತಂದೆ ಶಂಕ್ರೆಪ್ಪಾ ನಾಗೂರೆ ಸಾ|| ನಿಂಬರ್ಗಾ
ಇವರ ಕಿರಾಣಿ ಅಂಗಡಿಗೆ ಸಕ್ಕರೆ ಬೇಕಾಗಿದ್ದರಿಂದ ಅವರ ಮಿನಿ ಲಾರಿ ನಂ. ಕೆ.ಎ 32, ಎ9393 ನೇದ್ದನ್ನು ತೆಗೆದುಕೊಂಡು
ನಿಂಬರ್ಗಾದಿಂದ ಭೂಸನೂರ ಸಕ್ಕರೆ ಕಾರ್ಖಾನೆಗೆ ಹೋಗಿ ಅಲ್ಲಿಯ ಸಕ್ಕರೆ ಗೋದಾಮ ಹತ್ತಿರ ನಿಲ್ಲಿಸಿದ್ದು
ಆಗ ಗೋದಾಮಿನ ನೌಕರರು ಮಿನಿ ಲಾರಿಯಲ್ಲಿ ಸಕ್ಕರೆ ಲೋಡ ಮಾಡಿದರು, ಆಗ
ಸಕ್ಕರೆ ಸರಬರಾಜು ಮಾಡುತ್ತಿದ್ದ ಕ್ಲರ್ಕನಾದ ಶ್ರೀಕಾಂತ ತಂದೆ ಅಣ್ಣಾರಾವ ಪಾಟೀಲ ಸಾ|| ಕೊರಳ್ಳಿ
ಇವರು ಇಲ್ಲಿ ಒಂದು ಸಹಿ ಮಾಡು ಅಂತ ಅಂದಿದ್ದಕ್ಕೆ ಸದರಿ ಶ್ರೀಕಾಂತ ಪಾಟೀಲ
ಇವರಿಗೆ ಪೆನ್ನು ಕೊಡಿರಿ ಅಂತ ಅಂದೆನು, ಅದಕ್ಕೆ ಶ್ರೀಕಾಂತ ಇವರು ಫಿರ್ಯಾದಿಗೆ ಏ ಭೋಸಡಿ ಮಗನೆ
ನನಗೆ ಪೆನ್ನು ಕೇಳುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಖುರ್ಚಿಯ ಮೇಲಿಂದ ಎದ್ದು ನಿಂತರು ಆಗ
ಫಿರ್ಯಾದಿಯು ಪೆನ್ನು ಕೊಡದಿದ್ದರೆ ಬಿಡರಿ ಆದರೆ ಅವಾಚ್ಯ ಶಬ್ದಗಳಿಂದ ಬೈಯ್ಯಬೇಡರಿ ಅಂತ
ಅಂದೇನು, ಆಗ ಅಲ್ಲಿಯೇ ಇದ್ದ ಫ್ಯಾಕ್ಟರಿಯ ಒಬ್ಬ ಸಿಬ್ಬಂಧಿ ಫಿರ್ಯಾದಿಗೆ ಹೊರಗೆ
ಕಳಿಸಿದೆನು ಹೋಗುವಾಗ ಶ್ರೀಕಾಂತ ಪಾಟೀಲ ಇವರು ಖುರ್ಚಿಯ ಮೇಲಿಂದ ಎದ್ದು ಗೋದಾಮ ಆಫೀಸಿನ
ಮುಂದುಗಡೆ ಬಂದು ಅಲ್ಲಿಯೇ ಬಿದ್ದಿದ್ದ ಒಂದು ಕಬ್ಬಿಣದ ಪಟ್ಟಿಯನ್ನು ತೆಗೆದುಕೊಂಡು ನನಗೆ ಏ ಸೂಳೆ
ಮಗನೆ ಲಮಾಣ್ಯಾ ಅಂತಾ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಭೈದು ತಡೆದು ನಿಲ್ಲಿಸಿ ತನ್ನ ಕೈಯಲ್ಲಿದ್ದ ಕಬ್ಬಿಣದ
ಪಟ್ಟಿಯಿಂದ ತಲೆಯ ಎಡಭಾಗಕ್ಕೆ ಹೋಡೆದು ಭಾರಿ ರಕ್ತಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ವೈಜಂತಾ
ಗಂಡ ಪಾಂಡುರಂಗ ನವಲೆ ಸಾ; ವಾರ್ಡ ನಂ. 4 ಕಮಲಾಪೂರ ಗ್ರಾಮ ತಾ; ಜಿ;ಗುಲಬರ್ಗಾ ರವರು ತನ್ನ
ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ 1. ಶಾಭೋದ್ದಿನ ತಂದೆ ಕರೀಮ ಬೋರಾಳೆ 2. ಸಾಹೇಬಿ ಗಂಡ
ಶಾಭೋದ್ದಿನ ಬೋರಾಳೆ ಸಾಃ ಇಬ್ಬರು ಓಕಳಿ ಫಿರ್ಯಾದಿ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ, ಈ ಹೊಲ ನಮ್ಮದು ಇದೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು
ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದ್ದು ಅಲ್ಲದೇ ಫಿರ್ಯಾದಿಯ ಮಾನಭಂಗ ಮಾಡಲು ಪ್ರತ್ನಿಸಿ, ಸೀರೆ ಹಿಡಿದು ಎಳೆದಾಡಿ ಅಪಮಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಕಾಂತ ತಂದೆ ಅಣ್ಣಾರಾವ ಪಾಟೀಲ ಉ|| ಎನ.ಎಸ್.ಎಲ
ಸುಗರ ಫ್ಯಾಕ್ಟರಿ ಭೂಸನೂರದಲ್ಲಿ ಕ್ಲರ್ಕ, ಸಾ|| ಕೊರಳ್ಳಿ, ತಾ|| ಆಳಂದ ರವರು ದಿನಾಂಕ 11-09-2013 ರಂದು 1815 ಗಂಟೆ
ಸುಮಾರಿಗೆ ಎನ.ಎಸ್.ಎಲ ಸಕ್ಕರೆ ಕಾರ್ಖಾನೆ ಭೂಸನೂರದಲ್ಲಿ ಕೆಲಸದ ಮೇಲಿದ್ದಾಗ ರವಿ ತಂದೆ ಕಿಶನ
ರಾಠೋಡ ಸಾ|| ನಿಂಬರ್ಗಾ ಇತನು ಬಂದು ತಾನು
ಸಕ್ಕರೆ ತುಂಬಿಕೊಂಡು ಹೋಗುತ್ತಿದ್ದಾಗ ರಸೀದಿ ಕೊಡು ಅಂತ ಕೇಳಿದಾಗ ಫಿರ್ಯಾದಿಯು ಚೆಕ ಮಾಡಿ ಕೊಡುತ್ತೇನೆ
ಕೂಡು ಅಂತ ಅಂದರು, ಚೆಕ ಮಾಡುತ್ತಿದ್ದಾಗ ಭೋಸಡಿಕೆ ಏನು ಚೆಕ ಮಾಡತ್ತೀ ಅನ್ನುತ್ತಾ
ಅವಾಚ್ಯ ಶಬ್ದಗಳಿಂದ ಬೈದು ಬೇಗನೆ ರಸೀದಿ ಕೊಡು ಅಂತಾ ಅಂದು, ನಂತರ ರವಿ ಇತನು ನನಗೆ ಸಹಿ ಮಾಡಲು ಪೆನ್ನು ಕೊಡು ಅಂತ
ಕೇಳಿದಾಗ ಫಿರ್ಯಾದಿಯು ನಾನು ಬರೆಯುತ್ತಿದ್ದೇನೆ ಪೆನ್ನು ಕೊಡುವದಿಲ್ಲ ಹೊರಗೆ ನಡೆ ಅಂತ ಅಂದೆನು
ಆಗ ರವಿ ಇತನು ನನಗೆ ಹೊರಗೆ ಕಳಿಸುತ್ತಿ ರಂಡಿ ಮಗನೆ ಅಂತಾ ಅಂದವನೆ ಹೊರಗೆ ಹೋಗಿ ರಾಡು
ತೆಗೆದುಕೊಂಡು ಬಂದು ನಿನಗೆ ಇವತ್ತು ಖಲಾಸ ಮಾಡುತ್ತೇನೆ ಅಂತ ರಾಡಿನಿಂದ ತೆಲೆಯ ಮೇಲೆ ಹೊಡೆದು ಭಾರಿ
ರಕ್ತಗಾಯಪಡಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ವನಪಾಲ ಪಿಸಿ
62 ರವರು ಮಾನ್ಯ ಜೇ.,ಎಮ್.ಎಫ.ಸಿ ನ್ಯಾಯಲಯ ಜೇವರ್ಗಿಯಿಂದ ಪ್ರವೈಟ ಕಂಪ್ಲೇಟ
ನಂಬರ 11/13 ನೇದ್ದು ತಂದು ಹಾಜರ ಪಡಿಸಿದ್ದರ ಸಾರಂಶವೆನೆಂದರೆ. 30/07/2013 ರಂದು
ಪಿರ್ಯಾದಿದಾರ ದೇಸಾಯಿ ಇತನಿಗೆ ಮನೆಯ ಮುಂದಿನ ಕಲ್ಲು ತೆಗೆಯುವ ವಿಷಯದಲ್ಲಿ ಅರೋಪಿತರೂ ಎಲ್ಲಾರೂ
ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ
ಹಾಕಿರುತ್ತಾರೆ ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಇತ್ಯಾದಿ
ನ್ಯಾಯಾಲಯದ ಅಧೇಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ
11-09-2013 ರಂದು ಶ್ರೀಮತಿ ಲಾಲಬಿ ಮಹಿಳಾ ಪಿ.ಎಸ್.ಐ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ
ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದೇನೆಂದರೆ ಮರುಳಾಧ್ಯ ತಂದೆ ಬಸವಣಯ್ಯಾ
ಕಳ್ಳಿಮಠ ಕೆ.ಎಸ್.ಆರ್.ಟಿ.ಸಿ. ನಿರ್ವಾಹಕ ಸಾ: ಬಿದ್ದಾಪೂರ ಕಾಲೂನಿ ಇವನು ಮೂಲತ: ಲಿಂಗಾಯತ ಜಂಗಮ ಜಾತಿಯವನಿದ್ದು
ದಿನಾಂಕ 23-09-1986 ರಂದು ಮಾಹಾನಗರ ಪಾಲಿಕೆ ಗುಲಬರ್ಗಾ ದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ
ಪತ್ರವನ್ನು ಪಡೆದುಕೊಂಡಂತೆ ತಾವೆ ಸೃಷ್ಟಿಸಿ ಅದರ ಆಧಾರದ ಮೇಲೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕ ಹುದ್ದೆಯನ್ನು ಪಡೆಯಲು ಪ್ರಯತ್ಇಸಿ
ನಿಜವಾದ ಪರಿಶಿಷ್ಟ ಜಾತೀಯ ಜನಾಂಗದವರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಲು ಪ್ರಯತ್ನಿಸಿರುವುದು ವಿಚಾರಣೆಯಿಂದ ಸಾಬಿತಾಗಿರುವುದರಿಂದ ಸದರಿಯವರ ವಿರುದ್ಧ
ಕಾನೂನಿನ ಪ್ರಕಾರ ಪ್ರಕರಣ ಕೈಕೊಳ್ಳಬೇಕೆಂದು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಬ್ರಹ್ಮಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment