Police Bhavan Kalaburagi

Police Bhavan Kalaburagi

Saturday, October 12, 2013

Gulbarga District Reported Crimes

ಕಳವು ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ರೂಪಾ ಗಂಡ ಕಲ್ಲಂಭಟ್ಟಿ ರಾಜಜೋಶಿ ಸಾ: ಪ್ಲಾಟ ನಂ-42 ರಾಜ ಮಹಲ್ ಲೇಔಟ ಸಾಯಿ ಮಂದಿರ ಹಿಂದುಗಡೆ ಜೇವರ್ಗಿ ರೋಡ  ಗುಲಬರ್ಗಾ ದಿನಾಂಕ 11-10-2013 ರಂದು ಬೆಳಿಗ್ಗೆ 10-30 ಗಂಟೆಗೆ ಸುರುಪೂರಕ್ಕೆ ಹೋಗಬೇಕೆಂದು ನನ್ನ ಜೋತೆ ಗಂಡನಾದ ಕಲ್ಲಂಭಟ್ಟಿ ರಾಜಜೋಶಿ ಮಗಳು ಸುಮಾ ಅಳಿಯ ಅಚ್ಯೂತಜೊಶಿ ಜೊತೆಗೆ ರಾಮ ಮಂದಿರ ಬಸ್ ಸ್ಟ್ಯಾಂಡ ಹತ್ತೀರ  ಸರಕಾರಿ ಬಸ್ ನಂ ಕೆಎ-32-ಎಫ್-1402 ನೇದ್ದರಲ್ಲಿ ಕುಳಿತು ಹೊರಟಿದ್ದು ಕೊಟನೂರ ಮಠದ ಹತ್ತೀರ ಹೋಗುತ್ತಿದ್ದಾಗ ವ್ಯಾನಿಟಿಬ್ಯಾಗನಿಂದ ಕರವಸ್ತ್ರ ತಗೆಯಲು ನೋಡಿದಾಗ  ವ್ಯಾನಿಟಿ ಬ್ಯಾಗನ ಚೈನ ಅರ್ಧ ತರೆದಿದ್ದು ಗಮನಕ್ಕೆ ಬಂದಿದ್ದು ಆಗ ಗಾಬರಿಯಾಗಿ ನೋಡಿದಾಗ ಬ್ಯಾಗನಲ್ಲಿದ್ದ 1) 4 ತೊಲೆ ಬಂಗಾರದ ಚೈನ ಅ.ಕಿ.1,20,000/-ರೂ 2) 3 ತೊಲೆ ಬಂಗಾರದಿಂದ ಗಟಿಸಿದ ಮುತ್ತುಗಳು ಅ.ಕಿ. 92,000/-ರೂ ಹಾಗೂ ನಗದು ಹಣ 5000/-ರೂ ಹೀಗೆ ಒಟ್ಟು 2,17,000/-ರೂ ಮೌಲ್ಯದ ಆಭರಣ ಹಾಗೂ ಹಣ ಕಳ್ಳತನವಾಗಿರುತ್ತದೆ  ಜರೂರಿ ಕೆಲಸದ ಕಾರಣ ಸುರಪೂರಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಬಂದು ಮನೆಯಲ್ಲಿ ಮತ್ತು ಇತರೆ ಎಲ್ಲಾ ಕಡೆ ಹುಡಕಾಡಿ ದೂರು ಸಲ್ಲಿಸಿರುತ್ತೆನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀಮತಿ ಧನವಂತಿ ಗಂಡ ಶರ್ಮಾ ಮಲ್ಲಿಕಾರ್ಜುನ ಸಾ|| ಪ್ಲಾಟ ನಂ. 5/1 ನಿವ್ ಘಾಟಗೇ ಲೇಔಟ ಗುಲಬರ್ಗಾ ರವರು ದಿನಾಂಕ 09-10-2013 ರಂದು ರಾತ್ರಿ 9 ಗಂಟೆ ರೈಲುಗಾಡಿಗೆ ಮನೆ ಬೀಗ ಹಾಕಿಕೊಂಡು ಮನೆಯ ಮಾಲಿಕರಿಗೆ ಹೇಳಿ ಬೆಂಗಳೂರಿಗೆ ಹೋಗಿದ್ದು ದಿನಾಂಕ 10-10-2013 ರಂದು ಬೆಳಿಗ್ಗೆ  ನಮಗೆ ಮನೆ ಮಾಲಿಕರು ಪೋನ್ ಮಾಡಿ ಯಾರೊ ಕಳ್ಳರು ಮನೆಯ ಬಾಗಿಲು ಕೊಂಡಿ ಮುರಿದು ಹೋದ ಬಗ್ಗೆ ತಿಳಿಸಿದ್ದಾರೆ ಇಂದು ದಿನಾಂಕ 12-10-2013 ರಂದು ನಾನು ನನ್ನ ತಮ್ಮ ಕರಣಶೀಲ ನನ್ನ ಮಗ ರಕ್ಷಿತ ರವರೊಂದಿಗೆ ಬೆಂಗಳೂರಿನಿಂದ ಗುಲಬರ್ಗಾದ ನನ್ನ ಬಾಡಿಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಮನೆಯ ಒಳಗಡೆ ಹೋಗಿ ನೋಡಲು ಬೇಡ್ ರೂಮಿನಲ್ಲಿದ್ದ ಅಲಮಾರಿಯ ಕೀಲಿ ತೆಗೆದು ಒಳಗಡೆ ಇದ್ದ ಲಾಕರ ಕಿಲಿ ಕೂಡ ತೆಗೆದು ಅದರಲ್ಲಿದ್ದ ಈ ಕೇಳಕಂಡ ಸಾಮಾನುಗಳಾದ 1) ಮಾಂಗಲ್ಯಾ 3 ಗ್ರಾಂ 6000/- ರೂ. 2) ಮಾಂಗಲ್ಯ ಗುಂಡು 2 ಗ್ರಾಂ 4000/- ರೂ. 3) ಬೆಳ್ಳಿಯ ಬೊಟ್ಟುಂಗುರು 4 ತೊಲಾ (2 ಜೊತೆ) 1600/- ರೂ. 4) ಬೆಳ್ಳಿಯ ಪೂಜಾ ಸಾಮಾನುಗಳು 2 ಗ್ಲಾಸ, 2 ದೀಪ, ಕುಂಕುಮ ಬಟ್ಟಲುಗಳು ½ ಕೆ.ಜಿ 15,000/- ರೂ. 5) ಬೆಳ್ಳಿಯ ಉಡವಾಣಿ 10 -3000/- ರೂ. (ಮಕ್ಕಳ ಉಡವಾಣಿ ನಾಮಕರಣದ ವೇಳೆಯಲ್ಲಿ ಕೊಟ್ಟಿದ್ದು) 6) ಪೂಜದ ಹಣ (ನಾಣ್ಯ ಮತ್ತು ನೋಟುಗಳು) 25000/- 7) ಪ್ಯಾಕೆಟ್ (ಪರ್ಸ) ನಗದು ಹಣ 5000/- ಹಿಗೆ ಒಟ್ಟು 29,600/- ರೂ ಕಮ್ಮತ್ತಿನವುಗಳನ್ನು ಯಾರೋ ಕಳ್ಳರು ಮನೆಯ ಬಾಗಿಲು (ಕಿಲಿ) ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶೋಭಾ ಪಾಟೀಲ ಗಂಡ ವಿಜಯಕುಮಾರ ಇವರು  ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ವೈದ್ಯರಿಗೆ ಪತ್ರ ಬರೆದು ಅವರ ಜೊತೆಯಲ್ಲಿರುವ ಶ್ರೀಮತಿ ಶ್ರೀದೇವಿ ಗಂಡ ಗುರಣ್ಣಾ ರವರಿಗೆ ವಿಚಾರಿಸಲು ದಿನಾಂಕ: 11-10-2013 ರಂದು ರಾತ್ರಿ 10=15 ಗಂಟೆಗೆ  ಫಿರ್ಯಾದಿ ಮತ್ತು ಗಾಯಾಳು ಶೋಭಾ ಇವರು ಸಿಂದಗಿ ಅಂಭಾ ಭವಾನಿ ದೇವಸ್ಥಾನದ ದರ್ಶನ ಮಾಡಿಕೊಂಡು ಮನೆಗೆ ಹೋಗುವ ಕುರಿತು ಹೊಸ ಜೇವರ್ಗಿ ರೋಡ ಮುಖಾಂತ ನಡೆದುಕೊಂಡು ಹೋಗುತ್ತಿದ್ದಾಗ ಆರ್.ಪಿ.ಸರ್ಕಲ್ ಕಡೆಯಿಂದ ಟಂಟಂ ನಂ:ಕೆಎ 32 ಬಿ 8763 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶೋಭಾ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಖಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಗಂಡ ಮತ್ತು ಗಂಡನ ಮನೆಯವರಿಂದ ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ಹಣಮಂತರಾಯ ಸಾ: ಮಹಾಲಕ್ಷ್ಮೀ ಲೇಔಟ್ ಗುಲಬರ್ಗಾ ದಿನಾಂಕ: 07.04.2004 ರಂದು ನಮ್ಮ ತಂದೆ ತಾಯಿಯವರು ತಡಕಲ ಗ್ರಾಮದ ಹಣಮಂತರಾಯ ಇತನೊಂದಿಗೆ ಸಂಪ್ರದಾರಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ  8 ತೊಲೆ ಬಂಗಾರ ಮೂರು ಲಕ್ಷ ರೂಪಾಯಿ ಮತ್ತು ಗೃಹ ಬಳಿಕೆ ಸಾಮಾನು ಕೊಟ್ಟಿದ್ದು ಇರುತ್ತದೆ ನನ್ನ ಗಂಡ ಹಣಮಂತರಾಯ ಇತನು ಹಿಂದುಳಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸರಕಾರಿ ನೌಕರಿ ಮಾಡುತ್ತಾನೆ ಮದುವೆಯಾದ ಒಂದು ತಿಂಗಳ ನನ್ನ ಜೊತೆ ಚೆನ್ನಾಗಿದ್ದು ನಂತರ ಗಂಡ ಹಣಮಂತರಾಯ ,ಅತ್ತೆ ಪುತಳಾಬಾಯಿ, ಮಾವ ಕಲ್ಯಾಣಿ, ನಾದಿನಿ ಭಾಗಿರಥಿ , ಮೈದುನ ಮಲ್ಲಿಕಾರ್ಜನ ಎಲ್ಲರು ಕೂಡಿ ನನ್ನ ಮೇಲೆ ಸಂಶಯ ಪಡುತ್ತಾ ನೀನು ನಮ್ಮ ಮನೆಯಲ್ಲಿ ಅಡುಗೆ ಮಾಡಬೇಡ ಊಟದಲ್ಲಿ ಎನಾದರೂ ಹಾಕುತ್ತಿಯಾ ನಿನ್ನ ತಂದೆ ಪೊಲೀಸ ಇದ್ದಾರೆ ಅವರಿಂದ 2 ಲಕ್ಷ ಹಣ ತೆಗೆದುಕೊಂಡು ಬಾ ಅಂತಾ ದಿನಾಲೂ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು  ಈ ವಿಷಯವನ್ನು ನಾನು ನಮ್ಮ ತಂದೆ ತಾಯಿಯವರಿಗೆ ತಿಳಿಸಿದ್ದಾಗ ಅವರು ತಡಕಲ ಗ್ರಾಮದ ಮುಖಂಡರ ಸಮಕ್ಷಮ ನನ್ನ ಗಂಡ ಹಾಗೂ ಅವರ ಮನೆಯವರಿಗೆ  ಬುದ್ದಿವಾದ ಹೇಳಿ ನನ್ನೊಂದಿಗೆ ಸರಿಯಾಗಿರುವಂತೆ ತಿಳಿಹೇಳಿದರು ಸ್ವಲ್ಪ ದಿವಸ ಕಳೆದ ನಂತರ ನಾನು ನನ್ನ ಗಂಡ ಕೆಲಸ ಮಾಡುವ ದಾವಣಗೆರೆ ಹೋಗಿ ಉಳಿದುಕೊಂಡೆನು. ಅಲ್ಲಿಗೂ ಬಂದು ನನ್ನ ಅತ್ತೆ , ನಾದಿನಿ ಬಂದು ಹಿಂಸೆ ಕೊಡುತ್ತಿದ್ದರು ನಂತರ ನನ್ನ ಗಂಡನಿಗೆ ಬೀದರಿಗೆ ವರ್ಗಾವಣೆ ಆಯಿತು. ಆಗ ನನ್ನ ಗಂಡ ಹಣಮಂತರಾಯ ನನಗೆ ಬೇರೆ ಮನೆ ಮಾಡಲು 1.80.000/- ರೂಪಾಯಿ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡುತ್ತಿದ್ದರಿಂದ ನಮ್ಮ ತಂದೆಯಿಂದ 1.80.000/- ರೂಪಾಯಿ ತಂದುಕೊಟ್ಟಿರುತ್ತೇನೆ ಈಗ ಸುಮಾರು ಐದು ತಿಂಗಳಿಂದ ಗುಲಬರ್ಗಾದ ಮಹಾಲಕ್ಷ್ಮೀ ಲೇಔಟ್ ಬಾಡಿಗೆ ಮನೆ ಮಾಡಿಕೊಂಡಿರುತ್ತೇವೆ ನನ್ನ ಗಂಡ ಬೀದರಕ್ಕೆ ದಿನಾಲೂ ಹೊಗಿ ಬಂದು ಮಾಡುತ್ತಿದ್ದರು.ದಿನಾಂಕ:05.10.2013 ರಂದು ರಾತ್ರಿ 11.00 ಗಂಟೆ ಸುಮಾರಿಗೆ ನನ್ನ ಗಂಡ ಹಣಮಂತರಾಯ ಅತ್ತೆ ಪುತಳಾಬಾಯಿ, ಮಾವ ಕಲ್ಯಾಣಿ, ನಾದಿನಿ ಭಾಗಿರಥಿ ಎಲ್ಲರು ಕೂಡಿ ಗುಲಬರ್ಗಾ ಮಹಾಲಕ್ಷ್ಮೀ ಲೇಔಟ ನಮ್ಮ ಮನೆಗೆ ಬಂದು ನಮ್ಮಗೆ ಸಾಲವಾಗಿದೆ ನನ್ನ ಗಂಡ  ನಿನ್ನ  ತವರು ಮನೆಯಿಂದ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕೈ ಯಿಂದ ಹೊಡೆ ಬಡೆ ಮಾಡಿದ್ದು ನನ್ನ ಅತ್ತೆ ನಾದಿನಿ ಮಾವ  ಈ ರಂಡಿಗೆ ಖಲಾಸ ಮಾಡು ಅಂತಾ ಕೈ ಹಿಡಿದು ಎಳೆದಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಮಂಜುಳಾ ಗಂಡ ರಾಚಯ್ಯ ಹಿರೇಮಠ ಸಾ ಮಾದನಹಿಪ್ಪರಗಾ ಹಾ.ವ. ಬಸವೇಶ್ವರ ಕಾಲನಿ ಅಫಜಲಪೂರ ರವರನ್ನು ದಿನಾಂಕ 19-02-2009 ರಂದು ಮಾದನಹಿಪ್ಪರಗಾ ಗ್ರಾಮದ ರಾಚಯ್ಯಾ ತಂದೆ ವಿರಭದ್ರಯ್ಯಾ ಇವರೊಂದಿಗೆ ಒಂದು ಲಕ್ಷ ರೂಪಾಯಿ ಮತ್ತು 6 ತೋಲೆ ಬಂಗಾರ ಮತ್ತು ಗ್ರಹುಪಯೋಗಿ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಗಂಡ ಮತ್ತು ಗಂಡನ ಮನೆಯವರು ಸರಿಯಾಗಿ ನೋಡಿಕೊಂಡದ್ದು ನಂತರ ನನ್ನ ಗಂಡ ಮತ್ತು ಗಂಡನ ಮನೆಯವರು ನೀನು ಸರಿಯಾಗಿಲ್ಲ ನಿನಗೆ ಯಾವುದೇ ಸಂಪ್ರದಾಯ ಗೊತ್ತಿಲ್ಲ ನೋಡಲು ತುಂಬಾ ಕಪ್ಪಗಿದ್ದಿಯಾ ನಮ್ಮ ಮನೆ ಹಾಳು ಮಾಡಲು ಬಂದಿರುವೆ ತವರು ಮನೆಯಿಂದ 50,000/- ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಆಗಾಗಗ್ಗೆ ಮಾನಸಿಕ ಮತ್ತು ದೈಹಿಕ ಕಿರುಕಳ ನೀಡಿದ್ದು ದಿನಾಂಕ 04-05-2013 ರಂದು ನನ್ನ ಗಂಡನಾದ ರಾಚಯ್ಯಾ ತಾಂದೆ ವೀರಭದ್ರಯ್ಯಾ ಹಿರೇಮಠ ಅತ್ತೆಯಾದ ಶರಣಮ್ಮಾ , ತಮ್ಮನಾದ ಶ್ರೀಶೈಲತಂದೆ ನಿಡಮಾಮಡಯ್ಯಾ ನಾದಿನಿಯರಾದ ಪ್ರೇಮಾ, ಪ್ರೀತಿ ಮತ್ತು ಕೇದಾರಲಿಂಗ್ಯಾ ಇವರುಗಳು ನನಗೆ ದೈಹಿಕ, ಮಾನಸಿಕ ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿ5ಮತ್ತು ವರದಕ್ಷಿಣಿ ಕಿರುಕಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: