ಗೃಹಿಣಿಗೆ ಗಂಡ ಮತ್ತು ಗಂಡನ
ಮನೆಯವರಿಂದ ಕಿರುಕಳ ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ ಜರೀನಾ ಬೇಗಂ
ಗಂಡ ಇನಾಯತ ಸಾ: ಎಂ.ಆರ್. ಮಡಿಕಲ್ ಕಾಲೇಜ ಸುಂದರ
ನಗರ ಗುಲಬರ್ಗಾ ಇವರು ದಿನಾಂಕ: 04.09.2013 ರಂದು ಅಹ್ಮದಾಬಾದನಲ್ಲಿ ಕೋರ್ಟ ಮದುವೆ ಮಾಡಿಕೊಂಡು
ಎರಡು ಮೂರು ದಿನಗಳವರೆಗೆ ಸರಿಯಾಗಿದ್ದು ನಂತರ ದಿನಾಂಕ :08.09.2013 ರಂದು ಬೆಳಗ್ಗೆ 10.00
ಗಂಟೆಗೆ ನನಗೆ ನೀನು ನಿನ್ನ ತಂದೆ-ತಾಯಿ ಮನೆಯಿಂದ ಏನು ತಂದಿಲ್ಲ ವಗೈರೆ ಎನ್ನುತ್ತ ಕಿರುಕುಳ
ಕೊಡಲಾರಂಭಿಸಿದನು. ಇನಾಯತ ತಂದೆಯಾದ ಮಹ್ಮದ ವಸೀಮ ಈತನು ನನಗೆ ಏ ರಂಡಿ ನೀನು ನಿನ್ನ ತಂದೆ ತಾಯಿ
ಮನೆಯಿಂದ ಏನು ಬಂಗಾರ ಬೆಳ್ಳಿ ದುಡ್ಡು ಹಾಗೂ ಇತರೇ ಸಾಮಾನು ತಂದಿಲ್ಲ ಅತ್ತೆಯಾದ ರಬೀಯಾ ಇವಳು
ನನಗೆ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಭಾವನಾದ ಅಲ್ತಾಫ, ಮನ್ಸೂರ
ಇವರು ಕೂಡ ತವರು ಮನೆಯಿಂದ ಬಂಗಾರ ಬೆಳ್ಳಿ ತರಬೇಕು ಮತ್ತು ರೂಪಾಯಿ 1.50.000/- ವರದಕ್ಷಿಣೆ
ತರಬೇಕು ತರದೇ ಇದ್ದಾಗ ನಿನಗೆ ಅಷ್ಟು ಸುಲಭಾವಾಗಿ ಬೀಡದೇ ಬೆಂಕಿ ಹಚ್ಚಿ ಸಾಯಿಸಿ ಬಿಡುತ್ತೇವೆ
ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ದಿನಾಂಕ:07.10.2013 ರಂದು 02.00 ಪಿ.ಎಮ್ ಕ್ಕೆ
ಎಮ್.ಆರ್.ಮೆಡಿಕಲ್ ಕಾಲೇಜ ಎದುರುಗಡೆ ಸುಂದರ ನಗರದಲ್ಲಿನ ಗಂಡನ ಜೊತೆಯಲ್ಲಿದ್ದಾಗ ನನ್ನ ಗಂಡನ
ಅಕ್ಕಳಾದ ರಿಜ್ವಾನಾ ಬೇಗಂ ಇವಳು ನನ್ನ ಗಂಡನನ್ನು ಬಿಟ್ಟು ಮನೆಯಲ್ಲಿ ಉಳಿದಿದ್ದು ಇವಳು
ಮತ್ತೋಬ್ಬನ ಸಂಗಡ ಅನೈತಿಕ ಸಂಪರ್ಕ ಹೊಂದಿದ್ದು ಆಕೆ ಅದೇ ಧಂದೆಯಿಂದ ಆದಾಯ ಮಾಡುತ್ತಿದ್ದು ನೀನು
ತವರು ಮನೆಯಿಂದ ಹಣ ಬಂಗಾರ ಬೆಳ್ಳಿ ತರದೇ ಇದ್ದಾಗ ನಿನ್ನನ್ನು ಕೂಡ ಅದೇ ಅನೈತಿಕ ಆಕ್ರಮ್ ಧಂದೆಗೆ
ಅಟ್ಟಿ ನಿನ್ನಿಂದ ಆದಾಯ ಪಡೆಯುತ್ತೇವೆ ಎನ್ನುತ್ತಿದ್ದಾಳೆ ಮತ್ತು ರೇಷ್ಮ ಇವಳು ಕೂಡ ನಮ್ಮ ಅಕ್ಕನ
ಮಾತನ್ನು ಕೇಳದಿದ್ದರೆ ನಿನಗೆ ಬೆಂಕಿ ಹಚ್ಚಿ ಸುಡುತ್ತೇವೆ ಎಂದು ಧಮಕಿ ಹಾಕಿರುತ್ತಾರೆ. ಮದುವೆಯಾದ
ಒಂದು ತಿಂಗಳಲ್ಲಿಯೇ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ ಅತ್ತೆ ಮಾವ ಗಂಡನ ಇಬ್ಬರು ಸಹೋದರಿಯರು
ಇಬ್ಬರು ಸಹೋದರರು ಎಲ್ಲರೂ ಸೇರಿ ಉದ್ದೇಶಪೂರ್ವಕವಾಗಿ ತವರು ಮನೆಯಿಂದ ವರದಕ್ಷಿಣೆ ಬೆಳ್ಳಿ ಬಂಗಾರ
ತರುವಂತೆ ದಿನಾಲೂ ಸೇರಿ ಉದ್ದೇಶಪೂರ್ವಕವಾಗಿ
ತವರು ಮನೆಯಿಂದ ವರದಕ್ಷಿಣ ಬೆಳ್ಳಿ ಬಂಗಾರ
ತರುವಂತೆ ದಿನಾಲೂ ಪೀಡಿಸಿ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದಾರೆ ಅಂತಾ
ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment