ಹಲ್ಲೆ ಪ್ರಕರಣ :
ರೋಜಾ ಠಾಣೆ :ಶ್ರೀ ಮಹ್ಮದ ರಫೀಕ ತಂದೆ ಮಹ್ಮದ
ಶಫಿಕ ಸಾ: ಖಾಜಾ ಮಿಯಾ ಇವರ ಮನೆಯಲ್ಲಿ ಬಾಡಿಗೆ ಮೆಹಬೂಬ ನಗರ ಗುಲಬರ್ಗಾ ಇವರು ದಿನಾಂಕ: 11-10-2013
ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ನನಗೆ ಆರ್.ಪಿ ಜಾಧವ ಎ.ಈ.ಈ. ಮಹಾನಗರ ಪಾಲಿಕೆ ಗುಲಬರ್ಗಾ ರವರು ದೂರವಾಣಿ
ಮೂಲಕ ಒಕ್ಕಲಗೇರಾದಲ್ಲಿ ಇರುವ ಮನೆಯ ಹತ್ತಿರ ಬರಲು ತಿಳಿಸಿದ ಮೇರೆಗೆ ನಾನು 9: 15 ಗಂಟೆಯ
ಸುಮಾರಿಗೆ ಅಲ್ಲಿಗೆ ಬಂದಾಗ ಅಲ್ಲಿ 1] ಆರ.ಪಿ. ಜಾಧವ
ಎ.ಈ.ಈ ಮಹಾನಗರ ಪಾಲಿಕೆ ಗುಲಬರ್ಗಾ 2]
ಕರೀಮ ಮುಚಾಲೆ 3] ಮೋಹೀದ ಇಂಜಿನಿಯರ್ಸ್ ಇಂಟರನ್ಯಾಶನಲ್ ಬಿಲ್ಡರ್ಸ್ 4] ಶೆಫಿ ಅಹ್ಮದ [ಆರ್.ಟಿ.ಐ
] ಕಾರ್ಯಕರ್ತ [ಬ್ಲಾಕ ಮೇಲರ] ಹಾಗೂ ಮಹಾನಗರ ಪಾಲಿಕೆಯ ಸ್ಯಾನೇಟರಿ ಇನ್ಸಪೆಕ್ಟರ್ ಮತ್ತು ಅವರ
ಕಛೇರಿಯ ಸಿಬ್ಬಂದಿ ಅವರು ಅಲ್ಲದೇ ಒಂದು ಜೆ.ಸಿ.ಪಿ, ಒಂದು ಟ್ರಾಕ್ಟರ್ , ಎರಡು ಟಾಟಾ ಸುಮೋ
ಅಲ್ಲಿಯೇ ಇದ್ದು ನನಗೆ ಜಾಧವ ರವರು ಎದೆಯ ಮೇಲೆ ಹೊಡೆದರು ಮೋಹೀದ ಹಾಗೂ ಕರೀಮ ಮುಚಾಲೆ ಕೈಯಿಂದ
ಮುಷ್ಠಿಮಾಡಿ ಹೊಡೆಬಡೆ ಮಾಡಿದರು ಇದಕ್ಕೆ ಕಾರಣ ನಾನು ಬಂದ ತಕ್ಷಣ ಸದರಿಯವರು ನನ್ನ ಅವಾಚ್ಯ
ಶಬ್ದಗಳಿಂದ ಬೈದು ನಾವು ನಿಮಗೆ ಮನೆ ಖಾಲಿ ಮಾಡಲು ಹೇಳಿದರೂ ಸಹ ಮಗನೇ ನೀನು ಏಕೆ ಖಾಲಿಮಾಡಿಲ್ಲಾ
ನಿನಗೆ ಜೀವದಿಂದ ಹೊಡೆಯುತ್ತೇವೆ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೊಡೆಬಡೆ ಮಾಡಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment