ಹಲ್ಲೆ ಪ್ರಕರಣಗಳು
:
ನಿಂಬರ್ಗಾ
ಠಾಣೆ : ಶ್ರೀರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ ಸಾ|| ಕುಡಕಿ ಇವರು ದಿನಾಂಕ 18-10-2013
ರಂದು 0800 ಗಂಟೆ ಸುಮಾರಿಗೆ ತಮ್ಮೂರಿನ ರೇವಣಸಿದ್ದೇಶ್ವರ
ಗುಡಿಯ ಹಿಂದುಗಡೆ ಇರುವ ಶಿವಾನಂದ
ಸುತಾರ ಹತ್ತಿರ ಬಿತ್ತುವಕೂರಿಗೆ ತುಂಬಿಸುತ್ತಿರುವಾಗ 1) ಮಲಕಪ್ಪ
ತಂದೆ ಚಂದ್ರಶಾ ಗುಂಡಗುರ್ತಿ, 2) ಸಂತಪ್ಪ
ತಂದೆ ಚಂದ್ರಶಾ ಗುಂಡಗುರ್ತಿ, 03) ರಾಜು ತಂದೆ ಚಂದ್ರಶಾ ಗುಂಡಗುರ್ತಿ, 4) ವಿಠ್ಠಲ ತಂದೆ ಚಂದ್ರಶಾ ಗುಂಡಗುರ್ತಿ, 5) ಮಹಾಂತಪ್ಪ ತಂದೆ ಮಲಕಪ್ಪ ಗುಂಡಗುರ್ತಿ 6) ಪಿಂಟಪ್ಪ
ತಂದೆ ಮಲಕಪ್ಪ ಗುಂಡಗುರ್ತಿ 7) ಚಂದ್ರಶಾ ತಂದೆ ವಿಠೋಬಾ ಗುಂಡಗುರ್ತಿ ಸಾ|| ಎಲ್ಲರೂ ಕುಡಕಿ ಗ್ರಾಮ. ಅಲ್ಲಿಗೆ ಒಂದು ಏ ಭೋಸಡಿ ಮಗನೆ ಭೀರಲಿಂಗೇಶ್ವರ
ದೇವಸ್ಥಾನದಲ್ಲಿ ಪಾಲುಕೇಳುತ್ತಿಯಾ ಅಂತ ಬೈದು ಫಿರ್ಯಾದಿಗೆ
ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಈ ಮಗನಿಗೆ ಖಲಾಸ
ಮಾಡಿರಿ ಅಂತಾ ಬಡೆಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದಿರುತ್ತಾನೆ. ಪಿಂಟು ಇತನು ಕಲ್ಲಿನಿಂದ ಎಡಗೈ ಮುಂಗೈ ಹತ್ತಿರ ಹಾಗೂ ಅಂಗೈಗೆ ಹೊಡೆದು
ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ನಿಂಬರ್ಗಾ
ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶಾ ಗುಂಡಗುರ್ತಿ ಸಾ|| ಕುಡಕಿ ಇವರು ದಿನಾಂಕ 18-10-2013 ರಂದು 0800 ಗಂಟೆ ಸುಮಾರಿಗೆ
1) ರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ 2) ಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ, 3) ಶಿವಾನಂದ ತಂದೆ
ರಾಚಪ್ಪಾ ಗುಂಡಗುರ್ತಿ,ಸಾ|| ಎಲ್ಲರೂ ಕುಡಕಿ ಗ್ರಾಮ.ತಮ್ಮೂರಿನ ರೇವಣಸಿದ್ದೇಶ್ವರ ಗುಡಿಯ ಹಿಂದುಗಡೆ
ಇರುವ ಶಿವಾನಂದ ಸುತಾರ ಇತನ ಹತ್ತಿರ ದಿಂಡು ತುಂಬಿಸುತ್ತಿದ್ದಾಗ ಅಲ್ಲಿಗೆ ಬಂದು ಮುಂದೆ ಹೋಗದಂತೆ
ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಮಗನಾ ಬೀರಲಿಂಗೇಶ್ವರ ಹೊಲದ ಪಾಲು ನಮಗೂ ಬರ್ತಾದ ಅದಕ್ಕೆ ನೀವು ಎಷ್ಟು ಹಕ್ಕದಾರ ಇದ್ದೀರಿ ನಾವು ಅಷ್ಟೆ ಹಕ್ಕ ನಮಗೂ ಅದ ಆದರೆ ಬೆಳೆ ನೀವೆ ತಿಂತಿರಿ ನಿಮಗೆ ಸೊಕ್ಕು ಬಹಳಬಂದಾಗ ಅಂತ ಬೈದು ಮುಖಕ್ಕೆ
ಕೈಯಿಂದ ಜೋರಾಗಿ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಕಮಲಾಪೂರ
ಠಾಣೆ : ಶ್ರೀ ಪ್ರೇಮ ತಂದೆ
ಹರಿಶ್ಚಂದ್ರ ರಾಠೋಡ ಸಾಃ ಕಾಳನೂರ ತಾಂಡಾ ತಾಃಜಿಃ ಗುಲಬರ್ಗಾ ಇವರು ದಿನಾಂಕ:18-10-2013 ರಂದು
ಬೆಳಿಗ್ಗೆ 9-00 ಗಂಟೆಗೆ ನಾನು, ನನ್ನ ಪರಿಚಯದವನಾದ ಗಿರೀಶ ತಂದೆ ವಿಠಲ ಚವ್ಹಾಣ ಸಾಃ ಹಗ್ಗನೂರ ತಾಂಡಾ ಇಬ್ಬರು ಕೂಡಿಕೊಂಡು
ಗೀರಿಶ ಈತನ ಮೋಟಾರ ಸೈಕಲ ನಂ. ಕೆಎ:32, ಈಎ:6943 ನೇದ್ದರ ಮೇಲೆ ಕಲಕೋರಾ ತಾಂಡಾ ದೇವಿ ದರ್ಶನಕ್ಕೆ ಹೋಗುತ್ತಿರುವಾಗ ಜೀವಣಗಿ ಗ್ರಾಮದ
ಹತ್ತಿರ ನಮ್ಮ ಪರಿಚಯದವನಾದ ಸೋಮಶೇಖರ ತಂದೆ ನೀಲಕಂಠ ದೋಶೆಟ್ಟಿ ಸಾಃ ಬೋಳೆವಾಡ ಇವರು ನಮಗೆ ನೋಡಿ, ಕೈ ಮಾಡಿ, ನಿಲ್ಲಿಸಿ ಮಾತನಾಡಿಸಿ, ಎಲ್ಲಿಗೆ
ಹೋಗುತ್ತಿದ್ದಿರಿ ಅಂತಾ ಕೇಳಿದಕ್ಕೆ ನಾವು ಕಲಖೋರಾ ದೇವಿ ದರ್ಶನಕ್ಕೆ ಹೋಗುತ್ತಿದ್ದೇವೆ ಅಂತಾ
ತಿಳಿಸಿದ್ದಕ್ಕೆ ನನಗೆ ಕಮಲಾಪೂರ ವರೆಗೆ ಬಿಡಲು ಕೇಳಿದಕ್ಕೆ ನಾವು ನಮ್ಮ ಮೋಟಾರ ಸೈಕಲ ಮೇಲೆ
ಕೂಡಿಸಿಕೊಂಡು ಕಮಲಾಪೂರ ಕಡೆಗೆ ಹೊರಟಿದ್ದು. ನಾವು ಕುಳಿತ ಮೋಟಾರ ಸೈಕಲನ್ನು ಗೀರಿಶ ಈತನು
ಚಲಾಯಿಸುತ್ತಿದ್ದನು. ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ರೋಡಿನ ಕಮಲಾಪೂರ ಜೀವಣಗಿ ಕ್ರಾಸ
ಹತ್ತಿರ ಬರುತ್ತಿದ್ದಂತೆ ಕಮಲಾಪುರ ಕಡೆಯಿಂದ ಕ್ರೋಜರ ಜೀಪ ನಂ. ಕೆಎ:48, ಎಂ:984 ನೇದ್ದರ ಚಾಲಕ
ಕ್ರೀಷ್ಣಾ ತಂದೆ ಯಲ್ಲಪ್ಪಾ ನ್ಯಾನೂಗೌಡ ಸಾಃ ನಾಗರಾಳ ತಾಃ ಮುಧೋಳ ಜಿಃ ಬಾಗಲಕೋಟ ಈತನು ತನ್ನ
ಕ್ರೋಜರ ಜೀಪ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ
ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ಎಲ್ಲರಿಗು ರಕ್ತಗಾಯಗಳಾಗಿ ಬಾರಿಗಾಯಗಳಾಗಿರುತ್ತವೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ
ಠಾಣೆ : ದಿನಾಂಕ 17-10-2013 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಶ್ರೀ ನಾಸೀರ ತಂದೆ ಅಬ್ದುಲ ಖಾದರ, ಉಃ ಅಟೋರಿಕ್ಷಾ ನಂ. ಕೆ.ಎ 32 8360 ನೇದ್ದರ ಚಾಲಕ, ಸಾಃ ರೋಜಾ (ಬಿ) ರೋಜಾ ಠಾಣೆ ಹತ್ತಿರ ಗುಲಬರ್ಗಾ ರವರು ತನ್ನ ಅಟೊರಿಕ್ಷಾ
ನಂ.ಕೆ.ಎ 32 8360 ನೇದ್ದರಲ್ಲಿ ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಗ್ಯಾಸ್
ತುಂಬಿಸಿಕೊಂಡು ಹೋಗುವ ಸಲುವಾಗಿ ಹುಮನಾಬಾದ ರಿಂಗ ರೋಡ ಕಡೆಯಿಂದ ಲಾಹೋಟಿ ಪೆಟ್ರೊಲ್ ಬಂಕ ಕಡೆಗೆ
ಬರುತ್ತಿದ್ದಾಗ ಲಾಹೋಟಿ ಪೆಟ್ರೊಲ ಬಂಕ ಹತ್ತಿರ ಇರುವ ವ್ಹೇ ಪಾಯಿಂಟ ಎದರುಗಡೆ ಬರುತ್ತಿದ್ದಾಗ
ಕಾರ ನಂ. ಎ.ಪಿ 10 ಎ.ಜಿ 9191 ಅಂತಾ ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಕೆಳಗೆ
ಬಿದ್ದು ತಲೆಗೆ ಮತ್ತು ಕಪಾಳಕ್ಕೆ ರಕ್ತಗಾಯ ಮತ್ತು ಹಸ್ತದ ಮಣಿಕಟ್ಟಿಗೆ, ಎಡಗೈ ಭುಜಕ್ಕೆ, ಎಡಗಡೆ ಪಕ್ಕೆಗೆ
ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ
:
ರಾಘವೇಂದ್ರ ನಗರ
ಠಾಣೆ : ಶ್ರೀಮತಿ ಜ್ಯೋತಿ ಗಂಡ ರಮೇಶ ಮುನ್ನಳ್ಳಿ
ಸಾ|| ಕೈಲಾಸ ನಗರ ಇವರು ದಿನಾಂಕ 17-10-2013 ರಂದು ಸಾಯಂಕಾಲ 5.00 ಗಂಟೆಗೆ ತನ್ನ
ಗಂಡ ರಮೇಶ ಇವರು ತುಳಜಾಪೂರಕ್ಕೆ ಹೊಗಿದ್ದರಿಂದ ತಾನು 6.00 ಗಂಟೆಗೆ ಮನೆ
ಕಿಲಿ ಹಾಕಿಕೊಂಡು ಶಹಬಜಾರದಲ್ಲಿರುವ ತನ್ನ ತಾಯಿಯ ಮನೆಗೆ ಹೊಗಿದ್ದು ದಿನಾಂಕ 18-10-2013 ರಂದು ಬೆಳಿಗ್ಗೆ 9.30 ಗಂಟೆಗೆ ಬಂದು
ನೋಡಲಾಗಿ ಮನೆಯ ಬಿಗ ತೆಗೆದಿದ್ದು ಸೂಟ್‌ಕೆಸನಲ್ಲಿದ್ದ 1] 6 ಗ್ರಾಂ ಬಂಗಾರದ
ಉಂಗುರ ಅಕಿ 15000/-
2] 4 ಗ್ರಾಂ ಬಂಗಾರದ ಒಂದು ಜೋತೆ ಕಿವಿಯೋಲೆ ಅ.ಕಿ 11000 ಮತ್ತು 3] 3 ಗ್ರಾಂ ಬಂಗಾರದ
ಸಣ್ಣ ಗುಂಡುಗಳನ್ನು ದಿನಾಂಕ 17-10-2013 ರಂದು ರಾತ್ರಿ
ಯಾರೋ ಅಪರಿಚಿತ ಕಳ್ಳರು ಕಳುವುಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment