ಜೂಜಾಟ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ 16-10-13 ರಂದು ಸಾಯಂಕಾಲ 4:30 ಗಂಟೆಗೆ ಹಳೆಯ ತಿರಂದಾಜ ಟಾಕೀಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಕೆಲವು ಜನರು ಅಂದರ ಬಾಹರ ಎಂಬ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ
ಠಾಣೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಗೋಡೆಯ ಮರೆಯಲ್ಲಿ ನೋಡಲು 5-6 ಜನರು
ಗುಂಪಾಗಿ ಕುಳಿತು ಅಂದರ 50 ರೂಪಾಯಿ
ಬಾಹರ 50 ರೂಪಾಯಿ
ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ 6 ಜನರನ್ನು ಹಿಡಿದು ಹೆಸರು ವಗೈರೆ ವಿಚಾರಿಸಲು 1) ದೇವಿಂದ್ರಪ್ಪ ತಂದೆ ಜೆಟ್ಟಪ್ಪ ಸಂಕಾ ಸಾ|| ಜಗತ್ ಬೀಮ ಮಗರ ಗುಲಬರ್ಗಾ 2) ರಾಜು ತಂದೆ ಕತಲಪ್ಪಾ ಒಂಟಿ ಸಾ|| ಜಗತ್ ಭೀಮ ನಗರ ಗುಲಬರ್ಗಾ 3) ಶಾಂತಪ್ಪ
ತಂದೆ ನಾಗಪ್ಪ ಖಾನಾಪೂರ ಸಾ|| ಜಗತ್ ಭೀಮ ನಗರ ಗುಲಬರ್ಗಾ 4) ಅನೀಲ
ತಂದೆ ಬಂದೆಗೆಪ್ಪ ಒಂಟಿ ಸಾ|| ಜಗತ್ ಭೀಮ ನಗರ ಗುಲಬರ್ಗಾ 5) ಮೈತಾಫಖಾನ್
ತಂದೆ ಹೈದರಖಾನ್ ಸಾ||ಗಾಜೀಪೂರ ಗುಲಬರ್ಗಾ 6) ಮಲ್ಲೇಶಪ್ಪ
ತಂದೆ ಬಸಣ್ಣ ನೀಲೂರ ಸಾ|| ಜಗತ್ ಬೀಮ್ ನಗರ ಗುಲಬರ್ಗಾ ಅವರಿಂದ ನಗದು ಹಣ ರೂ.1205/- ಹಾಗೂ 52 ಇಸ್ಪೆಟ್
ಎಲೆಗಳನ್ನು ಜಪ್ತಿ ಪಂಚನಾಮದ ಪ್ರಕಾರ ಜಪ್ತಿ ಪಡಿಸಿಕೊಂಡು ಎಲ್ಲಾ ಆರೋಪಿತರೊಂದಿಗೆ ಠಾಣೆಗೆ ಭಂದು
ಸದರಿವರ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣ :
ಫರತಾಬಾದ ಠಾಣೆ : ²æà ಸಂಗಯ್ಯ
ತಂದೆ ಬಸಯ್ಯ ಗದ್ದಗೆ ಸಾ: ಶಹಾಪೂರ ಜಿ: ಯಾದಗಿರ ರವರ ತಂದೆ ಬಸಯ್ಯ ಸುಮಾರು 20 ವರ್ಷಗಳ ಹಿಂದೆ ತೀರಿಕೊಂಡಿದ್ದು
ಇರುತ್ತದೆ. ನಮ್ಮ ತಾಯಿ ಶಿವಶರಣಮ್ಮ ಇವಳು ನನ್ನೊಂದಿಗೆ ಮನೆಯಲ್ಲಿ ಇದ್ದಿರುತ್ತಾಳೆ. ಸದರಿ ನಮ್ಮ
ತಾಯಿಗೆ ವಯಸ್ಆಗಿದ್ದು ಅವಳು ಆಗಾಗೆ ತಾನು ಬದುಕಿ ಮಾಡುವುದಾದರು ಏನು ಅಂತಾ ಜಿಗುಪ್ಸೆಯಿಂದ
ಮಾತಾಡುತ್ತಿದ್ದಾಗ ನಾನು ಹಾಗೂ ನನ್ನ ಹೆಂಡತಿ ಅನುಸೂಬಾಯಿ ದೈರ್ಯ ಹೇಳುತ್ತಿದ್ದೇವು ಹೀಗಿರುವಾಗ
ನಮ್ಮ ತಾಯಿಯವರು ದಿನಾಂಕ: 13-10-2013 ರಂದು ಮದ್ಯಾಹ್ನ 01.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇಲ್ಲದಿದ್ದಾಗ ನನ್ನ ಹೆಂಡತಿ
ಅನುಸುಬಾಯಿಗೆ ನಾನು ಮಡಿಕಲಗೆ ಹೋಗಿ ಗೋಲಿ ತರುತ್ತೇನೆ ಅಂತಾ ನಮ್ಮ ತಾಯಿ ಶಿವಶರಣಮ್ಮ ಇವಳು ಹೇಳಿ
ಮನೆಯಿಂದ ಹೋಗಿರುತ್ತಾಳೆ. ನಂತರ ನಾನು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನನ್ನ ಹೆಂಡತಿ ಸದರಿ ವಿಷಯ
ತಿಳಿಸಿರುತ್ತಾಳೆ. ಆ ದಿನದಿಂದ ನಮ್ಮ ಅಣ್ಣ, ತಮ್ಮಂದಿರ ಮನೆಗೆ ಸಂಬಂಧಿಕರ ಮನೆಗೆ ವಿಚಾರಿಸಿದಾಗ ನಮ್ಮ ತಾಯಿ ಬಂದ
ವಿಷಯ ತಿಳಿಯಲಿಲ್ಲಾ. ಇಂದು ದಿನಾಂಕ: 17-10-2013 ರಂದು 9-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮ ವೀರಭದ್ರಯ್ಯ ಇಬ್ಬರೂ
ಕೂಡಿ ನಮ್ಮ ತಾಯಿಗೆ ಹುಡುಕಾಡುವ ಸಲುವಾಗಿ ಜೇವರ್ಗಿ, ಕಟ್ಟಿಸಂಗಾವಿ ಕಡೆಗೆ ಹುಡುಕಾಡಿದರೂ ನಮ್ಮ ತಾಯಿ ಸಿಕ್ಕಿರುವುದಿಲ್ಲ.
ನಂತರ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಭೀಮಾ ನದಿಯ ಸೇತುವೆಯ ಕೆಳಗೆ ನದಿಯ ದಂಡೆಯಲ್ಲಿ ಹಸನಾಪೂರ
ಸೀಮಾಂತರದಲ್ಲಿ ಒಬ್ಬ ಹೆಣ್ಣು ಮಗಳು ಬಿದ್ದಿರುವುದನ್ನು ನೋಡಿ ನಾವು ಹೋಗಿ ನೋಡಲಾಗಿ ಸದರಿ
ಹೆಣ್ಣು ಮಗಳ ಮೃತ ದೇಹ ನಮ್ಮ ತಾಯಿಯಾಗಿರುತ್ತಾಳೆ. ಸದರಿ ನಮ್ಮ ತಾಯಿಯು ವಯಸ್ಸಾಗಿದ್ದು ಅವಳು
ಮಾನಸಿಕವಾಗಿ ಜರ್ಜರಿತವಳಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ನದಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment