Police Bhavan Kalaburagi

Police Bhavan Kalaburagi

Monday, September 30, 2013

Gulbarga District Reported Crimes

ಅನಧೀಕೃತ ಸಿಮೇ ಎಣ್ಣೆ ಸಾಗಿಸುತ್ತಿದ್ದವರ ಬಂಧನ :
ಗ್ರಾಮೀಣ ಠಾಣೆ : ಡಾ; ರಾಮ.ಎಲ್. ಅರಸಿದ್ದಿ  ಡಿ.ಎಸ್.ಪಿ.ಪ್ರೋಬೆಶನರಿ  ಪಿ.ಎಸ್.ಐ. (ಕಾ&ಸೂ) ನಾನು ಠಾಣೆಯಲ್ಲಿರುವಾಗ ಹುಮನಾಬಾದ ರಿಂಗರೋಡಗೆ ಒಂದು ಗೂಡ್ಸ ಆಟೋದಲ್ಲಿ ಅನಧಿಕೃತವಾಗಿ ಯಾವುದೇ ದಾಖಲಾತಿಗಳನ್ನು ಇಲ್ಲದೆ ಗೃಹ ಬಳಕೆಯ ಸೀಮೆ ಎಣ್ಣಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಇಬ್ಬರು ಪಂಚಜನರು ಹಾಗು ಸಿಬ್ಬಂದಿ ಜನರೊಂದಿಗೆ ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ , ಮಾನ್ಯ ಅಪರ ಎಸ್.ಪಿ.ಸಾಹೇಬ ಗುಲಬರ್ಗಾ,ಮಾನ್ಯ .ಎಸ್.ಪಿ .ಸಾಹೇಬ ಗ್ರಾಮೀಣ ಉಪವಿಭಾಗ ಗುಲಬರ್ಗಾ ಹಾಗೂ ಸಿಪಿಐ. ಗ್ರಾಮಿಣ ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗರೋಡ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿದ್ದು ಆಗ ರಾಮನಗರ ಕಡೆಯಿಂದ ಒಂದು  ಗೂಡ್ಸ ಆಟೋ ಟ್ರ್ಯಾಲಿ ಬರಲು ಕೈಮಾಡಿ ನಿಲ್ಲಿಸಿದು, ಅದರಲ್ಲಿ ಮೂರು ಜನರು ಇದ್ದು ಮತ್ತು ಟ್ರ್ಯಾಲಿಯಲ್ಲಿ ಆರು ಬ್ಯಾರಲಗಳು ಇದ್ದು ಅವುಗಳನ್ನು ಪರೀಶಿಲಿಸಲು ಗೃಹ ಬಳಕೆ ಸೀಮೆ ಎಣ್ಣಿ ಇದ್ದು ,ಆದರಲ್ಲಿ ಇದ್ದ ಮೂರು ಜನರನ್ನು ವಿಚಾರಿಸಲು ತಮ್ಮ ಹೆಸರು 1)ಬಸವರಾಜ ತಂದೆ ನಾಗೀಂದ್ರಪ್ಪಾ ಬಬಲಾದ ಸಾ;ಬಬಲಾದ ತಾ;ಆಳಂದ ಜಿ;ಗುಲಬರ್ಗಾ, 2)ಅಂಬರಾಯ ತಂದೆ ಕುಪೇಂದ್ರ ಮೇಕ್ರೆ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ.3) ಮಲ್ಲಿಕಾರ್ಜುನತಂದೆ ಗಂಗಾಧರ ಮಠಪತಿ ಸಾ;ಬೆಳಮಗಿ ತಾ;ಆಳಂದ ಜಿ;ಗುಲಬರ್ಗಾ. ಹಾವ; ಗಾಂಧಿ ನಗರ ಗುಲಬರ್ಗಾ ಅಂತಾ ಹೇಳಿದ್ದು ಪ್ರೋಬೆಶನರಿ ಡಿ.ಎಸ್.ಪಿ. ಸಾಹೇಬರು ಅವರನ್ನು ವಿಚಾರಿಸಲು ಸೀಮೆ ಎಣ್ಣಿ ಎಲ್ಲಿನದು ಮತ್ತು ಕಾಗದ ಪತ್ರಗಳು ಹಾಗೂ ಲೈಸನ್ಸ ವಗೈರೆ ವಿಚಾರಿಸಲು ಯಾವುದೆ ಲೈಸನ್ಸ ಪರವಾನಿಗೆ , ಹಾಗೂ ಅದರ ಕಾಗದ ಪತ್ರಗಳು  ಇರುವದಿಲ್ಲಾ  ಅಂತಾ ಹೇಳಿದ್ದು  ಆಟೋ ಟ್ರ್ಯಾಲಿಯಲ್ಲಿ ಚಕ್ಕ ಮಾಡಲಾಗಿ ಸುಮಾರು 1100 ಲೀಟರ ಸಿಮೇ ಎಣ್ಣೆ ತುಂಬಿದ 6 ಬ್ಯಾರಲ್ಲಗಳಿದ್ದು ಅ.ಕಿ. 76,655/- ರೂ ಬೆಲೆಬಾಳುವುದನ್ನು ಜಪ್ತಿಪಡಿಸಿಕೊಂಡು ನಂತರ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ.  
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ. ಶಿವಶೇಖರ ತಂದೆ ಲಿಂಗಣ್ಣ ಪಡಶೇಟ್ಟಿ ಸಾಃ ಜಯ ನಗರ ಗುಲಬರ್ಗಾ ಇವರು ದಿನಾಂಕಃ 28-09-2013 ರಂದು ಮದ್ಯಾನ 02:30 ಪಿ.ಎಂ ಸೂಮಾರಿಗೆ ಮನೆಗೆ ಬಂದು ನನ್ನ ಬಟ್ಟೆ ತೆಗೆದು ಎಂಟ್ರನ್ಸ ರೂಮಿನಲ್ಲಿ ಸಿಗಿಸಿ ಮನೆಯಲ್ಲಿ ಹೋಗಿ ಉಟ ಮಾಡಿ 03:30 ಪಿ.ಎಂ ಸೂಮಾರಿಗೆ ಫ್ರೇಶ್ ಆಗಿ ಪ್ಯಾಂಟ ಉಟ್ಟಿಕೊಳ್ಳಲು ಬಂದಾಗ ನನ್ನ ಪ್ಯಾಂಟ ಜೇಬಿನಲ್ಲಿದ್ದ 1,10,000/-ರೂ ಇರಲಿಲ್ಲಾ ಸದರ ಹಣವನ್ನು ಇಂದು ದಿನಾಂಕ: 28-09-2013 ರ 02:30 ಪಿ.ಎಂ ದಿಂದ 03:30 ಪಿ.ಎಂ ಅವಧೀಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಡಿಪ್ಲೋಮಾ ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶರಣು ತಂದೆ ಚಂದ್ರಶೇಖರ ಪಟ್ಟಣಕರ ಸಾ: ಮನೆ ನಂ 1-929/10/3 ಬುದ್ಧನಗರ ಗುಲಬರ್ಗಾ ಇವರ ತಂಗಿಯಾದ ಸುರೇಖಾ ತಂದೆ ಚಂದ್ರಶೇಖರ ವಯಾ : 19 ವರ್ಷ ಡಿಪ್ಲೋಮಾ ಎಲೆಕ್ಟಾನಿಕ್ಸ ಎರಡನೆ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದು ಈಕೆಯು ದಿನಾಂಕ 28-09-2013 ರಂದು ಬೆಳಗ್ಗೆ ಕಾಲೇಜಿಗೆ ಹೊಗುತ್ತೆನೆಂದು ಹೇಳಿ ಹೋದವಳು ರಾತ್ರಿ 8 ಗಂಟೆಯಾದರು ಮನೆಗೆ ಬಾರದೆ ಇದ್ದುದರಿಂದ ಎಲ್ಲಕಡೆ, ಸಂಬಂಧಿಕರ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಅಮೃತ ತಂದೆ ಭೀಮರಾಯ ಬಜಂತ್ರಿ ಇತರು   ದಿನಾಂಕ 29-09-13 ರಂದು ಸಾಯಂಕಾಲ 4-45 ಗಂಟೆಗೆ ಮೋಟರ ಸೈಕಲ ಮೇಲೆ ತನ್ನ ಹೆಂಡತಿ ಮತ್ತು ಸೊಸೆ ಇವರನ್ನು ಕೂಡಿಸಿಕೊಂಡು ಹೋಗುತ್ತಿದ್ದಾಗ ಮೋಟರಸೈಕಲ ನಂ ಕೆ.ಎ-32 ಇಸಿ-3877 ನೇದ್ದರ ಚಾಲಕ ಶಿವುಕುಮಾರ ಇತನು ಮೋಟರಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಂದು ಕಾರಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಮೋಟರಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಹೆಂಡತಿ ಮುತ್ತಮ್ಮ ಮತ್ತು ಸೊಸೆ ರೂಪಾ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.  ಪೆಟ್ಟುಗಳು ಆಗಿರುತ್ತೇವೆ ಕಾರಣ ಮೋಟರಸೈಕಲ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಇತ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/13 ಕಲಂ 279,337,ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡೇನು.
ಮಾಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ ; ಶ್ರೀಮತಿ ಜ್ಯೋತಿ ಗಂಡ ಶರಣಬಸವ ಮಾಲಿ ಪಾಟೀಲ ಸಾ : ಪ್ಲಾಟ ನಂ. 47-48 ವರ್ಧನ ನಗರ ಉದನೂರ ರೋಡ ಗುಲಬರ್ಗಾ ರವರು ದಿನಾಂಕ 29-09-2013 ರಂದು ಸಾಯಂಕಾಲ ತಮ್ಮ ನೆಗಣಿ ಹೇಮಾವತಿ ಆನಂದ ರೆಡ್ಡಿ ಇಬ್ಬರು ಕೂಡಿ ಸನ್ ಇಂಟರ ನ್ಯಾಶನಲ್ ಪಕ್ಕದ ಮೋರ್ ಮಾಲ್ ಕ್ಕೆ ಕಿರಣಾ ಮತ್ತು ತರಕಾರಿ ಖರೀದಿ ಮಾಡಲು ಹೋಗುತ್ತಿರುವಾಗ ಮೋರ್ ಮಾಲ್ ಎದುರುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಸವಾರರು ಬಂದವರೇ ನನ್ನ ಕೊರಳಲ್ಲಿ ಕೈ ಹಾಕಿ  ಎರಡು ತೊಲೆ ಬಂಗಾರದ ಕರಿಮಣಿವುಳ್ಳ ಮಂಗಳಸೂತ್ರ ಸರ ಕಿತ್ತುಕೊಂಡು ಹೋಗಿರುತ್ತಾರೆ.  ಅದರ ಕಿಮ್ಮತ್ತು 50,000/- ರೂ. ಇರುತ್ತದೆ. ಆ ಮೋಟಾರ ಸೈಕಲ ಸವಾರರು ಅಂದಾಜು 20-25 ವಯಸ್ಸಿನವರಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: