ಕಳ್ಳತನ ಪ್ರಕರಣ:
ಮಳಖೇಡ ಠಾಣೆ:
ಇಂದು ದಿನಾಂಕ 15-10-2013 ರಂದು 3 ಪಿ.ಎಂ.ಕ್ಕೆ ಫಿರ್ಯಾದಿದಾರರು ಠಾಣೆಗೆ
ಹಾಜರಾಗಿ ಹೇಳಿಕೆ ಬರೆಸಿದ್ದು ಸಾರಾಂಶವೇನೆಂದೆರೆ ತಮ್ಮ ರಾಜಶ್ರೀ ಸಿಮೆಂಟ ಫ್ಯಾಕ್ಟ್ರಿಯ ಆರ್‌ಸಿ-4
ದ ಓಪನ ಯಾರ್ಡನಲ್ಲಿ ಆಗಸ್ಟ 2012 ರಲ್ಲಿ ವ್ಯಾಗನ ಲೋಡ್ರ ಪ್ಯಾನೆಲಗಳು ಮತ್ತು ಟ್ರಕ ಲೋಡರ
ಪ್ಯಾನೆಲಗಳು ಮತ್ತು ಪ್ಯಾಕ್ರ ಸ್ಪೌಟ ಪ್ಯಾನೆಲಗಳು ತಂದು ಇಟ್ಟಿದ್ದು ದಿನಾಂಕ 12-10-2013 ರಂದು
ಸದ್ರಿಯವುಗಳು ಅಳವಡಿಸುವ ಕುರಿತು ನೋಡಲಾಗಿ ಅದ್ರಲ್ಲಿ ಇದ್ದ ಎಂಪಿಸಿಬಿ ಎಲೆಕ್ಟ್ರಿಕಲ್
ಸಾಮಾನುಗಳು ಅ.ಕಿ 35,89,400-00 ರೂ. ನೇದ್ದವುಗಳು
ವಸ್ತುಗಳನ್ನುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾನೂನು ಕ್ರಮ ಜರುಗಿಸುವ ಕುರಿತು
ಹೇಳಿಕೆ ವಸೂಲಾಗಿದ್ದು ಸದ್ರಿ ಹೇಳಿಕೆಯ ಸಾರಾಂಶದ ಮೇಲಿಂದ ನಾನು ರವಿಕುಮಾರ ದರ್ಮಟ್ಟಿ ಪಿ.ಎಸ್.ಐ
ಮಳಖೇಡ ಠಾಣೆ ಗುನ್ನೆ ನಂ. 94/2013 ಕಲಂ 379ಐಪಿಸಿ ನೇದ್ದ್ರಲ್ಲಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನೆಲೋಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ:
ಇಂದು
ದಿನಾಂಕ: 15/10/2013 ರಂದು 08.00 ಎ ಎಮ್ ಕ್ಕೆ ನಮ್ಮ ತಮ್ಮ ಗುಂಡಪ್ಪ ಹಾಗೂ ನಮ್ಮ ಅಣ್ಣನ ಮಗ
ಸಿದ್ದಪ್ಪ ಹೊಲಕ್ಕೆ ಹೋಗುತ್ತಿದ್ದಾಗ ನಮ್ಮೂರ ಶಾಲೆಯ ಮುಂದಿನ ರಸ್ತೆಯ ಮೇಲೆ ಹೋಗುತ್ತಿದ್ದಾಗ
ಶಿವಪ್ಪ ಕಿರಣಗಿ ಇವನು ಬೋಸಡಿ ಮಕ್ಕಳು ಹ್ಯಾಂಗ ಹೋಗುತ್ತಾರೆ ನೋಡು ಯಾರದರೇ ಅಶ್ತಿ ತಿಂದು
ಹ್ಯಾಂಗ ನಡೆದಾರ ಅಂದಾಗ ಇಬ್ಬರು ಯಾಕಪ್ಪ ಯಾರ ಆಸ್ತಿ ಯಾರು ತಿಂದಾರ ಅಂತಾ ಕೇಳಿ ಇಬ್ಬರು ಬಾಯಿ
ಮಾಡುತ್ತಿದ್ದಾಗ ನಮ್ಮ ಮನೆಯಿಂದ ನಾನು ಎದ್ದು ಹೋಗಿ ಯಾಕ ಬಾಯಿ ಮಾಡುತ್ತೀರಿ ಅಂತಾ ಕೇಳಿದೇ, ಆಗ ರಾಜು ತಂದೆ ದೌಲತ್ತರಾಯ, ಮಹಾಂತಪ್ಪ ತಂದೆ
ದೌಲತ್ತರಾಯ, ಅರವಿಂದ
ತಂದೆ ಸಾಯಿಬಣ್ಣ,ಚನ್ನಪ್ಪ
ತಂದೆ ರುದ್ರಗೌಡ ಇವರೆಲ್ಲರೂ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಬೋಸಡಿ ಮಕ್ಕಳೆ ನಿಮಗೆ ನಾವೇ
ನಮ್ಮ ತಂದೆಯವರೆ ಊಟ ಮಾಡಲಿಕ್ಕ ಆಸ್ತಿ ಕೊಟ್ಟಾರ ಸೂಳೆ ಮಕ್ಕಳೆ ಅಂದವರೇ, ನನಗೆ ಶಿವಪ್ಪ ಕಿರಣಗಿ ಇವನು ಅಲ್ಲೆ ಬಿದ್ದ
ಕಲ್ಲನ್ನು ತಗೆದುಕೊಂಡು ತಲೆಯ ಮೇಲೆ ಹೊಡೆದನು. ಆಗ ರಾಜು ಚೂರಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ
ನಮ್ಮ ಗುಂಡಪ್ಪನ ಬೆನ್ನ ಮೇಲೆ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಅದೇ ಬಡಿಗೆಯಿಂದ
ನಮ್ಮ ಅಣ್ಣನ ಮಗ ಸಿದ್ದಪ್ಪ ಇವನ ಎಡಗೈ ಮೊಳಕೈ ಮೇಲೆ ಹೊಡೆದನು. ಆಗ ನಮ್ಮ ತಾಯಿ ನೀಲಮ್ಮ, ಅಣ್ಣನ ಹೆಂಡತಿ ಸರುಬಾಯಿ, ಬೌರಮ್ಮ ಇವರು ಬಿಡಿಸಲು ಬಂದರು. ಆಗ ನಮ್ಮ
ತಾಯಿಗೆ ಬಲಗಡೆ ಕಪಾಳ ಮೇಲೆ ಬಡಿಗೆಯಿಂದ ಹೊಡೆದನು. ಸರುಬಾಯಿ ಇವಳಿಗೆ ಅರವಿಂದನು ತನ್ನ
ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದನು. ಬೌರಮ್ಮ ಇವಳಿಗೆ
ಚನ್ನಪ್ಪ ಕುರನಳ್ಳಿ ಇವನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಹೊಡೆದು ಒಳ ಪೆಟ್ಟು
ಮಾಡಿದನು. ಆಗ ನಮ್ಮೂರ ಶ್ರೀಮಂತ ಸಂಗೊಂಡ ಇವನು ಬಂದು ಜಗಳ ಬಿಡಿಸಿದನು.ನಮ್ಮ ತಮ್ಮ ನಮ್ಮ ಅಣ್ಣನ
ಮಗ ಹೊಲಕ್ಕೆ ಹೋಗುವಾಗ ವೀನಾಕಾರಣ ಜಗಳ ತಗೆದು ಹೊಡೆ-ಬಡೆ ಮಾಡಿದವರ ಮೇಲೆ ಕಾನೂನಿನ ಕ್ರಮ
ಜರುಗಿಸಬೇಕೆಂದು ಹೇಳಿಬರೆಯಿಸಿದ್ದು ಅದೇ.ಇಂದು ದಿನಾಂಕ: 15/10/2013 ರಂದು 10.00 ಎ ಎಮ್ ಕ್ಕೆ
ಫಿರ್ಯಾದಿ ಹೇಳಿಕೆ ಪಡೆದುಕೊಂಡು, ಸದರ
ಹೇಳಿಕೆ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ಹಲ್ಲೆ
ಪ್ರಕರಣ:
ಶ್ರೀಮತಿ ಕವಿತಾ ಗಂಡ ಕಾಶಿನಾಥ ಸೂಜೆ ವಯ:30 ವರ್ಷ ಉ:ಹೊಲ-ಮನೆ ಕೆಲಸ ಸಾ:ಹಿರೋಳ್ಳಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ ಇಂದು ದಿನಾಂಕ:15/10/2013 ರಂದು ನನ್ನ ಮನೆಯ ಎದುರಿನ ಸ್ಥಳದಲ್ಲಿ ನನ್ನ ಬಾವನಾದ ಸೋಮನಾಥ ತಂದೆ ನಾಗೇಂದ್ರ ಸೂಜೆ ಇತನು ನನ್ನ ಮನೆ ಕಡೆ ನೀರು ಚೆಲ್ಲಾಬೇಡ ಅಂದರು ನೀರು ಚೇಲುತಿ ಅಂತಾ ನನ್ನೊಂದಿಗೆ ಜಗಳ ತಗೆದು ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿರುತ್ತಾನೆ. ನಾನು ಬಿಡಿಸಿಕೊಂಡು ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಇನ್ನೊಮೆ ನನ್ನ ಮನೆಯ ಕಡೆಗೆ ನೀರು ಚೆಲ್ಲಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿರುತ್ತಾನೆ. ಕಾರಣ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ.ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
«±Àé«zÁå®AiÀÄ ¥Éưøï oÁuÉ:
ಇಂದು ದಿನಾಂಕ: 15/10/2013 ರಂದು 12:00 ಗಂಟೆಗೆ
ಶ್ರೀ.ಉಮೇಶ ತಂದೆ ರಾಮರಾವ ಸೊಂತ, ವಯ|| 42, ಉ|| ರೇತಿ ವ್ಯಾಪಾರ, ಸಾ|| ಪ್ಲಾಟ ನಂ: 23,
ಲಕ್ಷ್ಮಿ ನಗರ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಕೊಟ್ಟಿದ್ದು ಸಾರಾಂಶವೆನೆಂದರೆ
ನಾನು ದಿನಾಂಕ: 14/10/2013 ರಂದು ಸಾಯಂಕಾಲ 5:30 ಗಂಟೆಗೆ ನಮ್ಮ ಬಾಜು ಮನೆಯ ಸೂರ್ಯಕಾಂತ
ಎ.ಆರ್.ಎಸ್.ಐ ರವರಿಗೆ ಭೇಟಿಯಾಗಿ ಊರಿಗೆ ಹೋಗಿ ತಂದೆ-ತಾಯಿಯವರಿಗೆ ಮಾತನಾಡಿ ಹೆಂಡತಿ ಮಕ್ಕಳನ್ನು
ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ನನ್ನ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಸೊಂತ ಗ್ರಾಮಕ್ಕೆ
ಹೋಗಿದ್ದು, ಇಂದು ಬೆಳಿಗ್ಗೆ 0600 ಗಂಟೆಗೆ ಸೂರ್ಯಕಾಂತ ರವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲದ
ಕೊಂಡಿ ಮುರಿದಿದ್ದು, ಕಳ್ಳತನವಾದ ಹಾಗೆ ಕಾಣಿಸುತ್ತದೆ ಬೇಗನೆ ಬರಲು ಹೇಳಿದಾಗ ನಾನು ನನ್ನ ತಮ್ಮ
ವಿರೇಶನಿಗೆ ಮನೆಯ ಕಡೆಗೆ ಹೋಗಲು ಹೇಳಿ ನಾನು ಕೂಡ ಬೆಳಿಗ್ಗೆ 0930 ಗಂಟೆಗೆ ಮನೆಗೆ ಬಂದು ನೋಡಲು
ಮನೆಯ ಬಾಗಿಲ ಕೀಲಿ ಮುರಿದಿದ್ದು, ಒಳಗಡೆ ಹೋಗಿ ನೋಡಲು ಮನೆಯ ಅಲಮಾರಿಯಲ್ಲಿ ಇದ್ದ 1) 4 ತೊಲೆಯ
ಬಂಗಾರದ ಸರ ಅ||ಕಿ|| 1,20,000/- 2) 4 ತೊಲೆ ಬಂಗಾರದ ಪಾಟ್ಲಿ ಅ||ಕಿ|| 1,20,000/-, 3)
ನಗದು ಹಣ 11,000/- ಹೀಗೆ ಒಟ್ಟು 2,51,000/- ಬೆಲೆಬಾಳುವ ಬಂಗಾರ ಮತ್ತು ನಗದು ಹಣ ಯಾರೋ
ಕಳ್ಳರು ದಿನಾಂಕ: 15/10/13 ರಂದು ರಾತ್ರಿ 12:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯ
ಅವಧಿಯಲ್ಲಿ ಕಳ್ಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ
ಬಂಗಾರ ಹಾಗೂ ಹಣ ಕೊಡಬೇಕು ಅಂತಾ ಇತ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment