ನರೋಣಾಪೊಲೀಸ
ಠಾಣೆ:
ಹಲ್ಲೆ ಪ್ರಕರಣ:
ನಾನು ಗಂಗಮ್ಮ ಗಂಡ
ರಾಣಪ್ಪಾ ಗಡದೆ ವಯಸ್ಸು 50 ವರ್ಷ ಉ: ಕೂಲಿಕೆಲಸ
ಜಾ: ಪ. ಜಾತಿ ವಾಸ: ಕೇರಿ ಅಂಬಲಗಾ ಗ್ರಾಮ ತಾ:ಆಳಂದ ಹೇಳಿ ಬರೆಸಿದ್ದು, ಹೀಗಿರುವಾಗ ಮುಂಜಾನೆ
9-00 ಗಂಟೆಯ ಸುಮಾರಿಗೆ ನಾನು ನಮ್ಮ ಓಣಿಯಲ್ಲಿರುವ ಮಲ್ಲೇಶಪ್ಪ ಗೌಡ ಇವರ ಕಿರಾಣಾ ಅಂಗಡಿಗೆ ಹೋಗಿ
ಸಾಮಾನುಗಳನ್ನು ತೆಗೆದುಕೊಂಡು ನಮ್ಮ ಮನೆಗೆ ಅಂಬೇಡ್ಕರ ಕಟ್ಟೆಯ ಹತ್ತಿರ ರಸ್ತೆಯಿಂದಾ ಹೋಗುವಾಗ
ನಮ್ಮ ಓಣಿಯ 1] ಹಣಮಂತ ತಂದೆ ಭೀಮಶ್ಯಾ ಗಡೆದೆ 2] ರಾಜು ತಂದೆ ನಾಗಪ್ಪ ಗಡೆದೆ 3] ಶಿವಪುತ್ರ
ತಂದೆ ಲಕ್ಷ್ಮಣ ಗಡೆದೆ ರವರುಗಳು ಕೂಡಿಕೊಂಡು
ಬಂದು ನನ್ನನ್ನು ತಡೆದು ನಿಲ್ಲಿಸಿ ಹಣಮಂತನು ನನಗೆ ನೀನು ಮತ್ತು ನಿಮ್ಮ ಮನೆಯವರು ಸೇರಿ ನಮ್ಮ ಮನೆಯ
ಅಂಗಳದಲ್ಲಿ ನಿಂಬೆಕಾಯಿ ಇಡುತ್ತಿದ್ದಿರಿ ,ಅಂತಾ ಅವಾಚ್ಯ ಶಬ್ದಗಳಿಂದಾ ಬೈಯುತ್ತಿದ್ದನು,
ಅದಕ್ಕೆ ನಾನು ನಾನೇಕೆ ನಿಮ್ಮ ಅಂಗಳದಲ್ಲಿ
ನಿಂಬೆಕಾಯಿ ಇಡಲಿ ಅಂತ ಕೇಳುತ್ತಿದ್ದೆ ಆಗ ರಾಜು ಮತ್ತು ಶಿವಪುತ್ರ ಇವರುಗಳು ಅವಮಾನ ಮಾಡುವ
ಉದ್ದೇಶದಿಂದಾ ನನ್ನ ಕೂಡಲು ಹಿಡಿದು ಎಳೆದಾಡಿ ನೆಲಕ್ಕೆ ನೂಕಿಸಿದ್ದು ಅದರಿಂದಾ ನನ್ನ ಹಣೆಗೆ
ಮತ್ತು ಎರಡು ಗಲ್ಲಕ್ಕೆ ಒಳಪೆಟ್ಟಾಗಿ ಕಣ್ಣುಗಳ
ಕೆಳಗೆ ಉಬ್ಬಿದಂತಾಗಿರುತ್ತದೆ. ಮತ್ತು ಕೈಮುಷ್ಠಿ ಮಾಡಿ ನನ್ನ ಬೆನ್ನ ಮೇಲೆ ಗುದ್ದಿರುತ್ತಾರೆ, ಅಲ್ಲದೆ 3 ಜನ ಸೇರಿ ನನಗೆ ನಿಂದು ಬಹಳ ನಡೆದಾದ ನಿನಗೆ
ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.ಆಗ ಅಲ್ಲಿಯೇ ಅಂಬೇಡ್ಕರ ಕಟ್ಟೆ ಹತ್ತಿರ
ನಿಂತಿದ್ದ ನನ್ನ ಮಕ್ಕಾಳಾದ ಸಂಜು ತಂದೆ ರಾಣಪ್ಪಾ ಗಡದೆ , ಪ್ರಕಾಶ ತಂದೆ ರಾಣಪ್ಪಾ ಗಡದೆ ಮತ್ತುಅಲ್ಲಿಯೇ
ಇದ್ದ ನಮ್ಮ ಓಣಿಯ ಶರಣಮ್ಮ ಗಂಡ ಬಾಬು
ಸಿಂಗೆನವರ ರವರು ಕೂಡಿ ಜಗಳಾ ನೋಡಿ ಬಿಡಿಸಿರುತ್ತಾರೆ. ನನ್ನೊಂದಿಗೆ
ಜಗಳಾ ಮಾಡಿದ 3 ಜನರು ನಮ್ಮ ಜತಿಯವರೆ ಆಗಿರುತ್ತಾರೆ. ನಾನು ನನಗೆ ಹೊಡೆ ಬಡೆ ಮಾಡಿದವರಿಗೆ ಹೆದರಿ
ಠಾಣೆಗೆ ಇಂದು ಬಂದಿರುತ್ತೇನೆ. ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ಸದರಿಯವರ ಮೇಲೆ
ಕಾನೂನು ರಿತ್ಯಾ ಕ್ರಮ ಕೈಕೊಳ್ಳಬೇಕೆಂದು ಹೇಳಿ ಬರೆಸಿದ್ದು ನಿಜವಿದೆ.ಫಿರ್ಯಾದಿದಾರಳಾದ ಶ್ರೀಮತಿ
ಗಂಗಮ್ಮ ಗಂಡ ರಾಣಪ್ಪಾ ಗಡದೆ ವಯ;50 ವರ್ಷ ವಾಸ: ಕೇರಿ ಅಂಬಲಗಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ
ದೂರೂ ನೀಡಿದ್ದು, ಸದರಿ ದೂರಿನ ಸಾರಂಶದ ಮೇಲಿಂದಾ ನಾನು ನರೋಣಾ ಪೊಲೀಸ ಠಾಣೆ ಅಪರಾಧ ಪ್ರಕಾರ ಪ್ರಕರಣ ದಾಖಲಿಸಿ ತನಿಖೇ
ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರಿ
ಪೊಲೀಸ ಠಾಣೆ:
ದಿನಾಂಕ 13-10-2013 ರಂದು 10-00 ಪಿ.ಎಮ್
ಕ್ಕೆ ಫಿರ್ಯಾದಿ ಗಂಜ ಬಸ್ ಸ್ಟಾಂಡ ರೋಡಿಗೆ ಇರುವ ಎಸ್.ಬಿ.ಎಚ್ ಬ್ಯಾಂಕ ಎದರುಗಡೆ ರೋಡಿನ ಮೇಲೆ
ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 5078 ನೇದ್ದರ ಚಾಲಕನು ತನ್ನ
ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ
ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು
ಅಪಘಾತದಿಂದ ಫಿರ್ಯಾದಿಗೆ ಬಲಗಾಲು ಪಾದಕ್ಕೆ ಗುಪ್ತಗಾಯವಾಗಿದ್ದು ಅಲ್ಲದೆ ತಲೆಗೆ
ರಕ್ತಗಾಯವಾಗಿದ್ದು ಇರುತ್ತದೆ ಅಂತ ಪಿರ್ಯಾದಿ ಸಾರಂಶ ಪ್ರಕಾರ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಎಂ.ಬಿ.ನಗರ ಪೊಲೀಸ್ ಠಾಣೆ:
ಕಳವು ಪ್ರಕರಣ:
ಇಂದು ಫಿರ್ಯಾದಿ ಶ್ರೀ ಸಂಗಮೇಶ ತಂದೆ ಬಂಡೆಪ್ಪಾ
ವಯಃ 27 ವರ್ಷ ಆಟೋ ಮೊಬೈಲ್ ಶಾಪ್ ಸಾಃ ಬಸವೇಶ್ವರ ಕಾಲೋನಿ 01 ನೇ ಕ್ರಾಸ್ ಗುಲಬರ್ಗಾ ಇವರು
ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕಃ 13/10/2013 ರಂದು ಫಿರ್ಯಾದಿದಾರನು ಮತ್ತು ಫಿರ್ಯಾದಿಯ ಚಿಕ್ಕಮ್ಮ ಮತ್ತು
ಚಿಕ್ಕಪ್ಪ ಎಲ್ಲರೂ ಕೂಡಿಕೊಂಡು ದಸರಾ ಹಬ್ಬದ ಪ್ರಯುಕ್ತ ಮನೆಗೆ ಬೀಗ ಹಾಕಿ ತಮ್ಮ ಸ್ವಂತ
ಗ್ರಾಮವಾದ ಬೀದರದ ಮುಚಳಂಬ್ ಗ್ರಾಮಕ್ಕೆ ಹೋಗಿರುತ್ತಾರೆ. ಇಂದು ದಿನಾಂಕಃ 14/10/2013 ರಂದು
04:00 ಪಿ.ಎಂ. ಕ್ಕೆ ಫಿರ್ಯಾದಿದಾರನ ತಂದೆಯು ಗುಲಬರ್ಗಾದ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು
ತೆರೆದಿದ್ದು ಮನೆಯ ಬೆಡರೂಮಿನ ಒಳಗಡೆ ಹೋಗಿ ಚೆಕ್ ಮಾಡಿ ನೋಡಲಾಗಿ ಅಲೆಮಾರಿಯಲ್ಲಿದ್ದ ಎಲ್ಲಾ
ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅದನ್ನು ಕಂಡು ತಂದೆಯವರು ನನಗೆ ಫೋನ್ ಮಾಡಿ ಮನೆ
ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾವೆಲ್ಲರೂ ಮನೆಗೆ ಬಂದು ನೋಡಲಾಗಿ
ಬೆಡರೂಮಿನಲ್ಲಿಟ್ಟ ಅಲೆಮಾರಿಯನ್ನು ಕಟ್ಟರ್ ಮಷೀನ್ ನಿಂದ ಹಿಂದಿನಿಂದ ಕಟ್ ಮಾಡಿದ್ದು ಮತ್ತು
ಅಲೆಮಾರಿಯಲ್ಲಿಟ್ಟ ಲಾಕರ್ ನಲ್ಲಿಟ್ಟು ಒಟ್ಟು 36 ತೊಲೆ ಬಂಗಾರದ ವಿವಿಧ ಆಬರಣಗಳು ಅಃಕಿಃ 9,00,000/- ರೂ. ಹಾಗು 03 ಕೆ.ಜಿ ಬೆಳ್ಳಿಯ ಆಭರಣಗಳು ಹಾಗು ಸಾಮಾನುಗಳು
ಅಃಕಿಃ 1,50,000/- ರೂ. ಹೀಗೆ ಒಟ್ಟು 10,50,000/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಯಾರೋ
ಕಳ್ಳರು ಮನೆಯ ಕೀಲಿ ಕಪ್ಪಿ ಮುರಿದ್ದು ಮನೆಯೊಳಗೆ ಪ್ರವೇಶ ಮಾಡಿ ಅಲೆಮಾರಿಯಲ್ಲಿಟ್ಟ ಲಾಕರ್
ನನ್ನು ಮುರಿದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬಂಗಾರದ ಮತ್ತು ಬೆಳ್ಳಿಯ
ಆಭರಣಗಳನ್ನು ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಕಳ್ಳರ ಮೇಲೆ
ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ವಗೈರೆ ಲಿಖಿತ ಅರ್ಜಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
No comments:
Post a Comment