ಕಳವು ಪ್ರಕರಣಗಳು
:
ಎಮ್. ಬಿ ನಗರ ಠಾಣೆ : ಶ್ರೀಮತಿ.
ವಿಮಲಾದೇವಿ ಗಂಡ ದಿ.ಸಿದ್ದಣ್ಣ ಮೇಳಕುಂದಿ ಸಾಃ ಮನೆ ನಂ.4-601/72/ಎಫ್/5, ಶ್ರೀ ಓಂ ಪ್ರಕಾಶ
ಇವರ ಮನೆಯಲ್ಲಿ ಬಾಡಿಗೆ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ದಿನಾಂಕ 24/08/2013 ರಂದು ರಾತ್ರಿ 10-00 ಪಿ.ಎಂಕ್ಕೆ ಮನೆಗೆ ಬೀಗ ಹಾಕಿ ಮನೆಯ
ಮಾಲಿಕರಾದ ಓಂ ಪ್ರಕಾಶ ಇವರಿಗೆ ಮನೆಕಡೆ ನಿಗಾ ಇಡಲು ಹೇಳಿ ತನ್ನ ಮಗ, ಸೋಸೆ ಹಾಗೂ
ಮೊಮ್ಮಕ್ಕಳಿಗೆ ಮಾತನಾಡಿ ಬರುತ್ತೆನೆ ಅಂತಾ ಹೇಳಿ ಹುಬ್ಬಳ್ಳಿಗೆ ಹೋಗಿದ್ದು ದಿನಾಂಕ 02-09-2013 ರಂದು ಬೆಳಗ್ಗೆ
06-00 ಎ.ಎಂ ಕ್ಕೆ ನಮ್ಮ ಮನೆಯ ಮಾಲಿಕರಾದ ಓಂ ಪ್ರಕಾಶ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ.
ನಿನ್ನೆ ದಿನಾಂಕ 01-09-2013 ರಂದು ರಾತ್ರಿ 10-00 ಪಿ.ಎಂ ಕ್ಕೆ ಮನೆಯ ಕಡೆ ನೀಗಾ ಇಡಲು ಸುರಕ್ಷಿತವಾಗಿದ್ದು ಬೇಳಗ್ಗೆ
6-00 ಎ.ಎಂ ಕ್ಕೆ ಮನೆ ನೊಡಲು ಮನೆಯ ಬಾಗಿಲ ಕಿಲಿ ಕೊಂಡಿ ಮುರಿದಿದ್ದು, ಮನೆ ಬಾಗಿಲು
ತೆರೆದಿದ್ದು ಮನೆಕಳ್ಳತನ ಆಗಿರುಬಹುದು ಅಂತಾ ತಿಳಿಸಿದ ಮೇರೆಗೆ ತನ್ನ ಸೊಸೆಯ ತಂದೆ ತಾಯಿಯವರಿಗೆ
ಫೋನ್ ಮಾಡಿ ಮನೆಗೆ ಹೋಗಿ ಪರಿಶೀಲಿಸಿ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿ ನಾನು ಬಂದ ನಂತರ
ಫಿರ್ಯಾದಿ ಕೊಡುತ್ತೇನೆ ಅಂತಾ ಹೇಳಿ ಕಳುಹಿಸಿದ್ದು ಫಿರ್ಯಾದಿದಾರಳು ಹುಬ್ಬಳ್ಳಿಯಿಂದ ಗುಲಬರ್ಗಾ
ಕ್ಕೆ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಮತ್ತು ಮನೆಯೊಳಗೆ ಪ್ರವೇಶ
ಮಾಡಿ ನೋಡಲು ಅಲೆಮಾರಿಯಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟ್ರಂಕ್ ನ್ನು
ನೋಡಲು ಬೀಗ ಮುರಿದಿದ್ದು ಚೆಕ್ ಮಾಡಿ ನೋಡಲಾಗಿ 1. 34 ಗ್ರಾಂ ಬಂಗಾರದ ಆಭರಣಗಳು ಅಃಕಿಃ 80,000/- ರೂ.2. 02 ಕೆ.ಜಿ 365 ಗ್ರಾಂ ಬೆಳ್ಳಿಯ
ಆಭರಣಗಳು ಅಃಕಿಃ 40,000/- ರೂ. ಹೀಗೆ
ಒಟ್ಟು 1,20,000/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ
ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಎಮ್. ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಬಾದ ನಗರ ಠಾಣೆ : ಶ್ರೀ ರಾಜ ಅಹ್ಮದ
ತಂದೆ ಅಬ್ದುಲ ಕರೀಂ ಸಾ:ಮಿಲ್ಲತನಗರ ಶಹಾಬಾದ ಇವರು ದಿನಾಂಕ 28-08-2013 ರಂದು ತನ್ನ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಕೆಎ-25
ಡಬ್ಲೂ-4188 ಕಪ್ಪು ಬಣ್ಣದ್ದು ಅ.ಕಿ.20000/-ರೂ ಗಾಡಿಯನ್ನು ಮನೆಯ ಮುಂದೆ ಕೀಲಿ ಹಾಕಿ
ಮಲಗಿಕೊಂಡಿದ್ದು ದಿನಾಂಕ 29-08-2013 ರಂದು ಬೆಳಗ್ಗೆ 6.00 ಎಎಂ ಸುಮಾರಿಗೆ ಮನೆಯ ಹೊರಗಡೆ ಬಂದು
ನೋಡಿದಾಗಿ ಮನೆಯ ಮುಂದೆ ನಿಲ್ಲಿಸಿದ ಗಾಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಶಾಹಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
No comments:
Post a Comment