ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ
: ಶ್ರೀ ಚಿದಾನಂದ ತಂದೆ ಭೋಜರಾಯ ಪಾನಾಗಾಂವ ಸಾ: ಇಟಗಾ ತಾ:
ಜೇವರ್ಗಿ ದಿನಾಂಕ 22-10-13 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಸಂಧ್ಯಾಕಾಲ ದಿನ ಪತ್ರಿಕೆ ನೋಡಿದಾಗ ಅದರಲ್ಲಿ ದಿನಾಂಕ 21-10-13 ರಂದು ರಾತ್ರಿ ಸಮಯದಲ್ಲಿ ಕೆರೆ ಭೋಸಗಾ ಕ್ರಾಸ ಹತ್ತಿರವಿದ್ದ ವೇರ ಹೌಸ
ಸಮೀಪ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ
ಮೃತಪಟ್ಟಿರುತ್ತಾನೆ ಅನ್ನುವ ಸುದ್ಧಿ ಓದಿದೆ ಅದರಲ್ಲಿಯ ಭಾವಚಿತ್ರ ನೋಡಲಾಗಿ ಅದು
ನನ್ನ ಖಾಸ ತಂಗಿ ಗಂಡನಾದ ಮಲ್ಲಿನಾಥ ತಂದೆ ಶಂಕ್ರೆಪ್ಪ ಅವರಾದಿ ಇತನದು ಅಂತಾ ಕಂಡು ಬಂದಿದ್ದರಿಂದ
ನಾನು ಮತ್ತು ನಮ್ಮೂರಿನ ಗ್ರಾಮ ಪಂಚಾಯತ
ಅಧ್ಯಕ್ಷರಾದ ಶ್ರೀಶೈಲ ಶೀಲವಂತ ಹಾಗೂ ಇತರರು ಕೂಡಿ
ಜೀಪು ಕಟ್ಟಿಕೊಂಡು ಗುಲಬರ್ಗಾ ಜಿಲ್ಲಾ
ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಹೋಗಿ ಅಲ್ಲಿ
ಸುರಕ್ಷತೆಯಲ್ಲಿ ಇಟ್ಟ ಶವವನ್ನು ನೋಡಲಾಗಿ ಅದು
ನನ್ನ ತಂಗಿಯ ಗಂಡನಾದ ಮಲ್ಲಿನಾಥ ತಂದೆ ಶಂಕ್ರೆಪ್ಪ ಅವರಾದಿ ಈತನದೇ ಇತ್ತು. ಅವರ ಎಡಗಾಲ
ಮೊಳಕಾಲ ಮೇಲಿಂದ ಕೆಳಗಿನ ಪಾದದವರೆಗೆ ಹರಿದ ಭಾರಿ ರಕ್ತಗಾಯವಾಗಿ ಮಾಂಸ ಕಂಡು ಬರುತ್ತಿದ್ದು,
ಮೂಗಿನಿಂದ ರಕ್ತ ಸೋರಿದ್ದು, ಎಡ ಭುಜದ ಹಿಂಭಾಗಕ್ಕೆ ಕಂದು ಗಟ್ಟಿದಗಾಯ, ಎಡ ಹಣೆಯ ಮೇಲೆ ಕಂದು
ಗಟ್ಟಿದ ಗಾಯಗಳು ಇದ್ದವು. ಸದರಿ ನನ್ನ ತಂಗಿಯ ಗಂಡನಾದ ಮಲ್ಲಿನಾಥ ಈತನು ಗುಲಬರ್ಗಾ ರಾಣೇಶ ಪೀರ ದರ್ಗಾ ಹತ್ತಿರ
ನಿರ್ಮಾಣಗೊಳ್ಳುತ್ತಿರುವ ಕೃಷಿ ಬಾಲಕರ ವಸತಿ
ಗೃಹದ ಕಟ್ಟಡ ವಾಚಮ್ಯಾನ ಅಂತಾ ಕಳೆದ 3 ತಿಂಗಳಿಂದ
ಕೆಲಸ ಮಾಡುತ್ತಿದ್ದರು. ನಿನ್ನೆ ದಿನಾಂಕ
21-10-13 ರಂದು ರಾತ್ರಿ ಸಮಯದಲ್ಲಿ ಯಾವುದೋ
ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ
ಹಾಗೂ ನಿಷ್ಕಾಳಿಜಿತನದಿಂದ ನಡೆಯಿಸಿ ನನ್ನತಂಗಿ ಗಂಡನಾದ ಮಲ್ಲಿನಾಥ ಅವರಾದಿ ಈತನಿಗೆ
ಡಿಕ್ಕಿ ಹೊಡೆದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಡಿಕ್ಕಿ ಪಡಿಸಿದ ವಾಹನ ಚಾಲಕನು ವಾಹನ
ನಿಲ್ಲಿಸದೇ ಹಾಗೇ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ದಿನಾಂಕ 22-10-2013
ರಂದು ಶ್ರಿ ದತ್ತಪ್ಪ
ತಂದೆ ಸಿದ್ದಣ್ಣ
ಕಮಸಗಿ ಸಾ||ಅಫಜಲಪೂರ ರವರು ಮತ್ತು ತಮ್ಮ ಹೆಂಡತಿ ಇಬ್ಬರು
ಕೂಡಿ ಹೊಲಕ್ಕೆ
ಹೋಗಿ ಕೆಲಸ
ಮಾಡಿ ಮರಳಿ
6 ಪಿಎಮ್ಮದ ಸುಮಾರಿಗೆ
ಮನೆಗೆ ಬರುವಾಗ
ಶರಣಪ್ಪ ಶಿರವಾರ
ರವರ ಕಟ್ಟಿಗೆ
ಅಡ್ಡದ ಹತ್ತಿರ
ರೋಡಿನ ಏಡ
ಬಾಜು ಒಂದು
ಟಾಕ್ಟರ ಚಾಲಕ
ಅತಿವೇಗ ಹಾಗೂ
ನಿಸ್ಕಾಳಜಿಒತನದಿಂದ ನಡೆಸಿಕೊಂಡು
ಬಂದು ನನಗೆ
ಹಾಗೂ ನನ್ನ
ಹೆಮಡತಿಗೆ ಡಿಕ್ಕಿ
ಪಡಿಸಿ ತನ್ನ
ಟಾಕ್ಟ್ ರ
ಸಮೆತ ಓಡಿ
ಹೋಗಿರುತ್ತಾನೆ ಸದರಿ
ಚಾಲಕನ ಹೆಸರು
ಮಲ್ಲು ತಂದೆ
ಶರನಪ್ಪ ಭಂಗಿ
ಅಂತ ಇರುತ್ತದೆ
ಅಂತಾ
ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 13-10-2013 ರಂದು 4-00 ಪಿ.ಎಮ್
ಕ್ಕೆ ಶ್ರೀ ಸಮಿಯೋದ್ದಿನ ತಂದೆ ಮಹ್ಮದ ಹಮಿದೊದ್ದಿನ ಸಾಃ ಮ.
ನಂ. 6-535 ಬಟ್ಲೆ ಅಲಾವಾ ಮೋಮಿನಪೂರ ಗುಲಬರ್ಗಾ ತನ್ನ ಮೋಟಾರ ಸೈಕಲ ನಂ. ಕೆ.ಎ 07 ಎಲ್2261 ನೇದ್ದನ್ನು ಕೆ.ಬಿ.ಎನ್ ಕಡೆಯಿಂದ ಚಲಾಯಿಸಿಕೊಂಡು ತನ್ನ ಮನೆಗೆ
ಹೋಗುವ ಕುರಿತು ಪರಾಹನಾ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಮೋಟಾರ ಕೆಂಪು ಬಣ್ಣದ ಹೀರೊ ಹೊಂಡಾ
ಮೋಟಾರ ಸೈಕಲ ನಂ. ಕೆ.ಎ 32 ವಿ 6080 ನೇದ್ದರ
ಚಾಲಕನು ತನ್ನ ಮೋಟಾರ ಸೈಕಲ ಮೇಲೆ ಹಿಂದ ಒಬ್ಬನನ್ನು ಕೂಡಿಸಿಕೊಂಡು ಡಂಕಾ ಕ್ರಾಸ್ ಕಡೆಯಿಂದ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಬಲಭಾಗಕ್ಕೆ
ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ
ತನಗೆ ಬಲಗೈ ಬುಜಕ್ಕೆ ಮತ್ತು ಬಲಗಾಲು ಪಾದಕ್ಕೆ ಭಾರಿ ಗುಪ್ತ ಪೆಟ್ಟಾಗಿ ರಕ್ಗಗಾಯವಾಗಿದ್ದು ಆಗ
ಅಲ್ಲಿನ ಜನರು ಅಪಘಾತ ಪಡಿಸಿದ ಮೋಟಾರ ಸೈಕಲ ಮತ್ತು ಅಲ್ಲಿದ್ದ ಇನ್ನೊಬ್ಬನನ್ನು
ಕರೆದುಕೊಂಡು ರೋಜಾ ಪೊಲೀಸ್ ಠಾಣೆಗೆ ಒಪ್ಪಿಸಿ ಉಪಚಾರ ಕುರಿತು ಹೋಗಿ ಉಪಚಾರ ಪಡೆದುಕೊಂಡು ತಡವಾಗಿ
ಠಾಣೆಗೆ ಬಂದು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment